Just In
- 39 min ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 15 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಡಿ ಬಹುನಿರೀಕ್ಷಿತ ಆರ್ಎಸ್5 ಕೂಪೆ ಭಾರತದಲ್ಲಿ ಭರ್ಜರಿ ಬಿಡುಗಡೆ
ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಹೊಸ ಆರ್ಎಸ್5 ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್ಶೋರಂ ಪ್ರಕಾರ ರೂ. 1,10,65,000ಕ್ಕೆ ನಿಗದಿ ಪಡಿಸಲಾಗಿದೆ.
ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಹೊಸ ಆರ್ಎಸ್5 ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್ಶೋರಂ ಪ್ರಕಾರ ರೂ. 1,10,65,000ಕ್ಕೆ ನಿಗದಿ ಪಡಿಸಲಾಗಿದೆ.
ಇದೇ ವೇಳೆ ಹೊಸ ಕಾರಿನ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿರುವ ಕ್ರಿಕೆಟರ್ ವಿರಾಟ್ ಕೊಹ್ಲಿ ಕೂಡಾ ಭಾಗಿಯಾಗುವ ಮೂಲಕ ಕಾರು ಬಿಡುಗಡೆಗೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಆಡಿ ಸಂಸ್ಥೆಯು ಬಿಡುಗಡೆ ಮಾಡಿರುವ ಆರ್ಎಸ್5 ದುಬಾರಿ ಬೆಲೆಯ ಕಾರು ತನ್ನದೇ ಮತ್ತೊಂದು ಕಾರು ಮಾದರಿಯಾದ ಎ5 ಪ್ಲ್ಯಾಟ್ಫಾರ್ಮ್ ಅಡಿಯಲ್ಲೇ ಅಭಿವೃದ್ಧಿಗೊಂಡಿದ್ದು, ಸುಧಾರಿತ ಎಂಜಿನ್ ಮತ್ತು ಕಾರ್ಬನ್ ಫೈಬರ್ ರೂಫ್ ಟಾಪ್ ಬಳಕೆ ಹಿನ್ನೆಲೆಯಲ್ಲಿ ಹೊಸ ಕಾರು ಹಳೆಯ ಮಾದರಿಗಿಂತ 60 ಕೆಜಿ ತೂಕ ಕಡಿತಗೊಳಿಸಲಾಗಿದೆ.
ಹೀಗಾಗಿ ಕಾರಿನ ಎಂಜಿನ್ ಕಾರ್ಯಕ್ಷಮತೆಯಲ್ಲಿ ಗುರುತರ ಬದಲಾವಣೆ ತರಲಾಗಿದ್ದು, ಎ5 ಮಾದಿಯ ಸ್ಟ್ಯಾಂಡರ್ಡ್ ಮಾದರಿಯಲ್ಲೇ ಸ್ಪೋರ್ಟಿ ಬಂಪರ್ ಮತ್ತು ಏರ್ ಇನ್ಟೆಕರ್, ಲಾರ್ಜ್ ಫ್ರಂಟ್ ಗ್ರಿಲ್, ಮ್ಯಾಟ್ರಿಕ್ ಎಲ್ಇಡಿ ಹೆಡ್ಲ್ಯಾಂಪ್ ಮತ್ತು 19-ಇಂಚಿನ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಆಡಿ ಮಾದರಿಗಳಲ್ಲಿ ಮಧ್ಯಮ ಕ್ರಮಾಂಕ 2.9-ಲೀಟರ್ ವಿ6 ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಆರ್ಎಸ್5 ಕೂಪೆ ಕಾರುಗಳು, 444-ಬಿಎಚ್ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿವೆ.
ಈ ಮೂಲಕ ಸ್ಪೋರ್ಟಿ ಮತ್ತು ಡೈಮಾಮಿಕ್ ಡ್ರೈವ್ ಸಿಸ್ಟಂ ಹೊಂದಿರುವ ಆರ್ಎಸ್5 ಕೂಪೆ ಕಾರುಗಳು 8-ಸ್ಪೀಡ್ ಟ್ರಿಪ್ಟೊನಿಕ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಜೋಡಿಸಲಾಗಿದ್ದು, ಬೆಸ್ಟ್ ಪರ್ಫಾಮೆನ್ಸ್ ಪ್ರಿಯರಿಗಾಗಿ ಇದು ಸಹಕಾರಿಯಾಗಲಿದೆ.
