ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಅಂಗಸಂಸ್ಥೆಯಾಗಿರುವ ಮಿನಿ ಸಂಸ್ಥೆಯು ಐಷಾರಾಮಿ ಸೌಲಭ್ಯವುಳ್ಳ ಸಣ್ಣ ಕಾರುಗಳ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಮಿನಿ ಸಂಸ್ಥೆಯು ಗ್ರಾಹಕರ ಆಕರ್ಷಣೆಗಾಗಿ ಸ್ಪೆಷಲ್ ಎಡಿಷನ್ ಒಂದನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಮೂರು ಬಾಗಿಲುವುಳ್ಳ ಕೂಪರ್ ಎಸ್ ಮಾಡೆಲ್ ಪ್ರೇರಿತ ಮಿನಿ ಆಕ್ಸ್‌ಫರ್ಡ್ ಎಡಿಷನ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ವಿಶೇಷ ಡ್ರೈವ್ ಸೌಲಭ್ಯ ಹೊಂದಿರುವ ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 44.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಮಿನಿ ಸಂಸ್ಥೆಯು ಪರಿಚಯಿಸಿರುವ ಆಕ್ಸ್‌ಫರ್ಡ್ ಲಿಮಿಟೆಡ್ ಎಡಿಷನ್‌ಗಳು ಭಾರತದಲ್ಲಿ ಕೇವಲ 25 ಕಾರುಗಳು ಮಾತ್ರವೇ ಮಾರಾಟಕ್ಕೆ ಲಭ್ಯವಿದ್ದು, ಹೊಸ ಕಾರುಗಳನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಅಮೆಜಾನ್‌ನಲ್ಲಿ ಮಾತ್ರ ಲಭ್ಯ!

ಅಂದಹಾಗೆ ಮಿನಿ ಹೊಸ ಆಕ್ಸ್‌ಫರ್ಡ್ ಎಡಿಷನ್ ಕಾರುಗಳ ಖರೀದಿಗಾಗಿ ಅಮೆಜಾನ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಫರ್ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಉಡುಗೊರೆಗಳು ಸಿಗಲಿವೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಿನಿ ಆಕ್ಸ್‌ಫರ್ಡ್ ಎಡಿಷನ್‌ಗಳು ಕೇವಲ ಎರಡು ಬಣ್ಣದ ಆಯ್ಕೆಯನ್ನು ಹೊಂದಿದ್ದು, ಖರೀದಿಗೆ ಲಭ್ಯವಿರುವ 25 ಕಾರುಗಳಲ್ಲಿ 15 ಕಾರುಗಳು ಸೋಲಾರಿಸ್ ಆರೇಂಜ್ ಬಣ್ಣದಲ್ಲಿ ಮತ್ತು ಇನ್ನುಳಿದ 10 ಕಾರುಗಳು ಮಿಡ್‌ನೈಟ್ ಬ್ಲ್ಯಾಕ್ ಬಣ್ಣದಲ್ಲಿ ಖರೀದಿಗೆ ಲಭ್ಯವಿವೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಆಕ್ಸ್‌ಫರ್ಡ್ ಎಡಿಷನ್‌ಗಳು ಸೀಮಿತ ಅವಧಿಯ ಕಾರು ಮಾದರಿಯಾಗಿರುವುದರಿಂದ ಹೊಸ ಕಾರಿನ ಡಿಸೈನ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಎಲ್ಇಡಿ ಡೋರ್ ಪ್ರೋಜೆಕ್ಷನ್, ಕಾರಿನ ಹೊರ ಮತ್ತು ಒಳಭಾಗದಲ್ಲಿ ಯೂನಿನ್ ಜಾಕ್ ಡಿಸೈನ್ ಸೇರಿಸಲಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಸ್ಯಾಂಟ್ರೋ

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಹಾಗೆಯೇ ಏರೋಡೈನಾಮಿಕ್ ಕಿಟ್ ಹೊಂದಿರುವ ಆಕ್ಸ್‌ಫರ್ಡ್ ಎಡಿಷನ್ ಮಾದರಿಗಳು 17-ಇಂಚಿನ ಟ್ರ್ಯಾಕ್-ಸ್ಪೋಕ್ ಬ್ಲ್ಯಾಕ್ ಅಲಾಯ್ ಮತ್ತು ಕ್ರೋಮ್-ಪ್ಲೇಟೆಡ್ ಡಬಲ್ ಎಕ್ಸಾಸ್ಟ್, ಲೆದರ್ ಸ್ಪೋರ್ಟ್ ಸ್ಟಿರಿಂಗ್ ವೀಲ್ಹ್ ಮತ್ತು ಪನೊರೊಮಿಕ್ ಸನ್‌ರೂಫ್ ಸೌಲಭ್ಯವನ್ನು ಹೊಂದಿರಲಿವೆ.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

2.0-ಲೀಟರ್, ಫೋರ್ ಸಿಲಿಂಡರ್, ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಮಿನಿ ಆಕ್ಸ್‌ಫರ್ಡ್ ಎಡಿಷನ್‌ಗಳು 7-ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟೋನಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 189-ಬಿಎಚ್‌ಪಿ ಮತ್ತು 280-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಈ ಮೂಲಕ 6.7 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮಿ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಆಕ್ಸ್‌ಫರ್ಡ್ ಎಡಿಷನ್ ಕಾರುಗಳು, ಐಷಾರಾಮಿ ಸೌಲಭ್ಯಗಳಾದ ಎಲ್‌ಇಡಿ ಇಂಟಿರಿಯರ್, ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಪ್ರಯಾಣಿಕರ ವಿಭಾಗದ ಇನ್‌ಸ್ಟುಮೆಂಟ್ ಪ್ಯಾನೆಲ್ ಪಡೆದುಕೊಂಡಿದೆ.

MOST READ: ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಭಾರತದಲ್ಲಿ ಮಿನಿ ಸ್ಪೆಷಲ್ ಆಕ್ಸ್‌ಫರ್ಡ್ ಎಡಿಷನ್ ಕಾರು ಬಿಡುಗಡೆ

ಜೊತೆಗೆ ಸುರಕ್ಷತೆಗಾಗಿ ಆಕ್ಸ್‌ಫರ್ಡ್ ಎಡಿಷನ್‌ನಲ್ಲಿ 4 ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಕ್ರ್ಯಾಶ್ ಸೆನ್ಸಾರ್, ರನ್ ಫ್ಲ್ಯಾಟ್ ಟೈರ್ ಸೌಲಭ್ಯ ಸಹ ಇದ್ದು, ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರುವ ಈ ಕಾರುಗಳು ಈಗಾಗಲೇ ಶೇ.80ರಷ್ಟು ಮಾರಾಟವಾಗಿವೆ ಎನ್ನುವ ಮಾಹಿತಿ ಕೂಡಾ ಇದೆ.

Most Read Articles

Kannada
English summary
MINI Oxford Edition Launched In India — A Tribute To The Brand’s British Heritage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X