ಅರೇ..ಇದು ಥಾರ್ ಅಲ್ವಾ.? ಹಾಗಿದ್ದರೆ ಈ ಕಾರ್ ಯಾವುದು.?

ಬಹುತೇಕ ಆಟೋಮೊಬೈಲ್ ಪ್ರಿಯರು ಇಂದು ಮಾಡಿಫೈ ಕ್ರೇಜ್‌ನತ್ತ ವಾಲಿಕೊಂಡಿದ್ದಾರೆ. ಅದರಲ್ಲೂ ಮಹಾನಗರಗಳಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ಬೆಳೆಯತೊಡಗಿದ್ದು, ಇದನ್ನೇ ವೃತ್ತಿಯಾಗಿ ಕೈಗೊಂಡಿರುವ ಮಾಡಿಫೈ ತಂತ್ರಜ್ಞರು ಲಭ್ಯವಿರುವ ಸಂಪನ್ಮೂಲವನ್ನೇ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಠಿಸುತ್ತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಪ್ರತಿ ಕಾರು ಪ್ರೇಮಿಗೂ ಮಾಡಿಫೈ ಕಾರಿನ ಬಗೆಗೆ ಎಲ್ಲಿಲ್ಲದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದೇ ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೆ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ. ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ಆಫ್ ರೋಡ್ ಪ್ರಿಯರಿಗಾಗಿ ಮಾಡಿಫೈ ಥಾರ್ ಸಿದ್ದಗೊಳಿಸಿರುವುದು ಭಾರೀ ಆಕರ್ಷಣೆಗೆ ಕಾರಣವಾಗಿದೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಮಾರುತಿ 800ನಿಂದ ಸಿದ್ದವಾಯ್ತು ಮಾಡಿಫೈಡ್ ಥಾರ್..!

