ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳು ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

By Praveen Sannamani

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳು ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಜೊತೆಗೆ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರುವ ನ್ಯೂ ಹೋಂಡಾ ಅಮೇಜ್ ಕಾರುಗಳು ಮುಂದಿನ ತಿಂಗಳು ಖರೀದಿಗೆ ಲಭ್ಯವಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಕಂಪ್ಯಾಕ್ಟ್ ಸೆಡಾನ್ ಮಾದರಿಗಳಾದ ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ. ಈ ಹಿನ್ನೆಲೆ ಡ್ರೈವ್‌ಸ್ಪಾರ್ಕ್ ತಂಡವು ಡಿಜೈರ್ ಮತ್ತು ಎಕ್ಸ್‌ಸೆಂಟ್‌ಗಿಂದ ಹೊಸ ಅಮೇಜ್ ಹೇಗೆ ಭಿನ್ನವಾಗಿದೆ ಎನ್ನುವುದರ ಬಗ್ಗೆ ಇಲ್ಲಿ ಚರ್ಚೆ ಮಾಡಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಕಾರಿನ ಡಿಸೈನ್‌ಗಳು

ಹೋಂಡಾ ಅಮೇಜ್ ಕಾರು ಹೋಂಡಾ ಸಿಟಿ ಕಾರಿನ ವಿನ್ಯಾಸವನ್ನೇ ಹೋಲಲಿದ್ದು, ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿವೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಸೈಡ್ ಪ್ರೊಫೈಲ್ ಕೂಡಾ ಸ್ಪೋರ್ಟ್ ಮಾದರಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಸಿ ಸೇಫ್ ಟೈಲ್ ಲೈಟ್ ಕ್ಲಸ್ಟರ್, ಕ್ರೋಮ್ ಸ್ಟ್ರೀಪ್, ಬೂಟ್ ಸ್ಪೆಸ್ ವಿಭಾಗದಲ್ಲಿನ ಬದಲಾದ ವಿನ್ಯಾಸಗಳು ಕಂಪ್ಯಾಕ್ಟ್ ಸೆಡಾನ್ ಇಷ್ಟಪಡುವ ಗ್ರಾಹಕರನ್ನು ಸೆಳೆಯಲಿವೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಮಾರುತಿ ಸುಜುಕಿ ಡಿಜೈರ್ ಸಹ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಸಂಪೂರ್ಣವಾಗಿ ಎಲ್ಇಡಿ ಲೈಟ್‌ಗಳ ವ್ಯವಸ್ಥೆ ಹೊಂದಿದೆ. ಜೊತೆಗೆ ಸುಧಾರಿತ ಬಂಪರ್, ಸ್ವಿಫ್ಟ್ ಮಾದರಿಯ ಮುಂಭಾಗದ ವಿನ್ಯಾಸ, ಫ್ರಂಟ್ ಫಾಸಿಯಾ ಜೊತೆಗೆ ಹೆಕ್ಸಾಗೊನಲ್ ಗ್ರಿಲ್ ಪಡೆದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಸೈಡ್ ಪ್ರೊಫೈಲ್‌ನಲ್ಲೂ ಔಟ್ ಗೋಯಿಂಗ್ ಮಾದರಿಯಂತೆಯೇ ವಿನ್ಯಾಸ ಪಡೆದಿರುವ ಡಿಜೈರ್ ಕಾರುಗಳು, ಹೊಸ ನಮೂನೆಯ ಅಲಾಯ್ ಚಕ್ರಗಳು, ನ್ಯೂ ಟೈಲ್ ಲೈಟ್ ಕ್ಲಸ್ಟರ್, ಕ್ರೋಮ್ ಸ್ಟ್ರೀಪ್, ಟರ್ನ್ ಇಂಡಿಕೇಟರ್ ಹೊಂದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಹ್ಯುಂಡೈ ಎಕ್ಸ್‌ಸೆಂಟ್ ಸಹ ಫ್ಯೂಡಿಕ್ ಡಿಸೈನ್ ಲಾಂಗ್ವೆಜ್ ಆಧಾರದ ಮೇಲೆ ನಿರ್ಮಾಣವಾಗಿದ್ದು, ಫ್ರಂಟ್ ಫಾಸಿಯಾ ಜೊತೆ ಕಾಸ್‌ಕ್ಲಾಡಿಂಗ್ ಗ್ರೀಲ್, ಶಾರ್ಪ್ ಹೆಡ್‌ಲ್ಯಾಂಪ್, ವಿಶೇಷ ಬಂಪರ್ ವಿನ್ಯಾಸ, ಎಲ್ಇಡಿ ಡೇ ಲೈಟ್ ರನ್ನಿಂಗ್ ಲೈಟ್ಸ್, ಫಾಗ್ ಲ್ಯಾಂಪ್ ಪಡೆದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಸೈಡ್ ಪ್ರೊಫೈಲ್ ಬಗೆಗೆ ನೋಡುವುದಾದರೇ, ಸ್ಪೋಟ್ ಶೋಲ್ಡರ್ ಲೈನ್ ಡಿಸೈನ್ ಪಡೆದಿರುವ ಎಕ್ಸ್‌ಸೆಂಟ್ ಕಾರುಗಳು ಸ್ಲಿಫ್ಟ್ ಟೈಲ್ ಲೈಟ್ ಕ್ಲಸ್ಟರ್, ಕ್ರೋಮ್ ಸ್ಟ್ರೀಪ್, ಬೂಟ್ ಮತ್ತು ಬಂಪರ್ ಮೇಲೆ ಬ್ಲ್ಯಾಕ್ ಕ್ಲಾಂಡಿಂಗ್ ಜೋಡಿಸಲಾಗಿದೆ.

