ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

By Praveen Sannamani

ಮಿಟ್ಸುಬಿಸಿ ಸಂಸ್ಥೆಯು ಕಳೆದ ಎರಡು ತಿಂಗಳ ಹಿಂದಷ್ಟೇ ಭಾರತದಲ್ಲಿ ಔಟ್‌ಲ್ಯಾಂಡರ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ಔಟ್‌ಲ್ಯಾಂಡರ್ ಕಾರುಗಳಲ್ಲೇ ಹೊಸ ಎಂಜಿನ್ ಮಾದರಿಯೊಂದನ್ನ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಮಿಟ್ಸುಬಿಸಿ ಸಂಸ್ಥೆಯು ಸದ್ಯ ಪೆಟ್ರೋಲ್ ಎಂಜಿನ್ ಪ್ರೇರಿತ ಔಟ್‌ಲ್ಯಾಂಡರ್ ಐಷಾರಾಮಿ ಎಸ್‌ಯುವಿಗಳನ್ನ ಮಾರಾಟ ಮಾಡುತ್ತಿದ್ದು, ಹೊಸ ಎಂಜಿನ್ ಪ್ರೇರಿತ ಔಟ್‌ಲ್ಯಾಂಡರ್ ಕಾರುಗಳು ಪೆಟ್ರೋಲ್ ಜೊತೆ ಎಲೆಕ್ಟ್ರಿಕ್ ಎಂಜಿನ್ ಸಹ ಹೊಂದಿರಲಿವೆ. ಅಂದರೇ ಇದು ಹೈಬ್ರಿಡ್ ಕಾರು ಮಾದರಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯಲಿದ್ದು, ಇದೇ ತಿಂಗಳು 20ರಂದು ಹೊಸ ಬಿಡುಗಡೆ ಮಾಡುವುದಾಗಿದೆ ಮಿಟ್ಸುಬಿಸಿ ಸಂಸ್ಥೆಯೇ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಔಟ್‌ಲ್ಯಾಂಡರ್ ಕಾರುಗಳು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಭಾರತದಲ್ಲಿ ಮಾರಾಟಗೊಳ್ಳುತ್ತಿದ್ದು, ಸದ್ಯ ಮಾರಾಟಕ್ಕಿರುವ ಪೆಟ್ರೋಲ್ ಮಾದರಿಗಳು ಮುಂಬೈ ಎಕ್ಸ್‌ಶೋರಂ ಪ್ರಕಾರ 31.54 ಲಕ್ಷ ಬೆಲೆ ಹೊಂದಿವೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಆದ್ರೆ ಹೈಬ್ರಿಡ್ ಎಂಜಿನ್ ಪ್ರೇರಿತ ಔಟ್‌ಲ್ಯಾಂಡರ್ ಕಾರುಗಳು ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿದ್ದು, ಇಂಧನ ದಕ್ಷತೆ ಮತ್ತು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯಲ್ಲಿ ಸುಧಾರಿತ ಸೌಲಭ್ಯ ಹೊಂದಿರುವುದರಿಂದ ಹೊಸ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ.38 ಲಕ್ಷದಿಂದ ರೂ.45 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

7 ಆಸನವುಳ್ಳ ಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‍‍ಯುವಿ ಕಾರುಗಳು ಸಾಮಾನ್ಯ ಕಾರುಗಳಿಂತ ಹೈಬ್ರಿಡ್ ಕಾರುಗಳು ಮತ್ತಷ್ಟು ಪ್ರಿಮಿಯಂ ಸೌಲಭ್ಯಗಳನ್ನ ಹೊಂದಿರಲಿದ್ದು, ಒಳಭಾಗದಲ್ಲಿನ ತಾಂತ್ರಿಕ ಸೌಲಭ್ಯಗಳು ಇತರೆ ಐಷಾರಾಮಿ ಕಾರುಗಳಿಂತಲೂ ಹೆಚ್ಚು ಆಕರ್ಷಣೆಯಾಗಿವೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಕಾರಿನ ಎರಡನೇ ಮತ್ತು ಮೂರನೇ ಸಾಲಿನ ಸೀಟ್‍‍ಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ವಿಸ್ತರಣೆ ಮಾಡಿಕೊಳ್ಳಬಹುದಲ್ಲದೇ ಹೆಚ್ಚುವರಿಯಾಗಿ ವಸ್ತುಗಳನ್ನು ಇರಿಸಿಕೊಳ್ಳಲು ಹಿಂದಿನ ಆಸನಗಳನ್ನ ಫೋರ್ಡ್ ಮಾಡುವ ಮೂಲಕ ವಿಶಾಲವಾದ ಜಾಗವನ್ನ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಎಂಜಿನ್ ಸಾಮರ್ಥ್ಯ