ಹೌದು, ಮಧ್ಯಪ್ರದೇಶ ಮೂಲದ ಕಡಾರಿ ಆಟೋ ಗ್ಯಾರೆಜ್ ಎನ್ನುವ ಸಂಸ್ಥೆಯೊಂದು ಅಗ್ಗದ ಬೆಲೆಗೆ ಲಭ್ಯವಾಗುವ ಹಳೆಯ ಮಾರುತಿ 800 ಕಾರುಗಳನ್ನು ಖರೀದಿಸಿ ಮಾಡಿಫೈಡ್ ಥಾರ್ ನಿರ್ಮಾಣ ಮಾಡುತ್ತಿದ್ದು, ಮಾಡಿಫೈ ಕಾರಿನ ತಾಂತ್ರಿಕ ಅಂಶಗಳು ಕುತೂಹಲಕಾರಿಯಾಗಿವೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಮೂಲ ಕಾರಿನ ರೂಪಕ್ಕೆ ತರಲು ಮಾರುತಿ 800 ಕಾರಿನಲ್ಲಿ ಹೊರಭಾಗದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಕಾರಿನ ಚಾರ್ಸಿ ಮತ್ತು ಎಂಜಿನ್ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲಾ ಬಿಡಿಭಾಗಗಳು ಮಾಡಿಫೈ ಅಂಶವನ್ನು ಹೊಂದಿವೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಮಾಡಿಫೈ ಥಾರ್ ಕಾರಿನಲ್ಲಿ ಮೂಲ ಕಾರಿನ ಗುಣವೈಶಿಷ್ಟ್ಯತೆ ಅಳವಡಿಸುವ ಸಲುವಾಗಿ ಮಾರುತಿ 800 ಕಾರಿನ ಟಾಪ್ ಕತ್ತರಿಸಿ ಲೆದರ್ ಕೋಟ್ ಹೊದಿಸಿರುವ ಮಾಡಿಫೈ ತಂತ್ರಜ್ಞರು, ಮುಂಭಾಗದ ಬಂಪರ್ ಡಿಸೈನ್‌ನಲ್ಲೂ ಆಕರ್ಷಕ ಬದಲಾವಣೆ ತಂದಿದ್ದಾರೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಹೀಗಾಗಿ ಕಾರಿನ ಬಂಪರ್ ವಿನ್ಯಾಸವು ಮಾಡಿಫೈಡ್ ಕಾರಿನ ಖದರ್ ಹೆಚ್ಚಿಸಿದ್ದು, ಇನ್ನುಳಿದಂತೆ ಮಾಡಿಫೈ ಲೈಟಿಂಗ್ಸ್, ಆಫ್ ರೋಡ್‌ಗೆ ಬೇಕಾದಂತಹ ಟೈರ್ ಬಳಕೆ, ಕಾರಿನ ಸೈಡ್ ಪ್ರೊಫೈಲ್, ಎಕ್ಸಾಸ್ಟ್, ಸ್ಪೋರ್ಟಿ ಲೊಗೊ ಸ್ಟಿಕರ್ಸ್ ಸೇರಿದಂತೆ ಕಾರಿನ ಎಕ್ಸಾಸ್ಟ್ ಕೂಡಾ ಪ್ರಮುಖ ಆಕರ್ಷಣೆಯಾಗಿದೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಇನ್ನು ಕಾರಿನ ಒಳಭಾಗದ ಮಾಡಿಫೈಡ್ ಅಂಶಗಳ ಬಗೆಗೆ ಹೇಳುವುದಾದರೇ, ಕಾರಿನ ಸ್ಟೀರಿಂಗ್ ವೀಲ್ಹ್ ಕೂಡಾ ಮಾಡಿಫೈಡ್ ಕಾರಿನಲ್ಲಿ ಬದಲಾವಣೆ ಮಾಡಲಾಗಿದ್ದು, ಥಾರ್ ಕಾರಿನ ಒಳಾಂಗಣ ವಿನ್ಯಾಸದಂತೆ ಇಲ್ಲೂ ಕೂಡಾ ಸೀಟುಗಳ ವಿನ್ಯಾಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಮಾಡಿಫೈಡ್ ಕಾರಿನಲ್ಲಿ ಕಾರಿನ ಬಾಗಿಲುಗಳನ್ನು ತೆಗೆದುಹಾಕಲಾಗಿದ್ದು, ಜಾಲರಿ ಮಾದರಿಯ ಡೋರ್ ಬಳಕೆ ಮಾಡಿರುವುದನ್ನು ನೀವು ಚಿತ್ರದಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಮಾಡಿಫೈ ಮಾಡಿರುವ ವಿನ್ಯಾಸಗಳು ಮೂಲ ಕಾರಿನ ರೂಪ ನೀಡಲು ಎಲ್ಲಾ ಪ್ರಯತ್ನಗಳನ್ನು ಇಲ್ಲಿ ಮಾಡಲಾಗಿದೆ ಎನ್ನಬಹುದು.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಮಾಡಿಫೈಗಾಗಿ 90 ಸಾವಿರ ಖರ್ಚು..!

