Just In
- 5 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 6 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 7 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 7 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಲೆಕ್ಸಸ್ ಇಎಸ್ 300ಹೆಚ್ ಸೆಡಾನ್
ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ತನ್ನ ಪ್ರಮುಖ ಕಾರುಗಳ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಲಗ್ಷುರಿ ಸೆಡಾನ್ ಆವೃತ್ತಿಯಾದ ಇಎಸ್ 300ಹೆಚ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ.
ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ತನ್ನ ಪ್ರಮುಖ ಕಾರುಗಳ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಲಗ್ಷುರಿ ಸೆಡಾನ್ ಆವೃತ್ತಿಯಾದ ಇಎಸ್ 300ಹೆಚ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ.
ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಸಿದ್ದವಾಗಿರುವ ಇಎಸ್ 300ಹೆಚ್ ಸೆಡಾನ್ ಕಾರುಗಳು ಕಳೆದ ಏಪ್ರಿಲ್ ತಿಂಗಳಿನಲ್ಲೇ ಜಾಗತಿಕ ಮಾರುಕಟ್ಟೆಯ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಂಡಿದ್ದು, ಈಗ ಭಾರತದಲ್ಲೂ ಮುಂದಿನ ಆಗಸ್ಟ್ ಹೊತ್ತಿಗೆ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಲೆಕ್ಸಸ್ ಸಂಸ್ಥೆಯು ಸಜ್ಜುಗೊಳ್ಳುತ್ತಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ 'ಆರ್ಕಿಟೆಕ್ಚರ್-ಕೆ' ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಯಾಗಿದ್ದು, ಟೊಯೊಟಾ ಸಂಸ್ಥೆಯ ಟಿಎನ್ಜಿಎ ಪ್ಯಾರ್ಟ್ಫಾರ್ಮ್ ಅಡಿಯಲ್ಲಿಯೇ ಲೆಕ್ಸಸ್ ಇಎಸ್ 300ಹೆಚ್ ಸೆಡಾನ್ ಕಾರುಗಳನ್ನು ಸಿದ್ದಗೊಳಿಸಲಾಗಿದೆ.
ಭಾರತದಲ್ಲಿ ಇತ್ತೀಚೆಗೆ ಲಗ್ಷುರಿ ಕಾರುಗಳ ಮಾರಾಟ ಸಂಖ್ಯೆ ಏರಿಕೆಯಲ್ಲಿದ್ದು, ಇದೇ ಉದ್ದೇಶದಿಂದಲೇ ಲೆಕ್ಸಸ್ ಸಂಸ್ಥೆಯು ತನ್ನ ಯಶಸ್ವಿ ಇಎಸ್ 300ಹೆಚ್ ಕಾರುಗಳನ್ನು ಬಿಡುಗಡೆ ಮಾಡುವ ಮಹತ್ವದ ಯೋಜನೆಗೆ ಗ್ರೀನ್ ಸಿಗ್ನಲ್ ತೊರಿದೆ.
ಇನ್ನು ಕಾರಿನಲ್ಲಿ ಅಳವಡಿಸಲಾಗಿರುವ ಸ್ಲಿಂಡಲ್ ಗ್ರಿಲ್ ಆಕರ್ಷಕವಾಗಿದ್ದು, ಶಾರ್ಪ್ ಲುಕ್ ಹೆಡ್ಲ್ಯಾಂಪ್, ಹಿಂಭಾಗದ ಬೂಟ್ ಸ್ಪೆಸ್ಗೆ ಹೊಂದಿಕೊಂಡಂತಿರುವ ಎಲ್ಇಡಿ ಟೈಲ್ ಲ್ಯಾಂಪ್ಗಳು, ಲೆಕ್ಸಸ್ ಲೊಗೊ ವಿನ್ಯಾಸ ಮತ್ತು ನಿಳವಾದ ಬ್ಯಾನೆಟ್ ವಿನ್ಯಾಸವು ಕಾರಿನ ಐಷಾರಾಮಿ ಗುಣಲಕ್ಷಣವನ್ನು ಹೆಚ್ಚಿಸಿದೆ.