ಡಿಸೈನ್ ವಿಭಾಗದ ಅಂಕಗಳು

2018ರ ಹೋಂಡಾ ಅಮೇಜ್- 8.5/10

ಮಾರುತಿ ಡಿಜೈರ್- 8/10

ಹ್ಯುಂಡೈ ಎಕ್ಸ್‌ಸೆಂಟ್- 7.5/10

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಕಾರಿನ ವೈಶಿಷ್ಟ್ಯತೆಗಳು

ಹೋಂಡಾ ಅಮೇಜ್‌ನಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಮಾರುತಿ ಡಿಜೈರ್ ಕೂಡಾ ಸ್ಮಾರ್ಟ್ ಪ್ಲೇ ಜೊತೆ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಫ್ಲ್ಯಾಟ್ ಬಟನ್, ಲೆದರ್ ವ್ಯಾರ್ಪ್ಡ್ ಸ್ಟೀರಿಂಗ್ ವೀಲ್ಹ್, ರಿಯರ್ ಆರ್ಮ್ ರೆಸ್ಟ್, ಡ್ಯುಯಲ್ ಟೋನ್ ಅಲಾಯ್ ವೀಲ್ಹ್ ವ್ಯವಸ್ಥೆ ಹೊಂದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳಲ್ಲೂ ಸಹ ಸಾಮಾನ್ಯ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಪ್ಲೇ, ಸ್ಟಾರ್ಟ್/ಸ್ಟಾಪ್ ಬಟನ್, ಎಲೆಕ್ಟ್ರಿಕ್ ಪ್ರೇರಿತ ರಿಯಯ್ ವ್ಯೂವ್ ಮಿರರ್, ಲೆದರ್ ವ್ಯಾರ್ಪ್ಡ್ ಸ್ಟೀರಿಂಗ್ ವೀಲ್ಹ್, ಅಲಾಯ್ ವೀಲ್ಹ್ ಪಡೆದಿದೆ.

ವೈಶಿಷ್ಟ್ಯತೆಯ ವಿಭಾಗದ ಅಂಕಗಳು

2018ರ ಹೋಂಡಾ ಅಮೇಜ್- 8/10

ಮಾರುತಿ ಡಿಜೈರ್- 8/10

ಹ್ಯುಂಡೈ ಎಕ್ಸ್‌ಸೆಂಟ್- 7.5/10

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಕಾರಿನ ಸುರಕ್ಷಾ ಸೌಲಭ್ಯಗಳು

ಹೋಂಡಾ ಅಮೇಜ್ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಕೀ ಲೇಸ್ ಎಂಟ್ರಿ, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ವಾರ್ನಿಂಗ್ ಸೌಲಭ್ಯ ಹೊಂದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಮಾರುತಿ ಸುಜುಕಿ ಡಿಜೈರ್ ಕಾರುಗಳು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್, ಎಬಿಎಸ್, ಇಬಿಡಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ವೈಶಿಷ್ಟ್ಯತೆ ಹೊಂದಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಹ್ಯುಂಡೈ ಎಕ್ಸ್‌ಸೆಂಟ್‌ನಲ್ಲೂ ಸಹ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಆಯ್ಕೆ ರೂಪದಲ್ಲಿ ಎಬಿಎಸ್ ಸೇರಿದಂತೆ ಗ್ರಾಹಕರ ಆದ್ಯತೆ ಮೇರೆಗೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಸುರಕ್ಷಾ ವಿಭಾಗದ ಅಂಕಗಳು

