Just In
- 3 min ago ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- 3 min ago Ather: ಬೆಂಗಳೂರಿನ ಎಥರ್ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಬುಕ್ಕಿಂಗ್ ಆರಂಭ, ರೂ.999 ಪಾವತಿಸಿದರೆ ಸಾಕು!
- 56 min ago Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- 1 hr ago 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Movies "ನನಗೂ ಆರೋಗ್ಯ ತಪ್ಪಿತಲ್ಲ.. ನನ್ನ ಮಗ ಅನಾಥ ಆಗಿಬಿಟ್ಟನಲ್ಲ ಅನಿಸಿತ್ತು" : ರಾಘಣ್ಣ
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜುಗೊಂಡ ಬೆಂಟ್ಲಿ ಸಂಸ್ಥೆಯ ಮತ್ತೊಂದು ಐಷಾರಾಮಿ ಕಾರು..
ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬೆಂಟ್ಲಿ ತನ್ನ 2018ರ ಕಾಂಟಿನೆಂಟಲ್ ಜಿಟಿ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದ್ದು, ಇದೇ ತಿಂಗಳು 24 ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬೆಂಟ್ಲಿ ತನ್ನ 2018ರ ಕಾಂಟಿನೆಂಟಲ್ ಜಿಟಿ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದ್ದು, ಇದೇ ತಿಂಗಳು 24 ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹೊಸ ಕಾಂಟಿನೆಂಟಲ್ ಜಿಟಿ ಬೆಂಟ್ಲಿ ಸಂಸ್ಥೆಯ ಸ್ಪೋರ್ಟಿ ಗ್ರಾಂಡ್ ಟೂರರ್ ಕಾರ್ ಎಂಬ ಖ್ಯಾತಿಯನ್ನು ಪಡೆದಿದೆ.
ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಯ ಕಾರಾಗಿದ್ದು, 2015ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಇಎಕ್ಸ್‌ಪಿ ಕಾರಿನ ಸ್ಪೀಡ್ 6 ಪರಿಕಲ್ಪನೆಯ ಪ್ರೇರಣೆ ಪಡೆದಿದೆ ಎನ್ನಲಾಗಿದೆ.
ಇನ್ನು ಈ ಕಾರು ಸುಧಾರಿತ ತಂತ್ರಜ್ಞಾನ ಮತ್ತು ಐಷಾರಾಮಿ ಒಳ ವಿನ್ಯಾಸವನ್ನು ಪಡೆದಿದೆ ಎನ್ನಲಾಗಿದ್ದು, 2018ರ ಬೆಂಟ್ಲಿ ಜಿಟಿ ಕಾರು ಇನ್ನಿತರೆ ನಿರ್ಗಮಿತ ಕಾರುಗಳಿಗಿಂತ ವಿಭಿನ್ನವಾಗಿದ್ದು, ಉದ್ದವಾದ ಬ್ಯಾನೆಟ್ ಮತ್ತು ಲೋವರ್ಡ್ ನೋಸ್ ಜೊತೆಗೆ ಅಗಲವಾದ ವೀಲ್‍ಬೇಸ್ ಅನ್ನು ಪಡೆದಿದೆ.
ಎಂಜಿನ್ ಸಾಮರ್ಥ್ಯ
ಹೊಸ ಬೆಂಟ್ಲಿ ಜಿಟಿ ಕಾರುಗಳು 6 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ W12 ಏಂಜಿನ್ ಹೊಂದಿದ್ದು, ಇವು 635-ಬಿಹೆಚ್‍ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸುವುದಲ್ಲದೇ 8 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಣೆ ಪಡೆದಿವೆ.
ಬೆಂಟ್ಲಿ ಸಂಸ್ಥೆಯ ಈ ಹೊಸ ಎಂಜಿನ್ ಅನ್ನು ವಿಶ್ವದ ಅತ್ಯಂತ ಮುಂದುವರಿದ 12-ಸಿಲಿಂಡರ್ ಎಂಜಿನ್ ಎಂದು ಹೇಳಲಾಗುತ್ತಿದ್ದು, ಇನ್ನು ಈ ಕಾರು ಸ್ಟಾಂಡರ್ಡ್ ಡ್ರೈವ್‍ಟ್ರೈನ್ (MSB) ಫ್ಯಾಟ್‍ಫಾರ್ಮ್ ನ ಆಧರಿಸಿದ್ದು, ಹೊಸ ತಲೆಮಾರಿನ ಪೋರ್ಷೆ ಪನಾಮೆರಾ ಕಾರನ್ನು ಹಿಂದಿಕ್ಕಲಿದೆ.
ಕಾರಿನ ವೈಶಿಷ್ಟ್ಯತೆಗಳು
2018ರ ಬೆಂಟ್ಲಿ ಜಿಟಿ ಕಾರಿನ ಒಳವಿನ್ಯಾಸವು ಪ್ರೀಮಿಯಂ ಡೈಮಂಡ್ ಮತ್ತು ಡೈಮಂಡ್ ಲೆದರ್‍ನಿಂದ ಸಜ್ಜುಗೊಂಡಿದ್ದು, ವಿನೀರ್ಸ್ ಮತ್ತು ಕ್ರೋಮ್ ಡೀಟೆಲಿಂಗ್ ಅನ್ನು ಹೊಂದಿರಲಿದೆ. ಕಾರಿನ ಎಂಜಿನ್ ಆನ್ ಆದಲ್ಲಿ ಕಾರಿನ ವಿನೀರ್ ತಿರುಗಲಿದ್ದು, ನಂತರ 12.3 ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ತೋರಿಸುತ್ತದೆ.
ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಒಳಭಾಗ ಮತ್ತು ಎಂಜಿನ್ ಅನ್ನು ನವಿಕರಿಸಲಾಗಿದ್ದು, ಇದರ ಬೆಲೆಯು ಸುಮಾರು ರೂ 4 ಕೋಟಿಗಿಂತ ಹೆಚ್ಚಿರಲಿದೆ ಎಂದು ಅಂದಾಜಿಸಲಾಗುತ್ತಿದೆ. ಒಮ್ಮೆ ಈ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಲ್ಲಿ ಎಸ್ಟ್ರೋನ್ ಮಾರ್ಟಿನ್ ಡಿಬಿ11 ಮತ್ತು ರೋಲ್ಸ್ ರಾಯ್ಸ್ ವಾಯ್ಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.