ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಹೀಂದ್ರಾ ಥಾರ್ ಕಾರುಗಳು ಆಪ್ ರೋಡ್ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿದ್ದು, ಇವುಗಳಿಗೆ ಪ್ರತಿಸ್ಪರ್ಧಿಯಾಗಿ ಫೋರ್ಸ್ ನಿರ್ಮಾಣದ ಹೊಸ ಗೂರ್ಖಾ ಎಕ್ಸ್‌ಟ್ರಿಮ್ ಮಾದರಿಯು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಈ ಹಿನ್ನೆಲೆ ನಿಮ್ಮ ಡ್ರೈವ್‌‌ಸ್ಪಾರ್ಕ್ ತಂಡವು ಥಾರ್ ಮತ್ತು ಗೂರ್ಖಾ ಎಕ್ಸ್‌ಟ್ರಿಮ್ ಕಾರುಗಳ ತಾಂತ್ರಿಕ ಅಂಶಗಳ ಕುರಿತಾದ ವಿಶ್ಲೇಷಣೆ ಮಾಡಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಸದ್ಯ ಭಾರತದಲ್ಲಿ ಥಾರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಆಪ್ ರೋಡ್ ಕಾರು ಮಾದರಿಗಳು ಮಾರುಕಟ್ಟೆಯಲ್ಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದ್ದು, ಇದೇ ಉದ್ದೇಶದಿಂದ ಫೋರ್ಸ್ ಸಂಸ್ಥೆಯು ಹಲವು ಹೊಸತನಗಳೊಂದಿಗೆ ಗೂರ್ಖಾ ಎಕ್ಸ್‌ಟ್ರಿಮ್ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಹೊಸ ಕಾರು ಆಪ್ ರೋಡ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದ್ದು, ತಾಂತ್ರಿಕವಾಗಿ ಯಾವ ಕಾರು ಬೆಸ್ಟ್ ಅನ್ನುವ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಫೋರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಹೊಸ ಕಾರು ಮೂರು ಬಾಗಿಲುವುಳ್ಳ ಎಕ್ಸ್ ಪ್ಲೋರರ್ 4x4 ಮಾಡೆಲ್ ಅನ್ನು ಆಧರಿಸಿದ್ದು, ಗುಣಮಟ್ಟದ ಹೊರ ಮತ್ತು ಒಳ ವಿನ್ಯಾಸಗಳೊಂದಿಗೆ ಆಪ್ ರೋಡ್ ಪ್ರಿಯರಿಗೆ ಅತ್ಯುತ್ತಮ ಮಾದರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಮಾಹಿತಿಗಳ ಪ್ರಕಾರ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರುಗಳು ಹಾರ್ಡ್ ಟಾಪ್ ಮತ್ತು ಸಾಫ್ಟ್ ಟಾಪ್ ವೇರಿಯಂಟ್‍‍ಗಳಲ್ಲಿ ಬರಲಿದ್ದು, ಕಾರಿನ ವಿನ್ಯಾಸವು ಪ್ರಸ್ತತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಿನಂತೆ ಇರದ್ದರೂ ತಾಂತ್ರಿಕವಾಗಿ ಭಾರೀ ಬದಲಾವಣೆ ಅನ್ನು ಪಡೆದುಕೊಂಡಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಹಾಗೆಯೇ ಥಾರ್ ಕಾರುಗಳ ಸಹ ಸಾಫ್ಟ್ ಟಾಪ್ ವೆರಿಯೆಂಟ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆಪ್ ರೋಡ್ ಕೌಶಲ್ಯಕ್ಕೆ ಬೇಕಾದ ಹೆವಿ ಡ್ಯೂಟಿ ಬಂಪರ್, ಕ್ಲಾಸಿಕ್ ರೌಂಡ್ ಹೆಡ್‌ಲ್ಯಾಂಪ್, ವರ್ಟಿಕಲ್ ಸ್ಲಾಟ್ ಗ್ರಿಲ್ ಡಿಸೈನ್ ಮತ್ತು ಟು ಡೋರ್ ಲೇಔಟ್ ಪಡೆದುಕೊಂಡಿದೆ.