2018ರ ಹೋಂಡಾ ಅಮೇಜ್- 8/10

ಮಾರುತಿ ಡಿಜೈರ್- 8/10

ಹ್ಯುಂಡೈ ಎಕ್ಸ್‌ಸೆಂಟ್- 7/10

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಎಂಜಿನ್ ಸಾಮರ್ಥ್ಯ

ಹೋಂಡಾ ಅಮೇಜ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ 100ಬಿಹೆಚ್‍ಪಿ ಹಾಗು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಸಿವಿಟಿ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಮಾರುತಿ ಸುಜುಕಿ ಡಿಜೈರ್‌ನಲ್ಲೂ ಡೀಸೆಲ್ ಆವೃತ್ತಿಗಳಲ್ಲಿ 1.3-ಲೀಟರ್ ಎಂಜಿನ್ ಹಾಗೂ ಪೆಟ್ರೋಲ್ ಮಾದರಿಯಲ್ಲಿ 1.2-ಲೀಟರ್ ಎಂಜಿನ್ ಆಯ್ಕೆ ಇದ್ದು, ಡೀಸೆಲ್ ಮಾದರಿಯು 75 ಬಿಎಚ್‌ಪಿ ಹಾಗೂ ಪೆಟ್ರೋಲ್ ಮಾದರಿ 83 ಬಿಎಚ್‌ಪಿ ಉತ್ಪಾದಿಸುತ್ತವೆ. ಈ ಮೂಲಕ ಡಿಸೇಲ್ ಕಾರುಗಳು ಪ್ರತಿ ಲೀಟರ್‌ಗೆ 28.4 ಕಿ.ಮೀ ಹಾಗೂ ಪೆಟ್ರೋಲ್ ಕಾರುಗಳು 22 ಕಿ.ಮೀ ಮೈಲೇಜ್ ನೀಡುತ್ತವೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಇನ್ನು 1.2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳು 4-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿವೆ. ಈ ಮೂಲಕ ಡಿಸೇಲ್ ಕಾರುಗಳು ಪ್ರತಿ ಲೀಟರ್‌ಗೆ 25.4 ಕಿ.ಮೀ ಹಾಗೂ ಪೆಟ್ರೋಲ್ ಕಾರುಗಳು 20.14 ಕಿ.ಮೀ ಮೈಲೇಜ್ ನೀಡುತ್ತವೆ.

ಎಂಜಿನ್ ವಿಭಾಗದ ಅಂಕಗಳು

2018ರ ಹೋಂಡಾ ಅಮೇಜ್- 8.5/10

ಮಾರುತಿ ಡಿಜೈರ್- 8/10

ಹ್ಯುಂಡೈ ಎಕ್ಸ್‌ಸೆಂಟ್- 8/10

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಕಾರಿನ ಬೆಲೆಗಳು

ಬಿಡುಗಡೆಯಾಗಲಿರುವ ಹೊಸ ಹೋಂಡಾ ಅಮೇಜ್ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 5.5 ಲಕ್ಷದಿಂದ 9 ಲಕ್ಷ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಇನ್ನು ಕಾರು ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಡಿಜೈರ್ ಕಾರುಗಳ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.46 ಲಕ್ಷದಿಂದ ರೂ.8.57 ಲಕ್ಷ ಬೆಲೆ ಹೊಂದಿದ್ದು, ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳ ಸಹ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 5.56 ಲಕ್ಷದಿಂದ ರೂ.8.57ಲಕ್ಷಕ್ಕೆ ಖರೀದಿಸಬಹುದಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಹಾಗಾದ್ರೆ ಇವುಗಳಲ್ಲಿ ಯಾವುದು ಬೆಸ್ಟ್?

ಡಿಸೈನ್ ಮತ್ತು ಕಂಪ್ಯಾಕ್ಟ್ ಮಾದರಿಗಳಲ್ಲಿ ಹೊಸ ಅಮೇಜ್ ಬೆಸ್ಟ್ ಆಯ್ಕೆ ಎನ್ನಬಹುದಾಗಿದ್ದು, ಕೈಗೆಟುವ ಬೆಲೆ, ಉತ್ತಮ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗೆ ಡಿಜೈರ್ ಆಯ್ಕೆ ಉತ್ತಮವಾಗಿದೆ. ಇನ್ನು ಹ್ಯುಂಡೈ ಎಕ್ಸ್‌ಸೆಂಟ್ ಕೂಡಾ ಕೊಟ್ಟ ಬೆಲೆಗಳಿಗೆ ಉತ್ತಮವಾಗಿದ್ದು, ತನ್ನದೇ ವೈಶಿಷ್ಟ್ಯತೆಗಳಿಂದಾಗಿ ನಗರವಾಸಿಗಳಿಗೆ ಬೆಸ್ಟ್ ಕಾರ್ ಎನ್ನಬಹುದು.

Most Read Articles

Kannada
English summary
Honda Amaze 2018 Vs Maruti Dzire Vs Hyundai Xcent — Design, Specs, Features, Mileage & Price.
Story first published: Wednesday, April 25, 2018, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X