ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ತನ್ನ ಪ್ರಮುಖ ಕಾರುಗಳ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಇದೀಗ ಸಂಸ್ಥೆಯು ಲಗ್ಷುರಿ ಸೆಡಾನ್ ಆವೃತ್ತಿಯಾದ ಇಎಸ್ 300ಹೆಚ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59.

By Rahul Ts

ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ತನ್ನ ಪ್ರಮುಖ ಕಾರುಗಳ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಇದೀಗ ಸಂಸ್ಥೆಯು ಲಗ್ಷುರಿ ಸೆಡಾನ್ ಆವೃತ್ತಿಯಾದ ಇಎಸ್ 300ಹೆಚ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59.13 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಜಾಗತಿಕ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ 'ಆರ್ಕಿಟೆಕ್ಚರ್-ಕೆ' ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಯಾಗಿದ್ದು, ಟೊಯೊಟಾ ಸಂಸ್ಥೆಯ ಟಿಎನ್‌ಜಿಎ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿಯೇ ಲೆಕ್ಸಸ್ ಇಎಸ್ 300ಹೆಚ್ ಸೆಡಾನ್ ಕಾರುಗಳನ್ನು ಸಿದ್ದಗೊಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಭಾರತದಲ್ಲಿ ಇತ್ತೀಚೆಗೆ ಲಗ್ಷುರಿ ಕಾರುಗಳ ಮಾರಾಟ ಸಂಖ್ಯೆ ಏರಿಕೆಯಲ್ಲಿದ್ದು, ಇದೇ ಉದ್ದೇಶದಿಂದಲೇ ಲೆಕ್ಸಸ್ ಸಂಸ್ಥೆಯು ತನ್ನ ಯಶಸ್ವಿ ಇಎಸ್ 300ಹೆಚ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಇನ್ನು ಕಾರಿನಲ್ಲಿ ಅಳವಡಿಸಲಾಗಿರುವ ಸ್ಲಿಂಡಲ್ ಗ್ರಿಲ್ ಆಕರ್ಷಕವಾಗಿದ್ದು, ಶಾರ್ಪ್ ಲುಕ್ ಹೆಡ್‌ಲ್ಯಾಂಪ್, ಹಿಂಭಾಗದ ಬೂಟ್ ಸ್ಪೆಸ್‌ಗೆ ಹೊಂದಿಕೊಂಡಂತಿರುವ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಲೆಕ್ಸಸ್ ಲೊಗೊ ವಿನ್ಯಾಸ ಮತ್ತು ನಿಳವಾದ ಬ್ಯಾನೆಟ್ ವಿನ್ಯಾಸವು ಕಾರಿನ ಐಷಾರಾಮಿ ಗುಣಲಕ್ಷಣವನ್ನು ಹೆಚ್ಚಿಸಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸಗಳ ಕುರಿತಾಗಿ ಹೇಳುವುದಾದರೇ, ಆಧುನಿಕ ತಂತ್ರಜ್ಞಾನಗಳ ಸೌಲಭ್ಯವನ್ನು ಪಡೆದುಕೊಂಡಿರುವ ಹೊಸ ಕಾರುಗಳು 12.3-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಚ್ ಪ್ಯಾಡ್, ಧ್ವನಿ ಗ್ರಹಣ ತಂತ್ರಜ್ಞಾನ, ಮಾರ್ಕ್ ಲೆವಿಷನ್ 19 ಸ್ಪಿಕರ್ಸ್ ಸೌಂಡ್ ಸಿಸ್ಟಂ ಪಡೆದಿದ್ದು, ಯಾವುದೋ ಐಷಾರಾಮಿ ಸೌಲಭ್ಯ ಹೊಂದಿದ ಕೊಣೆಯಲ್ಲಿ ಕುಳಿತ ಅನುಭವಾಗುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಇನ್ನು ಸುಖಕರ ಪ್ರಯಾಣಕ್ಕಾಗಿ ಚಾಲಕನ ಭಾಗದ ಸೀಟುಗಳನ್ನು ಬೇಕಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೌಲಭ್ಯವಿದ್ದು, ಸುರಕ್ಷೆತೆಗಾಗಿ ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ಎಬಿಎಸ್, ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಮತ್ತು 7 ಏರ್‌ಬ್ಯಾಗ್ ಸೌಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಎಂಜಿನ್ ಸಾಮರ್ಥ್ಯ

2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಲೆಕ್ಸಸ್ ಇಎಸ್ 300ಹೆಚ್ ಸೆಡಾನ್ ಕಾರುಗಳು 216-ಬಿಎಚ್‌ಪಿ ಉತ್ಪಾದನಾ ಗುಣ ಹೊಂದಿದ್ದು, ಎಲೆಕ್ಟ್ರಿಕ್ ಮೋಟಾರ್ ಜೊತೆ ಜೊತೆಗೆ ಎಂಜಿನ್ ಸ್ಟಾರ್ಟ್ ಗುಣಲಕ್ಷಣ ಪಡೆದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಲೆಕ್ಸಸ್ ಇಎಸ್ 300ಹೆಚ್ ಕಾರು..

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಲೆಕ್ಸಸ್ ಸಂಸ್ಥೆಯು ತನ್ನು ಲಗ್ಷುರಿ ಕಾರು ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹಲವು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಒಂದೊಂದೆ ಹೊಸ ಕಾರುಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ತವಕದಲ್ಲಿದೆ. ಹೀಗಾಗಿ ಇಎಸ್ 300ಹೆಚ್ ಸೆಡಾನ್ ಕಾರನ್ನು ಪರಿಚಯಿಸಿದ್ದು, ಬಿಎಂಡಬ್ಲ್ಯು 5-ಸೀರಿಸ್ ಮತ್ತು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ.

Most Read Articles

Kannada
English summary
Lexus ES 300h Launched In India.
Story first published: Thursday, July 19, 2018, 19:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X