ಮಾರುತಿ 800 ಕಾರಿನ ಎಂಜಿನ್ ಸಹಾಯದೊಂದಿಗೆ ಅಭಿವೃದ್ಧಿಗೊಂಡಿರುವ ಈ ಮಾಡಿಫೈಡ್ ಥಾರ್ ಕಾರು ಸಿದ್ದತೆಗಾಗಿ ಬರೋಬ್ಬರಿ 90 ಸಾವಿರ ಖರ್ಚು ಮಾಡಲಾಗಿದ್ದು, ಮಾಡಿಫೈ ಡಿಸೈನ್ ಪೂರ್ಣಗೊಳಿಸಲು ಸತತ 15 ದಿನಗಳ ಕಾಲ ಇದಕ್ಕಾಗಿ ಶ್ರಮವಹಿಸಿದ್ದಾರೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಅಸಲಿಗೆ ಲೆಕ್ಕಾಚಾರ ಹಾಕಿದ್ರೆ ಕೊಟ್ಟ ದುಡ್ಡಿಗೆ ಉತ್ತಮ ಮಾಡಿಫೈ ಎನ್ನಬಹುದಾದರೂ ಹಳೆಯ ಕಾರುಗಳಲ್ಲಿ ಈ ರೀತಿಯ ಮಾಡಿಫೈ ಮಾಡಿಸುವುದು ಅಷ್ಟು ಸೂಕ್ತ ಅನ್ನಿಸುವುದಿಲ್ಲ. ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಕಡಿಮೆ ಬೆಲೆಗೆ ಲಭ್ಯವಿರುವ ಹಳೆಯ ಕಾರುಗಳಲ್ಲಿ ಯಾವುದೇ ರೀತಿಯ ಆಧುನಿಕ ಸುರಕ್ಷಾ ಸೌಲಭ್ಯಗಳು ಇಲ್ಲದಿರುವುದು ಸಹ ಮಾಡಿಫೈನಿಂದ ತೊಂದರೆ ಸಾಧ್ಯತೆಯಿದೆ ಎನ್ನಬಹುದು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಮಾಡಿಫೈ ಹಾವಳಿಯಿಂದಾಗಿ ವಾಹನ ಮಾಲೀಕರಿಗೆ ಅನುಕೂಲ ಇದೆಯೋ ಇಲ್ಲವೋ ಗೊತ್ತಿಲ್ಲಾ. ಆದ್ರೆ ಸಾರ್ವಜನಿಕರಿಗೆ ಇದರಿಂದ ಭಾರೀ ಸಮಸ್ಯೆ ಉಂಟು ಮಾಡುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಮೊನ್ನೆಯಷ್ಟೇ ವರದಿಯಾಗಿದ್ದ ಥಾರ್ ಕಾರಿನಲ್ಲಿ ರೈಲ್ವೆ ಹಾರ್ನ್ ಹಾಕಿಸಿದ್ದು ಕೂಡಾ ಭಾರೀ ಚರ್ಚೆಗೆ ಕಾರಣವಾಗಿತ್ತು.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ನಾವೆಲ್ಲಾ ಇಷ್ಟು ದಿನಗಳ ಕಾಲ ದೊಡ್ಡ ಕಾರಿನ ಚಕ್ರಗಳನ್ನೋ, ಕಾರಿನ ಮುಂಭಾಗದಲ್ಲಿ ಸ್ಪೋರ್ಟಿ ವಿನ್ಯಾಸವನ್ನೋ ಇಲ್ಲವೇ ಕಾರಿನ ಸನ್ ರೂಫ್ ಮಾಡಿಫಿಕೇಷನ್ ಮಾಡಿಸಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಮಹಾನುಭಾವ ಮಾತ್ರ ಕಾರಿಗೆ ದುಬಾರಿ ಬೆಲೆಯ ರೈಲ್ವೆ ಹಾರ್ನ್ ಬಳಕೆ ಮಾಡಿದ್ದಾನೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಹರಿಯಾಣ ಮೂಲದ ಮಹೀಂದ್ರಾ ಥಾರ್ ಕಾರು ಮಾಲೀಕನಾಗಿರುವ ಅಜಯ್ ಬೆಸ್ಲಾ ಎಂಬುವವರೇ ತಮ್ಮ ಕಾರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈಲ್ವೆ ಹಾರ್ನ್ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ಥಾರ್ ಕಾರಿಗೆ ಜೋಡಣೆ ಮಾಡಲು ಬರೋಬ್ಬರಿ 1 ಲಕ್ಷ ರೂಪಾಯಿ ತಗುಲಿದ್ದು, ಹಾರ್ನ್ ಹೊರತುಪಡಿಸಿ ಇದೇ ಕಾರಿನ ಇತರೆ ತಾಂತ್ರಿಕ ಸೌಲಭ್ಯಗಳ ಮಾಡಿಫೈಗೂ ಲಕ್ಷ ಲಕ್ಷ ಖರ್ಚು ಮಾಡಲಾಗಿದೆಯೆಂತೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಕಾರಿನ ಮುಂಭಾದಲ್ಲಿ ಜೋಡಣೆ ಮಾಡಲಾಗಿರುವ ರೈಲ್ವೆ ಹಾರ್ನ್‌‌ ಕಾರಿನ ಖದರ್ ಹೆಚ್ಚಿಸಿದ್ದು, ಇದು ಖಾಸಗಿ ವಾಹನಗಳಲ್ಲಿ ಅಳವಡಿಸಲಾದ ಗರಿಷ್ಠ ಶಬ್ದ ಸಾಮರ್ಥ್ಯದ ಹಾರ್ನ್ ಎನ್ನುವ ಖ್ಯಾತಿಗೆ ಪಡೆದಿದ್ದರೂ ಈ ರೀತಿ ಹಾಕಿಸುವುದು ಸಂಚಾರಿ ನಿಯಮಕ್ಕೆ ವಿರುದ್ದವಾಗಿದೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಇನ್ನು ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ರೈಲ್ವೆಗಳಲ್ಲಿ ಹೊರತುಪಡಿಸಿ ಇತರೆ ಯಾವುದೇ ಸಾಮಾನ್ಯ ವಾಹನಗಳಿಗೆ ಬಳಸುವಂತಿಲ್ಲ ಎನ್ನುವ ನಿಯಮವಿದ್ದರೂ, ಮಾಡಿಫೈ ನೆಪದಲ್ಲಿ ಕಾರು ಮಾಲೀಕ ಅಜಯ್ ತನ್ನ ಥಾರ್‌ಗೆ ಈ ರೀತಿ ವಿಚಿತ್ರವಾಗಿ ಮಾಡಿಫೈ ಮಾಡಿಸಿರುವುದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಹಾರ್ನ್ ಇದ್ರು ಬಳಸುವಂತಿಲ್ಲ..!