ಸದ್ಯ ಪೆಟ್ರೋಲ್ ಎಂಜಿನ್ ಆಯ್ಕೆಯ ಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‌ಯುವಿ ಕಾರುಗಳು 2.4 ಲೀಟರ್ ಎಂಐವಿಸಿ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಈ ಎಂಜಿನ್ 167-ಬಿಎಚ್‌ಪಿ ಮತ್ತು 222-ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಸಿವಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಾಗುತ್ತದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಹೀಗಾಗಿ ಹೈಬ್ರಿಡ್ ಕಾರುಗಳು ಸಾಮಾನ್ಯ ಕಾರುಗಳಿಂತ ಬಲಿಷ್ಠ ಎಂಜಿನ್ ಪಡೆಯಲಿದ್ದು, ಜೊತೆಗೆ ಎಲೆಕ್ಟ್ರಿಕ್ ಪವರ್ ಮೋಟಾರ್ ಸಹ ಕಾರಿನ ಎಂಜಿನ್ ದಕ್ಷತೆಗೆ ಸಹಕಾರಿಯಾಗಲಿದೆ. ಇದರಿಂದ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 35ರಿಂದ 40ಕಿ.ಮಿ ಲಭ್ಯವಾಗಲಿದ್ದು, ಇದರೊಂದಿಗೆ ಕಾರಿನ ಬೆಲೆಯು ಸಹ ತುಸು ದುಬಾರಿಯೇ ಆಗಿರಲಿದೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಕಾರಿನ ವೈಶಿಷ್ಟ್ಯತೆಗಳು

ಹೈಬ್ರಿಡ್ ಔಟ್‌ಲ್ಯಾಂಡರ್ ಕಾರುಗಳಲ್ಲಿ ಆಲ್ ಜೋನ್ ಕ್ಲೈಮೆಟ್ ಕಂಟ್ರೋಲರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಎಲೆಕ್ಟ್ರಿಕ್ ಸನ್‌ರೂಫ್, ಕೀ ಲೆಸ್ ಎಂಟ್ರಿ, ಆಟೋ ಹೆಡ್‌ಲೈಟ್ಸ್ ಮತ್ತು ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಬಿಎಸ್, ಆಟೋಮ್ಯಾಟಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯಗಳು ಇರಲಿವೆ.

ಭಾರತದಲ್ಲಿ ಹೊಸ ನಮೂನೆಯ ಔಟ್‌ಲ್ಯಾಂಡರ್ ಬಿಡುಗಡೆಗೆ ಸಜ್ಜಾದ ಮಿಟ್ಸುಬಿಸಿ

ಜೊತೆಗೆ ಆಪ್ ರೋಡ್ ವಿಭಾಗದಲ್ಲೂ ಕಮಾಲ್ ಮಾಡಲಿರುವ ಹೈಬ್ರಿಡ್ ಔಟ್‌ಲ್ಯಾಂಡರ್ ಕಾರುಗಳು ವಿವಿಧ ಮಾದರಿಯ 4x4 ಡ್ರೈವ್ ಟೆಕ್ನಾಲಜಿ ಆಯ್ಕೆಯನ್ನ ಸಹ ಹೊಂದಿರಲಿದ್ದು, ಇದೇ ತಿಂಗಗಳು 20ರಂದು ಬಿಡುಗಡೆಯಾಗಲಿರುವ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

Most Read Articles

Kannada
Read more on mitsubishi hybrid car suv
English summary
New Mitsubishi Outlander To Be Launched In India Soon; Details Revealed.
Story first published: Saturday, August 18, 2018, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X