Just In
- 32 min ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 1 hr ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 2 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 2 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿಯೆ ತಯಾರಾಗುತ್ತಿದೆ ಮಾರುತಿ ಸುಜುಕಿ ಎರ್ಟಿಗಾ ಕಾರು
ಈಗಾಗಲೆ ನಾವು ಮಾರುತಿ ಸುಜುಕಿ ಎರ್ಟಿಗಾ ಕಾರು ನವೆಂಬರ್ 21,2018ರಂದು ಬಿಡುಗಡೆಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಎರ್ಟಿಗಾ ಕಾರು ಭಾರತದಲ್ಲಿಯೆ ಉತ್ಪಾದನೆಯಾಗುವ ಸುಳಿವು ಸಿಕ್ಕುದ್ದು, ಪ್ರತೀ ದಿನ ಸುಮಾರು 100 ಕಾರುಗಳು ಉತ್ಪಾದನೆಯಾಗಲಿದೆ.
ಇನ್ನು ಹೊಸದಾಗಿ ಬಿಡುಗಡೆಯಾಗಲಿರುವ ಹಾಗು ಎಂಪಿವಿ ಕಾರು ಪ್ರಿಯರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಮುಂದಿನ ತಿಂಗಳು ಶುರು ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಏಕೈಕ ಎಂಪಿವಿ ಕಾರು ಎರ್ಟಿಗಾ ಮೊದಲ ಬಾರಿಗೆ ನವೀಕರಣವನ್ನು ಪಡೆದುಕೊಂಡು ಮತ್ತೇ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜುಗೊಳ್ಳುತಿದ್ದು, ಹೊಸ ಎರ್ಟಿಗಾ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹೊಸ ವಿನ್ಯಾಸ
ಎರ್ಟಿಗಾ ಎಮ್ಪಿವಿ ಕಾರು ಈ ಬಾರಿ ಹೊಸ ವಿನ್ಯಾಸವನ್ನು ಪಡೆದುಕೊಂಡಿರಲಿದೆ. ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಪಡೆದುಕೊಂಡಿರಲಿದೆ. ಕಾರಿನ ಸೈಡ್ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಮ್ಪಿವಿ ಕಾರಿಗಿಂತಲೂ ಎಸ್ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.
ವಿಶಾಲವಾದ ಆಕಾರ
ಹಳೆಯ ಮಾಡಲ್ ಎರ್ಟಿಗಾ ಕಾರಿಗೆ ಹೋಲಿಸಿದರೆ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110ಎಮ್ಎಮ್ ಉದ್ದ, 50ಎಮ್ಎಮ್ ಅಗಲ ಮತ್ತು 5ಎಮ್ಎಮ್ ಎತ್ತರ ಅಧಿಕವಾದ ಸುತ್ತಳತೆಯನ್ನು ಪಡೆದುಕೊಂಡಿರಲಿದೆ. ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರು ಆರಾಮವಾಗಿ ಕೂರಬಹುದು.
ಹೊಸ ಇಂಟೀರಿಯರ್
ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್ನಲ್ಲಿ ಲೆಧರ್ ಸೀಟ್ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.
ಉಪಕರಣಗಳು
ಕಳೆದ ದಿನಗಳ ಹಿಂದೆ ಬಿಡುಗಡೆಗೊಂಡ ಡಿಜೈರ್ ಕಾರಿನಲ್ಲಿ ಬಳಸಲಾದ 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ. ಈ ಉಪಕರಣವು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಬ್ಲೂತೂತ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್ಗೆ ಸಹಾಯವಾಗುವ ಹಲವಾರು ಬಟನ್ಗಳುಳ್ಳ ಲೆಧರ್ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.
ಸುರಕ್ಷಾ ವೈಶಿಷ್ಟ್ಯತೆಗಳು
ಹೊಸ ಎರ್ಟಿಗಾ ಎಮ್ಪಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಎಬಿಎಸ್, ಇಬಿಡಿ, ಐಎಸ್ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ ಎರ್ಟಿಗಾ ಕಾರು ಹಳೆಯ ಮಾದರಿಯಲ್ಲಿನ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್ನ ಜಾಗದಲ್ಲಿ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೊಸ ಎಂಜಿನ್ ಅನ್ನು ಹೊರತು ಪಡಿಸಿ, ಸಿಯಾಜ್ ಕಾರಿನಲ್ಲಿ ಬಳಸಲಾದ 103 ಬಿಹೆಚ್ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಜೊತೆಗೆ ಎರಡು ಎಂಜಿನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್ಹೆಚ್ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.
ಗೇರ್ ಬಾಕ್ಸ್
ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಈ ಕಾರು 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಹೊಸ ಕಾರಿನ ಬೆಲೆ (ಅಂದಾಜು)
ಬಿಡುಗಡೆಗೊಳ್ಳಲಿರುವ ಹೊಸ ಎರ್ಟೀಗಾ ಎಮ್ಪಿವಿ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೊ ಎಮ್ಪಿವಿ, ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿ ನೀಡಲಿದೆ.
ಮಾರುತಿ ಸುಜುಕಿ ಎರ್ಟಿಗಾ ಕಾರಿನ ಪೈಪೋಟಿಯಾದ ಮಹೀಂದ್ರಾ ಸಂಸ್ಥೆಯ ಮರಾಜೊ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..