ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ ತಮ್ಮ ಹೊಸ ಟಿಟಿ ಕಾರಿನ ಫೇ‍‍ಸ್‍‍‍ಲಿಫ್ಟ್ ಮಾದರಿಯನ್ನು ಬಹಿರಂಗಗೊಳಿಸಿದ್ದು, ಹೊಸದಾದ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ.

By Rahul Ts

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ ತಮ್ಮ ಹೊಸ ಟಿಟಿ ಕಾರಿನ ಫೇ‍‍ಸ್‍‍‍ಲಿಫ್ಟ್ ಮಾದರಿಯನ್ನು ಬಹಿರಂಗಗೊಳಿಸಿದ್ದು, ಹೊಸದಾದ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಮೂರನೆಯ ತಲೆಮಾರಿನ ಆಡಿ ಟಿಟಿ ಕಾರು ತಾಂತ್ರಿಕತೆಯಲ್ಲಿ ನವೀಕರಣವನ್ನು ಪಡೆದುಕೊಂಡಿರಲಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ವಿನ್ಯಾಸದ ಪರವಾಗಿ ಆಡಿ ಟಿಟಿ ಫೇಸ್‍ಲಿಫ್ಟ್ ಕಾರು ಸಿಂಗಲ್ ಫ್ರೇಮ್ ಗ್ರಿಲ್, ಲಾರ್ಜ್ ಏರ್ ಡ್ಯಾಮ್ಸ್ ಮತ್ತು ಸೈಡ್ ಹಾಗು ಹಿಂಭಾಗದಲ್ಲಿ ಅಡ್ಡಗೆರೆಯನ್ನು ಅಳವಡಿಸಿರುವುದರಿಂದ ಕಾರು ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ. ಐಚ್ಛಿಕ ಎಸ್ ಲೈನ್ ಪ್ಯಾಕೇಜ್ ಫ್ರಂಟ್ ಸ್ಪ್ಲಿಟ್ಟರ್, ವರ್ಟಿಕಲ್ ಏರ್ ಇಂಲೆಟ್ಸ್, ಟೈಟಾನಿಯಮ್ ಬ್ಲಾಕ್ ಗ್ರಿಲ್ ಮತ್ತು ಸೈಡ್ ಸಿಲ್ಸ್ ಅನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಹೊಸ ಆಡಿ ಟಿಟಿ ಫೇಸ್‍‍‍ಲಿಫ್ಟ್ ಕಾರು ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‍‍ಲೈಟ್ಸ್ ಅನ್ನು ಆಯ್ಕೆಯಾಗಿ ಪದೆದುಕೊಳ್ಳಲಿದ್ದು, 17 ಇಂಚಿನ ಅಲಾಯ್ ವ್ಹೀಲ್ಸ್ ಮತ್ತು ಜೊತೆಗೆ 18, 19, ಹಾಗು 20 ಇಂಚಿನ ಅಲಾಯ್ ಚಕ್ರಗಳ ಮಾದರಿಯಲ್ಲಿಯು ಲಭ್ಯವಿರಲಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಆಡಿ ಟಿಟಿ ಫೇಸ್‍‍‍ಲಿಫ್ಟ್ ಕಾರು ಔಟ್‍‍ಗೋಯಿಂಗ್ ಮಾಡಲ್‍‍ಗಿಂತ ಒಳ್ಳೆಯ ಗುಣಮಟ್ಟದ ಕಿಟ್ ಅನ್ನು ಪಡೆದಿದ್ದು, ಕಾರಿನ ಬೇಸ್ ವೇರಿಯಂಟ್ ಆಡಿ ಸೆಲೆಕ್ಟ್ ಡ್ರೈವ್ ಡೈನಾಮಿಕ್ ಹ್ಯಾಂಡಲಿಂಗ್, ಮಲ್ಟಿಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ರೈನ್ ಆಂಡ್ ಲೈಟ್ ಸೆನ್ಸಾರ್, ಹೀಟೆಡ್ ಒಆರ್‍‍ವಿಎಮ್ ಮತ್ತು ಬ್ಲೂಟೂತ್‍‍ನೊಂಡಿಗೆ ಇಲ್ಯುಮಿನೇಟೆಡ್ ಯುಎಸ್‍‍ಬಿ ವೈಶಿಷ್ಟೆಯತೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಆಡಿ ಟಿಟಿ ಫೇಸ್‍‍‍ಲಿಫ್ಟ್ ಕಾರು 2 ಲೀಟರ್ 40 ಟಿಎಫ್ಎಸ್ಐ, 2 ಲೀಟರ್ 45 ಟಿಎಫ್ಎಸ್ಐ, ಮತ್ತು 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದಲಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

