ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಮಾರುತಿ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳ ಮಾರಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ಫೇಸ್‌ಲಿಫ್ಟ್ ಕಾರುಗಳಲ್ಲಿ ಅಳವಡಿಸಲಾಗಿರುವ ಹೊಸ ಸುರಕ್ಷಾ ಸೌಲಭ್ಯಗಳ ಬಗೆಗೆ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ.

By Praveen Sannamani

ಇದೇ ತಿಂಗಳು 20ರಂದು ಬಿಡುಗಡೆಯಾಗಲಿರುವ ಮಾರುತಿ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳ ಮಾರಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ಫೇಸ್‌ಲಿಫ್ಟ್ ಕಾರುಗಳಲ್ಲಿ ಅಳವಡಿಸಲಾಗಿರುವ ಹೊಸ ಸುರಕ್ಷಾ ಸೌಲಭ್ಯಗಳ ಬಗೆಗೆ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಕಾರುಗಳ ಖರೀದಿಗಾಗಿ ಈಗಾಗಲೇ ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದು, ಇದಕ್ಕಾಗಿಯೇ ನೆಕ್ಸಾ ಡೀಲರ್‍‍ಗಳು ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದ್ದಾರೆ. ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಹಳೆಯ ಮಾದರಿಗಿಂತ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಹೋಂಡಾ ಸಿಟಿ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಹೊಸದಾಗಿ ಬಿಡುಗಡೆಗೊಳ್ಳಲಿರುವ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳು ತನ್ನ ಹಳೆಯ ಮಾದರಿಯಂತೆಯೇ ನೆಕ್ಸಾ ಬ್ಲೂ, ಮೆಟಾಲಿಕ್ ಪ್ರೀಮಿಯಂ ಸಿಲ್ವರ್, ಪರ್ಲ್ ಮಿಡ್‍‍ನೈಟ್ ಬ್ಲಾಕ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಪರ್ಲ್ ಸಂಗ್ರಿಯಾ ರೆಡ್ ಮತ್ತು ಪರ್ಲ್ ಸ್ನೋ ವೈಟ್ ಎಂಬ 7 ಬಣ್ಣಗಳಲ್ಲಿ ದೊರೆಯಲಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಹಾಗೆಯೇ ಗ್ರಾಹಕರು ಸಿಯಾಜ್ ಫೇಸ್‍‍ಲಿಫ್ಟ್ ಕಾರಿನೊಡನೆ ಸುಜುಕಿ ಕನೆಕ್ಟ್ ಆ್ಯಪ್ ಅನ್ನು ಸಹ ಪಡೆದುಕೊಳ್ಳಬಹುದಾಗಿದ್ದು, ಈ ಆಪ್ ನಿಮಗೆ ವಹಿಕಲ್ ಟ್ರ್ಯಾಕಿಂಗ್, ಡ್ರೈವಿಂಗ್ ಬಿಹೇವಿಯರ್ ಅನಾಲಸಿಸ್, ಲೈವ್ ವೆಹಿಹಕಲ್ ಸ್ಟೆಟಸ್ ಮತ್ತು ಇನ್ನಿತರೆ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಈ ಮೂಲಕ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರು ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಲಾಗಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ವರ್ಷನ್‌ಗಳು 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, ಡೀಸೆಲ್ ವರ್ಷನ್‌ಗಳಲ್ಲಿ 1.3-ಲೀಟರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಪಡೆದಿವೆ. ಇವುಗಳಲ್ಲಿ ಪೆಟ್ರೋಲ್ ಕಾರುಗಳು 91-ಬಿಎಚ್‌ಪಿ, 130-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಕಾರುಗಳು 89-ಬಿಎಚ್‌ಪಿ, 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಸದ್ಯ ಖರೀದಿಗಿರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಭರ್ತಿ ಮಾಡಲಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಸುರಕ್ಷಾ ಸೌಲಭ್ಯಗಳು

ಈ ಹಿಂದಿನ ಮಾದರಿಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿದ ಸಿಯಾಜ್ ಕಾರುಗಳು ಫೇಸ್‌ಲಿಫ್ಟ್ ಆವೃತ್ತಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡಿರಲಿದ್ದು, ಎಬಿಎಸ್ ಮತ್ತು ಸ್ಪೀಡ್ ವಾರ್ನಿಂಗ್ ಮಾನಿಟರ್ ಇದರಲ್ಲಿದೆ. ಇದು ಗಂಟೆಗೆ 120 ಕಿ.ಮಿಗಿಂತ ಹೆಚ್ಚು ಚಾಲನೆ ಮಾಡುವಾಗ ಬಿಫ್ ಸೌಂಡ್ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಇನ್ನು ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್‍ ಮಾರ್ಕೆಟ್ ಡ್ಯಾಶ್‍‍ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್‍ರೂಫ್, ಅಡಿಷನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.

ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬರಲಿದೆ ಸಿಯಾಜ್ ಫೇಸ್‌ಲಿಫ್ಟ್

ಒಟ್ಟಿನಲ್ಲಿ ಹಲವು ಹೊಸ ಸೌಲಭ್ಯವನ್ನು ಹೊತ್ತು ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಹೊಸ ಸಿಯಾಜ್ ಕಾರುಗಳ ಮತ್ತಷ್ಟು ಮಾಹಿತಿಯನ್ನು ಅಗಸ್ಟ್ 20ರಂದು ನಿಮ್ಮ ಡ್ರೈವ್‌ಸ್ಪಾರ್ಕ್ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ಸ್ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Most Read Articles

Kannada
Read more on maruti suzuki sedan
English summary
2018 Maruti Ciaz Facelift To Get More Safety Features.
Story first published: Saturday, August 18, 2018, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X