ಡಿಸೈನ್ ರೇಟಿಂಗ್

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್- 7/10

ಮಹೀಂದ್ರಾ ಥಾರ್- 7/10

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಎಂಜಿನ್ ಸಾಮರ್ಥ್ಯ

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್-ಬೆಂಜ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138ಬಿಹೆಚ್‍‍ಪಿ ಮತ್ತು 321ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆ ಬಳಸಲಾದ 2.2 ಲೀಟರ್ ಡೀಸೆಲ್ ಎಂಜಿನ್‍ ಇಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್ ಬೆಂಜ್ ಜಿ32 ಇಂದ ಪಡೆದ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ವಿನ್ಯಾಸದಲ್ಲಿ ಈ ಕಾರು ಮುಂಭಾಗದಲ್ಲಿ ಲೋ ರೇಂಜ್ ಟ್ರಾನ್ಸ್‌ಫರ್ ಕೇಸ್ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಪರ್ಫಾರ್ಮೆನ್ಸ್ ಅನ್ನು ಉತ್ತಮಗೊಳಿಸಲು ಸಸ್ಷೆಷನ್ ಅನ್ನು ಕೂಡಾ ಅಭಿವೃದ್ಧಿಗೊಳಿಸಲಾಗಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಇನ್ನು ಥಾರ್‌ನಲ್ಲೂ 2.5-ಲೀಟರ್ ಫೌರ್ ಸಿಲಿಂಡರ್, ಟರ್ಬೋಚಾಜ್ಡ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದ್ದು, 105ಬಿಎಚ್‌ಪಿ ಮತ್ತು 247ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಹೀಗಿದ್ದರೂ ಮಹೀಂದ್ರಾ ಥಾರ್‌ಗಳು ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರುಗಳಿಂತಲೂ ಕಡಿಮೆ ಪರ್ಫಾಮೆನ್ಸ್ ಒದಗಿಸುತ್ತಿದ್ದು, ತಾಂತ್ರಿಕವಾಗಿ ಬಲಿಷ್ಠವಾಗಿರುವ ಗೂರ್ಖಾ ಎಕ್ಸ್‌ಟ್ರಿಮ್ ಕಾರಗಳು ಕಠಿಣ ಭೂ ಪ್ರದೇಶಗಳಲ್ಲೂ ಉತ್ತಮ ಕೌಶಲ್ಯ ಪ್ರದರ್ಶನ ಮಾಡಬಲ್ಲವು.

ಪರ್ಫಾಮೆನ್ಸ್ ರೇಟಿಂಗ್

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್- 8.5/10

ಮಹೀಂದ್ರಾ ಥಾರ್- 8/10

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಸ್ಟ್ಯಾಂಡರ್ಡ್ ವೇರಿಯಂಟ್ ಕಾರಿಗೆ ಹೋಲಿಸಿದರೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಮರು ವಿನ್ಯಾಸಗೊಳಿಸಲಾದ ಸಸ್ಷೆಷನ್ ಸಹಾಯದಿಂದ ಡಿಫಾರ್ಚರ್ ಮತ್ತು ರ್‍ಯಾಂಪ್ ಬ್ರೇಕ್ ಓವರ್ ಆಂಗಲ್ ಅನ್ನು ಸುಧಾರಿಸುತ್ತದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಆಫ್ ರೋಡಿಂಗ್ ಕಾರು 205ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 550ಎಂಎಂ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದೆ. ಜೊತೆಗೆ 2,500ಕೆಜಿ ತೂಕದೊಂದಿಗೆ 63.5 ಲಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಅದೇ ರೀತಿಯಾಗಿ 200ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಥಾರ್ ಎಸ್‌ಯುವಿಗಳು ಆಪ್ ರೋಡ್ ಕೌಶಲ್ಯ ಪ್ರದರ್ಶನದಲ್ಲಿ ಫೋರ್ಸ್ ಗೂರ್ಖಾ ಎಕ್ಲ್‌ಟ್ರಿಮ್‌ಗಳಿಗೆ ಸರಿಸಮನಾಗಿದ್ದರೂ ಕಾರಿನಲ್ಲಿರುವ ತಾಂತ್ರಿಕ ಅಂಶಗಳು ಥಾರ್‌ಗಿಂತಲೂ ಉತ್ತಮವಾಗಿವೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಗೂರ್ಖಾ ಎಕ್ಸ್ ಪ್ಲೋರರ್ ಕಾರಿಗಿಂತ ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದು, ಎಕ್ಸ್ ಶೋರಂ ಪ್ರಕಾರ ಈ ಕಾರಿನ ಬೆಲೆಯು ರೂ 14 ರಿಂದ 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಇದರೊಂದಿಗೆ ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಎಂಜಿನ್ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸಿದ್ದು, ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಹೀಂದ್ರಾ ಥಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿವೆ.

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಇನ್ನು ಮಾಹಿತಿಗಳ ಪ್ರಕಾರ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಇದೇ ತಿಂಗಳು ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಡೀಲರ್‍‍ಗಳು ಈಗಾಗಲೇ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

Most Read Articles

Kannada
English summary
New Force Gurkha Xtreme Vs Mahindra Thar Comparison: Design, Specifications, Features And Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X