ಇದರೊಂದಿಗೆ ಉತ್ತಮ ಹಾರ್ಸ್ ಪವರ್ ಉತ್ಪಾದನೆ ಮೂಲಕ ಕೇವಲ 3.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಸಾಧಿಸಬಲ್ಲ ಗುಣಹೊಂದಿರುವ ಆಡಿ ಆರ್ಎಸ್5 ಕೂಪೆ ಕಾರುಗಳು 250 ಕಿ.ಮೀ ಪ್ರತಿ ಗಂಟೆಗೆ ಟಾಪ್ ಸ್ಪೀಡ್ ತಲುಪಬಲ್ಲವು.
ಇನ್ನು ಈ ಹಿಂದಿಗಿಂತಲೂ ಎಂಜಿನ್ ವಿಭಾಗದಲ್ಲಿ ಸುಧಾರಣೆ ತರಲಾಗಿದ್ದು, ಈ ಹಿನ್ನೆಲೆ ಆರ್ಎಸ್5 ಕೂಪೆ ಕಾರುಗಳು ಪ್ರತಿ ಲೀಟರ್ಗೆ 10.8 ಕಿಮಿ ಮೈಲೇಜ್ ನೀಡಲಿವೆ ಎಂದು ಆಡಿ ಸಂಸ್ಥೆಯು ಹೇಳಿಕೊಂಡಿದೆ.
ಕಾರಿನ ಒಳವಿನ್ಯಾಸ
ಸ್ಪೋರ್ಟಿ ಲುಕ್ ಹೊಂದಿರುವ ಕಾರಿನ ಒಳವಿನ್ಯಾಸವು ಫ್ಯಾಟ್ ಬಾಟಮ್ ಸ್ಟೀರಿಂಗ್ ಚಕ್ರಗಳು, ವರ್ಚುವಲ್ ಕುಕ್ಪ್ರಿಟ್, ಸ್ಪೆಷಲ್ ಆರ್ಎಸ್ ಸ್ಕ್ರೀನ್, ಸುಧಾರಿತ ಎಂಎಂಐ ಯುನಿಟ್, ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್, ಅಲ್ಯುನಿಯಂ ಪ್ರೇರಿತ ಪೆಡಲ್ಗಳನ್ನು ಇರಿಸಲಾಗಿದೆ.
ಇದಲ್ಲದೇ ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಡಿಫ್ರೆಷಿಯಲ್ ಲಾಕ್, ಟ್ರಾಕ್ಷನ್ ಕಂಟ್ರೊಲರ್, ಪಾರ್ಕಿಂಗ್ ಅಸಿಸ್ಟಂಟ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಪಾರ್ಕಿಂಗ್ ಸಿಸ್ಟಂ ಪ್ಲಸ್ ತಂತ್ರಜ್ಞಾನ ಅಳವಡಿಸಲಾಗಿದೆ.
ಆರ್ಎಸ್5 ಕೂಪೆ ಬಗೆಗೆ ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಆಡಿ ಆರ್ಎಸ್ ಸರಣಿಯಲ್ಲಿ ಸಿದ್ದಗೊಂಡಿರುವ ಹೊಸ ಆರ್ಎಸ್5 ಕಾರುಗಳ ಹೊಸ ವಿನ್ಯಾಸ ಹಾಗೂ ಸ್ಪೋರ್ಟಿ ವೈಶಿಷ್ಟ್ಯತೆಗಳು ಗ್ರಾಹಕರನ್ನು ಸೆಳೆಯಲಿದ್ದು, ಜನಪ್ರಿಯ ಬಿಎಂಡಬ್ಲ್ಯು ಎಂ4 ಕಾರುಗಳಿಗೆ ಪೈಪೋಟಿಯನ್ನು ನೀಡುವ ನೀರಿಕ್ಷೆಯಿದೆ.