ಮೋಟಾರ್ ವೆಹಿಕಲ್ ಆಕ್ಟ್‌ಗೆ ವಿರುದ್ಧವಾಗಿರುವ ಈ ಹಾರ್ನ್ ಬಳಕೆ ವಿರುದ್ಧ ಖಡಕ್ ವಾರ್ನ್ ನೀಡಿರುವ ಟ್ರಾಫಿಕ್ ಪೊಲೀಸರು ರೈಲ್ವೆ ಹಾರ್ನ್ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಎಂದು ಸೂಚಿಸಲಾಗಿದ್ದು, ಕೇವಲ ಆಫ್ ರೋಡ್ ಚಾಲನೆಯಲ್ಲಿ ಮಾತ್ರವೇ ಹಾರ್ನ್ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾರ್ಗದರ್ಶನ ನೀಡಿದ್ದಾರೆ.

MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಇದಕ್ಕೆ ಕಾರಣ ರೈಲ್ವೆ ಹಾರ್ನ್ 120-140 ಡಿಸೆಬಲ್‌ಗಿಂತಲೂ ಹೆಚ್ಚಿನ ಶಬ್ದ ಸಾಮರ್ಥ್ಯ ಹೊಂದಿದ್ದು, ಒಂದು ವೇಳೆ ಈ ಹಾರ್ನ್ ಮಾದರಿಯನ್ನು ಸಾಮಾನ್ಯ ವಾಹನಗಳಲ್ಲಿ ಬಳಕೆ ಮಾಡಿದ್ದೆ ಆದಲ್ಲಿ ಅದು ಇತರೆ ವಾಹನ ಸವಾರರಿಗೂ ಸೇರಿದಂತೆ ಸಾಮಾನ್ಯ ಜನತೆಗೂ ಕಿರಿಕಿರಿ ಉಂಟುಮಾಡಬಲ್ಲದು.

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

ಹೀಗಾಗಿ ಥಾರ್ ಕಾರು ಮಾಲೀಕನಿಗೆ ಖಡಕ್ ವಾರ್ನ್ ಮಾಡಿರುವ ಟ್ರಾಫಿಕ್ ಪೊಲೀಸರು ಯಾವುದೇ ಕಾರಣಕ್ಕೂ ಸಾಮಾನ್ಯ ರಸ್ತೆಗಳಲ್ಲಿ ಬಳಸದಿರುವಂತೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಅನಗತ್ಯವಾಗಿ ಸಾಮಾನ್ಯ ರಸ್ತೆಗಳಲ್ಲಿ ಬಳಕೆ ಮಾಡಿದ್ದು ಕಂಡುಬಂದಿದ್ದೆ ಆದಲ್ಲಿ ಕೇಸ್ ದಾಖಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: MAGNETO 11

Most Read Articles

ಬೆಂಗಳೂರಿನ ತನೆಜಾ ಏರೋಡ್ರೋಮ್‌ನಲ್ಲಿ ನಡೆದ ವ್ರೂಮ್ ಡ್ಯಾಗ್‌ರೇಸ್ ಸ್ಪರ್ಧೆಯ ಫೋಟೋ ಗ್ಯಾಲರಿ ನೋಡಿ..!

Kannada
Read more on car modification
English summary
Maruti 800 converted to look like an off-roader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X