40 ಟಿಎಫ್ಎಸ್ಐ 194ಬಿಹೆಚ್‍‍ಪಿ, 45 ಟಿಎಫ್ಎಸ್ಐ 245ಬಿಹೆಚ್‍‍ಪಿ ಮತ್ತು ಟರ್ಬೋಚಾರ್ಜ್ಡ್ ಎಂಜಿನ್ 302ಬಿಹೆಚ್‍‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಗೇರ್‍‍ಬಾಕ್ಸ್ ವಿಚಾರದಲ್ಲಿ 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿರಲಿದೆ. ಹೊಸ ಟಿಟಿ ಫೇಸ್‍‍‍ಲಿಫ್ಟ್ ಕಾರು ಪ್ರೋಗ್ರೆಸಿವ್ ಸ್ಟೀರಿಂಗ್, 4 ಲಿಂಕ್ ರಿಯರ್ ಸಸ್ಪೆಂಷನ್, ಎಲೆಕ್ಟ್ರಾನಿಕ್ ಸ್ಟಬಿಲೈಸೇಷನ್ ಕಂಟ್ರೋಲ್ ಮತ್ತು ವ್ಹೀಲ್ ಸೆಲೆಕ್ಟೀವ್ ಟಾರ್ಕ್ ಕಂಟ್ರೋಲ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಆಡಿ ಸಂಸ್ಥೆಯು ಟಿಟಿ ಫೇಸ್‍‍ಲಿಫ್ಟ್ ಮಾದರಿಯನ್ನಲ್ಲದೆ ಟಿಟಿ ಕಾರಿನ 20ನೆಯ ವಾರ್ಷಿಕೋತ್ಸವದ ಅಂಗವಾಗಿ ಟಿಟಿ20 ಕಾರನ್ನು ಪರಿಚಯಿಸಲಿದ್ದು, 1995ರಲ್ಲಿ ಬಹಿರಂಗಗೊಂಡ ಲಿಮಿಟೆಡ್ ಎಡಿಷನ್ ಕಾರು ಮಾದರಿಯಲ್ಲಿ ಬರಲಿದೆ. ಮತ್ತು ವಿಶೇಷ ಟಿಟಿ ಕಾರು 999 ಯೂನಿಟ್ ಹಾಗು 45 ಟಿಎಫ್‍ಎಸ್‍ಐ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ಮತ್ತಷ್ಟು ವಿಶೇಷತೆಗಳೊಂದಿಗೆ ಬರಲಿದೆ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು..

ಬಹಿರಂಗಗೊಂಡ ಹೊಸ ಆಡಿ ಟಿಟಿ ಫೇಸ್‍‍ಲಿಫ್ಟ್ ಕಾರು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ತನ್ನ ಔಟ್‍‍ಗೋಯಿಂಗ್ ಮಾಡಲ್‍‍ಗಿಂತಲೂ ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಳ್ಳಲಿದೆ. ಸಂಸ್ಥೆಯು ಈ ಕಾರಿನ ಬಿಡುಗಡೆಯ ಬಗ್ಗೆ ಬೇರಾವ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದ ಕಾರಣ ಇನ್ನಷ್ಟು ಮಾಹಿತಿಗಳಿಗಾಗಿ ಕಾಯ್ದು ನೋಡಬೇಕಿದೆ.

Most Read Articles

Kannada
Read more on audi luxury cars new car
English summary
2018 Audi TT Facelift Revealed.
Story first published: Wednesday, July 25, 2018, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X