ಹಾಗೆಯೇ ಕಾರಿನ ಒಳಭಾಗದ ವಿನ್ಯಾಸಗಳ ಕುರಿತಾಗಿ ಹೇಳುವುದಾದರೇ, ಆಧುನಿಕ ತಂತ್ರಜ್ಞಾನಗಳ ಸೌಲಭ್ಯವನ್ನು ಪಡೆದುಕೊಂಡಿರುವ ಹೊಸ ಕಾರುಗಳು 12.3-ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, ಟಚ್ ಪ್ಯಾಡ್, ಧ್ವನಿ ಗ್ರಹಣ ತಂತ್ರಜ್ಞಾನ, ಮಾರ್ಕ್ ಲೆವಿಷನ್ 19 ಸ್ಪಿಕರ್ಸ್ ಸೌಂಡ್ ಸಿಸ್ಟಂ ಪಡೆದಿದ್ದು, ಯಾವುದೋ ಐಷಾರಾಮಿ ಸೌಲಭ್ಯ ಹೊಂದಿದ ಕೊಣೆಯಲ್ಲಿ ಕುಳಿತ ಅನುಭವಾಗುತ್ತದೆ.
ಇನ್ನು ಸುಖಕರ ಪ್ರಯಾಣಕ್ಕಾಗಿ ಚಾಲಕನ ಭಾಗದ ಸೀಟುಗಳನ್ನು ಬೇಕಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೌಲಭ್ಯವಿದ್ದು, ಸುರಕ್ಷೆತೆಗಾಗಿ ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ಎಬಿಎಸ್, ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಮತ್ತು 7 ಏರ್ಬ್ಯಾಗ್ ಸೌಲಭ್ಯವಿದೆ.
ಎಂಜಿನ್ ಸಾಮರ್ಥ್ಯ
2.5-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಲೆಕ್ಸಸ್ ಇಎಸ್ 300ಹೆಚ್ ಸೆಡಾನ್ ಕಾರುಗಳು 216-ಬಿಎಚ್ಪಿ ಉತ್ಪಾದನಾ ಗುಣ ಹೊಂದಿದ್ದು, ಎಲೆಕ್ಟ್ರಿಕ್ ಮೋಟಾರ್ ಜೊತೆ ಜೊತೆಗೆ ಎಂಜಿನ್ ಸ್ಟಾರ್ಟ್ ಗುಣಲಕ್ಷಣ ಪಡೆದಿದೆ.
ಕಾರಿನ ಬೆಲೆಗಳು(ಎಕ್ಸ್ಶೋರಂ ಪ್ರಕಾರ)
ಲೆಕ್ಸಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಇಎಸ್ 300ಹೆಚ್ ಸೆಡಾನ್ ಕಾರುಗಳು ಸಿಬಿಯು ಮುಖಾಂತರ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು ಭಾರತದಲ್ಲಿ ಎಕ್ಸ್ಶೋರಂ ಪ್ರಕಾರ ರೂ. 60 ಲಕ್ಷದಿಂದ ರೂ. 65 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಲೆಕ್ಸಸ್ ಸಂಸ್ಥೆಯು ತನ್ನು ಲಗ್ಷುರಿ ಕಾರು ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹಲವು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಒಂದೊಂದೆ ಹೊಸ ಕಾರುಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ತವಕದಲ್ಲಿದೆ. ಹೀಗಾಗಿ ಇಎಸ್ 300ಹೆಚ್ ಸೆಡಾನ್ ಕಾರುಗಳು ಸದ್ಯದ ಮಾರುಕಟ್ಟೆಗೆ ಪ್ರಸ್ತುತ ಎನ್ನಿಸಲಿದ್ದು, ಬಿಎಂಡಬ್ಲ್ಯು 5-ಸೀರಿಸ್ ಮತ್ತು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ.