ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಸದ್ಯ ದೇಶಾದ್ಯಂತ ಪ್ರತಿಯೊಂದು ವಾಹನಕ್ಕೂ ಥರ್ಡ್ ಪಾರ್ಟಿ(ಮೂರನೇ ವ್ಯಕ್ತಿಯ) ವಿಮಾ ಪಾಲಿಸಿ ಕಡ್ಡಾಯವಾಗಿ ಹೊಂದಿರಬೇಕಿದ್ದು, ಅದು ಅಪಘಾತದ ಸಂದರ್ಭಗಳಲ್ಲಿ ಹಾನಿಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಸಾಕಷ್ಟು ಸಹಕಾರಿಯಾಗಿದೆ. ಅದ್ರೆ ವಿಮೆ ಕಟ್ಟಲು ಇರುವ ಸರಳ ಮಾರ್ಗಗಳಂತೆ ಪರಿಹಾರವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಈ ನಿಟ್ಟನಲ್ಲಿ ಕೆಲವು ವಿಮಾ ಸಂಸ್ಥೆಗಳು ಮಹತ್ವದ ಹೆಜ್ಜೆಯಿಟ್ಟಿವೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ವಾಹನ ವಿಮೆ ಪಾಲಿಸಿಯನ್ನು ಕಟ್ಟುವಾಗಿನ ಸುಲಭ ಮಾರ್ಗಗಳು ಪರಿಹಾರ ಪಡೆದುಕೊಳ್ಳುವಲ್ಲಿ ಇದ್ದಿದ್ದಲ್ಲಿ ದೇಶದ ಅಭಿವೃದ್ಧಿಯ ಚಿತ್ರಣವೇ ಬೇರೆ ಇರುತ್ತಿತ್ತು ಎನ್ನುವ ಮಾತುಗಳಿದ್ದು, ಸೂಕ್ತ ಸಮಯಕ್ಕೆ ಪರಿಹಾರ ಪೆದುಕೊಳ್ಳಲು ಸಾಧ್ಯವಿಲ್ಲ ಪರಿಸ್ಥಿತಿಯಲ್ಲಿ ಅದೆಷ್ಟೋ ವಾಹನ ಮಾಲೀಕರು ನಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಪ್ರಕರಣಗಳು ಧೂಳು ಹಿಡಿದಿವೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಅಂದ್ರೆ ಸೂಕ್ತ ದಾಖಲೆಗಳು ಮತ್ತು ನಿಖರ ಸಾಕ್ಷ್ಯವಿಲ್ಲದ ಹಿನ್ನೆಲೆಯಲ್ಲಿ ಥರ್ಡ್ ಪಾರ್ಟಿ ವಿಮೆ ಕ್ಲೈಮ್ ಮಾಡಿಕೊಳ್ಳುವುದು ಒಂದು ಹರಸಾಹಸವೇ ಆಗಿದ್ದು, ಇನ್ಮುಂದೆ ಈ ರೀತಿ ಕಷ್ಟ ಪಡಬೇಕಿಲ್ಲ ಎನ್ನುತ್ತಿವೆ ಬೆಂಗಳೂರು ಮೂಲದ ಕೆಲವು ವಿಮಾ ಸಂಸ್ಥೆಗಳು.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಸದ್ಯದ ಪರಿಸ್ಥಿತಿಯಲ್ಲಿ ಯಾವುದಾದರೂ ಅಪಘಾತವಾದಲ್ಲಿ ಥರ್ಡ್ ಪಾರ್ಟಿ ಕ್ಲೈಮ್ ಮಾಡಲು ಹಲವಾರು ಮಾದರಿಯ ಪರೀಕ್ಷೆಗಳನ್ನು ಎದುರಿಸಬೇಕಿದ್ದು, ಪರಿಹಾರ ಬರುವಷ್ಟರಲ್ಲಿ ಅರ್ಧದಷ್ಟು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ವಿಮಾ ಸಂಸ್ಥೆಯ ಬಳಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗ ದಾಖಲೆಗಳನ್ನು ಪರಿಶೀಲನೆ ಮಾಡುವ ವಿಮಾ ಕಂಪನಿಗಳು ತದನಂತರ ಓರ್ವ ಸರ್ವೆಯರನ್ನು ನೇಮಕಗೊಳಿಸುವುದಲ್ಲದೇ ಘಟನೆಯ ಸತ್ಯಾಸತ್ಯತೆಯನ್ನು ಪರೀಶೀಲಿಸಿ ಹಾನಿಗೊಳಗಾದ ವಾಹನವನ್ನು ಪರಿಕ್ಷೀಸಿ ರಿಪೇರಿ ಅಂದಾಜು ಲೆಕ್ಕ ಹಾಕುತ್ತಾರೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ನಂತರ ಕಾರು ವಿಮೆ ಸರ್ವೇಯರ್ ತಪಾಸಣೆ ಮಾಡಿದ ಬಳಿಕವಷ್ಟೇ ದುರಸ್ತಿ ಮಾಡಬೇಕಿದ್ದು, ಕಾರು ದುರಸ್ತಿಗೊಳಿಸಿದ ಬಳಿಕ ಅಂತಿಮವಾಗಿ ಅಂದಾಜು ಸ್ಟ್ಯಾಂಪ್ ರಶೀದಿ ಕಾರು ವಿಮಾ ಕಂಪನಿಗೆ ಸಲ್ಲಿಸಬೇಕಾಗುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಒಂದು ವೇಳೆ ನಿಮ್ಮ ವಾಹನ ಕಳವಾಗಿದ್ದಲ್ಲಿ, ವಿಮಾ ಕಂಪನಿ ಜತೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕಾಗುತ್ತದೆ. ಅಲ್ಲದೆ ಮೊದಲು ಕಾರು ನೊಂದಣಿ ಮಾಡಿದ್ದ ಆರ್‌ಸಿ ಆಫೀಸಿನಲ್ಲೂ ಪ್ರಕರಣ ದಾಖಲಿಸಬೇಕಾಗುತ್ತದೆ. ಇಷ್ಟೇಲ್ಲಾ ಪ್ರಕ್ರಿಯೆ ಮುಗಿದು ನಿಮಗೆ ಪರಿಹಾರ ಸಿಗುವಷ್ಟರಲ್ಲಿ ತಿಂಗಳು ಕಳೆದುಹೊಗಿರುತ್ತೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಇನ್ನು ಕೆಲವು ಪ್ರಕರಣಗಳಲ್ಲಿ ಯಾವುದೋ ಒಂದು ದಾಖಲೆ ಇಲ್ಲದ್ದಿದ್ದರೂ ಸಹ ವಿಮೆ ಪರಿಹಾರಕ್ಕೆ ಅಡ್ಡಿಯಾಗುವುದಲ್ಲದೇ ವಾಹನ ಮಾಲೀಕರು ಪರದಾಡಬೇಕಾಗುತ್ತೆ. ಆದ್ರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕೆಲವು ವಿಮಾ ಪಾಲಿಸಿಗಳು ಘಟನೆ ದಿನವೇ ಪರಿಹಾರ ನೀಡುವ ಬಗ್ಗೆ ಭರವಸೆ ನೀಡುತ್ತಿವೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ವಿಮಾ ಪಾಲಿಸಿಗಳನ್ನು ತುಂಬಿಸಿಕೊಳ್ಳವುಗಾಗಲೇ ಪರಿಹಾರಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಶೇಖರಣೆ ಮಾಡಿಕೊಳ್ಳು ವಿಮಾ ಸಂಸ್ಥೆಗಳು ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಪರಿಹಾರಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಿವೆ. ಹೀಗಾಗಿ ಪರಿಹಾರಕ್ಕಾಗಿ ತಿಂಗಳುಗಟ್ಟಲೇ ಕಾಯಬೇಕಾದ ಅನಿವಾರ್ಯತೆ ನಮ್ಮಲ್ಲಿ ಇಲ್ಲ ಎನ್ನುತ್ತಿವೆ ಹೊಸದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ವಿಮಾ ಸಂಸ್ಥೆಗಳು.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಒಂದು ವೇಳೆ ನೀವು ಕೂಡಾ ನಿಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಖರೀದಿಯ ಯೋಚನೆಯಲ್ಲಿದ್ದರೆ ಈ ಕುರಿತು ವಿಮಾ ಸಂಸ್ಥೆಗಳ ಬಳಿ ಮುಂಚಿತವಾಗಿಯೇ ಚರ್ಚಿಸಿ ನಂತರವಷ್ಟೇ ಪಾಲಿಸಿಗಳನ್ನು ಆಯ್ಕೆ ಮಾಡಿ. ಆದ್ರೆ ಯಾವುದೇ ಕಾರಣಕ್ಕೂ ಹಣ ಉಳಿತಾಯ ಮಾಡುವ ಭರದಲ್ಲಿ ಥರ್ಡ್ ಪಾರ್ಟಿ ವಿಮೆ ಕಟ್ಟದೆ ಇರಬೇಡಿ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೋಟಾರು ವಿಮೆ ಕಡ್ಡಾಯ ಏಕೆ? ಇದರ ಅಗತ್ಯವೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಅರಿಯಲ್ಪಡುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆ ಸಿಗಲಿದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೋಟಾರು ವಿಮೆಯ ಅಗತ್ಯವೇನು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮತ್ತೊಂದು ಕಾರಣವೆಂದರೆ ಚಾಲನೆ ಮಾಡುವಾಗ, ಈ ಕೆಳಕಂಡವರ ಸುರಕ್ಷತೆ ನೋಡುವುದು ಸಹ ನಿಮ್ಮ ಜವಾಬ್ದಾರಿಯಾಗಿರುತ್ತದೆ.

ಸಹ ಪ್ರಯಾಣಿಕರು,

ನಿಮ್ಮ ಸಹ ಚಾಲಕರು,

ಇತರ ಜನರ ಆಸ್ತಿ,

ಪಾದಚಾರಿಗಳು,

ಸ್ವತ: ನೀವೇ

MOST READ: ನಕಲಿ ನಂಬರ್ ಪ್ಲೇಟ್‍ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೋಟಾರು ವಿಮೆ!

ನಿರೀಕ್ಷಿತವಾಗಿ ಸಂಭವಿಸಬಹುದಾದ ಅಪಘಾತ ಅಥವಾ ವಾಹನ ಕಳವು ಸಂದರ್ಭದಲ್ಲಿ ಸಂಭಾವ್ಯ ಗಾಯ, ಹಾನಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ನಮ್ಮ ದೇಶದಲ್ಲಿ ನೀವು ಕಾರು ರಸ್ತೆಗಿಳಿಸುವ ಮೊದಲಾಗಿ ಮೂರನೇ ವ್ಯಕ್ತಿ ಮೋಟಾರು ವಿಮೆ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೋಟಾರು ವಿಮಾ ಪಾಲಿಸಿಗಳ ಅವಧಿಯೆಷ್ಟು?

ಲ್ಲ ಸಂದರ್ಭದಲ್ಲಿಯೂ ನಿಮ್ಮ ಕಾರಿಗೆ ರಕ್ಷಣೆ ಒದಗಿಸುವುದು ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಮೋಟಾರು ವಿಮೆ ಕರಾರು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಿರುತ್ತದೆ. ಆದ್ರೆ ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ವಾಹನ ಖರೀದಿಸುವ ಗ್ರಾಹಕರು 3 ವರ್ಷದ ವಿಮೆ(ಕಾರುಗಳಿಗೆ) ಮತ್ತು 5 ವರ್ಷದ ವಿಮೆ( ಬೈಕ್‌ಗಳಿಗೆ) ಹೊಂದಿರಬೇಕಿದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ವಿಮೆಯ ಕಂತಿನ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಎಂಜಿನ್ ಘನ ಸಾಮರ್ಥ್ಯ (cubic capacity),

ವಾಹನದ ವಯಸ್ಸು,

ಭೌಗೋಳಿಕ ವಲಯ,

ಮಾದರಿ ವಿಧ,

ಮೆ ಮೌಲ್ಯ (Insured declared value)

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೂರನೇ ವ್ಯಕ್ತಿಯ ವಾಹನ ವಿಮೆ ಅಪಾಯ ನೀತಿ ಎಂದರೇನು?

ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ.

MOST READ: ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಮೂರನೇ ವ್ಯಕ್ತಿ ವಿಮೆಯು ಕೆಳಗಿನ ನಷ್ಟಗಳನ್ನು ಒಳಗೊಳ್ಳುತ್ತದೆ.!

ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮೆಯೂ ಮೂರನೇ ವ್ಯಕ್ತಿಯ ಆಸ್ತಿಯ ಯಾವುದೇ ನಷ್ಟ ಸಂಭವಿಸಿದ್ದಲ್ಲಿ ಖಾಸಗಿ ಕಾರಿಗೆ 7.5 ಲಕ್ಷ ರು. ಹಾಗೂ ದ್ವಿಚಕ್ರವಾಗಿದ್ದಲ್ಲಿ ರು. 1 ಲಕ್ಷದ ವರಗೆ ರಕ್ಷಣೆಯನ್ನು ಒದಗಿಸುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

ಜೊತಗೆ ಸಮಗ್ರ ವಿಮೆಯಲ್ಲಿ ಮ್ಯೂಸಿಕ್ ಸಿಸ್ಟಂ, ಎಸಿ ಮುಂತಾದ ಕಾರು ಆಕ್ಸೆಸರಿಗಳಿಗೂ ವಿಮೆ ದೊರಕುತ್ತವೆ. ಇದಕ್ಕಾಗಿ ಹೆಚ್ಚುವರಿ ವಿಮೆ ಭರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದು ದುಬಾರಿ ಎನಿಸಿಕೊಂಡರೂ ಸಮಗ್ರ ವಿಮೆ ಮಾಡಿಸಿದರೆ ಉತ್ತಮ.

Most Read Articles

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಹೊಚ್ಚ ಹೊಸ ಅಲ್ಟುರಾಸ್ ಜಿ4 ಕಾರಿನ ಫೋಟೋ ಗ್ಯಾಲರಿ..!

Kannada
English summary
New insurance will save time on claiming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X