ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ ಕಾರುಗಳ ಸರಣಿಯಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದ ಮಹಿಂದ್ರಾ ಸಂಸ್ಥೆಯು ಇದೀಗ ಎಕ್ಸ್ ಯುವಿ500 ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

By Rahul Ts

ರಿಫ್ರೆಷ್ಡ್ ವರ್ಷನ್ ಆದ ಹೊಸ ಎಕ್ಸ್ ಯುವಿ500 ಕಾರು ಹಲವಾರು ವೈಶಿಷ್ಟ್ಯತೆ ಮತ್ತು ಹೊಸ ಎಂಜಿನ್ ಸಾಮರ್ಥ್ಯವನ್ನು ಪಡೆದಿದ್ದು. ಜೊತೆಗೆ ನವಿಕರಿಸಲಾಗಿರುವ ಫ್ರಂಟ್ ಬಂಪರ್ ಮತ್ತು ಗ್ರಿಲ್, ಎಲ್ಇಡಿ ಡಿಆರ್‍ಎಲ್, ರೀಸ್ಟೈಲ್ ಟೈಲ್‍ಲ್ಯಾಂಪ್ ಮತ್ತು ಅಲಾಯ್ ವೀಲ್‍‍ಗಳನ್ನು ಪಡೆದಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಸಂಸ್ಥೆಯು ಹೊಸದಾಗಿ ಪರಿಚಯಿಸುತ್ತಿರುವ 2.2-ಲೀಟರ್ ಡೀಸೆಲ್ ಎಂಜಿನ್‍ ಅನ್ನು ಇದರಲ್ಲಿ ಬಳಸಲಾಗಿದ್ದು, 170 ಬಿಹೆಚ್ ಪಿ ನೀಡುವ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ಕಾರಿನ ವೈಶಿಷ್ಟ್ಯತೆಗಳು

ಹೊಸ ಮಹಿಂದ್ರಾ ಎಕ್ಸ್ ಯುವಿ 500 ಕಾರು ಆಂಡ್ರಾಯ್ಡ್ ಆಟೋ, ಕನೆಕ್ಟೆಡ್ ಆಪ್ಸ್ ಮತ್ತು ಇಕೋಸೀನ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದಿದ್ದು, ದೂರದ ಪ್ರಯಾಣವನ್ನು ಮತ್ತಷ್ಟು ಅರಾಮದಾಯಕಗೊಳಿಸಲಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ಇದಲ್ಲದೇ ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಲೆದರ್ ಸೀಟಿಂಗ್ ಮತ್ತು ನವಿಕರಿಸಲಾಗಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500 ಮಾದರಿಗಿಂತಲೂ ಸಾಕಷ್ಟು ನವೀಕರಣಗೊಂಡಿದೆ ಎನ್ನಬಹುದು.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ಇನ್ನು ಬಿಡುಗಡೆಗೊಳ್ಳುತ್ತಿರುವ ಎಕ್ಸ್ ಯುವಿ500 ಫೇಸ್‌ಲಿಫ್ಟ್ ಕಾರುಗಳು ರೆನಾಲ್ಟ್ ಕ್ಯಾಪ್ಟರ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಮುಂದಿನ ತಿಂಗಳು ಏಪ್ರಿಲ್‍ನಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ.?

ಮಹೀಂದ್ರಾ ಸಂಸ್ಥೆಯು ಈ ಕಾರನ್ನು ತಮ್ಮ ಮಾರಾಟದ ಶ್ರೇಣಿಯನ್ನು ಹೆಚ್ಚಿಸಲು ಬಿಡುಗಡೆ ಮಾಡಲಿದ್ದು, ಸಂಸ್ಥೆಯು ಈ ಕಾರಿನ ಬೆಲೆ ಹಾಗು ಎಷ್ಟು ಮಾದರಿಗಳಲ್ಲಿ ಈ ಕಾರುಗಳು ಲಭ್ಯವಿರಲಿದೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ..

Most Read Articles

Kannada
Read more on mahindra
English summary
New Mahindra XUV500 To Launch in April 2018.
Story first published: Monday, March 19, 2018, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X