ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಈ ಹಿಂದೆಯೆ ತಮ್ಮ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿತ್ತು.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಈ ಹಿಂದೆಯೆ ತಮ್ಮ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಸ್ವಿಫ್ಟ್ ಎಎಮ್‍ಟಿ ಕಾರಿನ ಜೆಡ್‍ಎಕ್ಸ್ಐ+ ಮತ್ತು ಜೆಡ್‍ಡಿಐ+ ಎಂಬ ಹೊಸ ಎರಡು ಟಾಪ್ ವೇರಿಯಂಟ್‍‍ಗಳನ್ನು ಬಿಡುಗಡೆಗೊಳಿಸಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಹೊಸದಾಗಿ ಬಿಡುಗಡೆಗೊಂಡ ಸ್ವಿಫ್ಟ್ ಎಎಮ್‍ಟಿ ಟಾಪ್ ಸ್ಪೆಕ್ ಜೆಡ್‍ಎಕ್ಸ್ಐ+ ವೇರಿಯಂಟ್ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.7.76 ಲಕ್ಷಕ್ಕೆ ಮತ್ತು ಜೆಡ್‍‍ಡಿಐ+ ವೇರಿಯಂಟ್ ಕಾರಿನ ಬೆಲೆಯನ್ನು ರೂ. 8.76 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಮೂರನೆಯ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಗೊಂಡಾಗ ಸ್ವಿಫ್ಟ್ ಎಎಮ್‍ಟಿ ಮಾದರಿಗಳು ವಿಎಕ್ಸ್ಐ, ಜೆಡ್‍ಎಕ್ಸ್ಐ, ವಿಡಿಐ ಮತ್ತು ಜೆಡ್‍‍ಡಿಐ ವೇರಿಯಂಟ್‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದವು.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಮಾರುತಿ ಸುಜುಕಿ ಎಎಂಟಿ ಗೇರ್‍‍ಬಾಕ್ಸ್ ಅನ್ನು ಸ್ವಿಫ್ಟ್ ಕಾರಿನ ಉನ್ನತ-ವಿಶಿಷ್ಟ ರೂಪಾಂತರಗಳಲ್ಲಿ ಬೆಲೆಗೆ ತಕ್ಕಂತೆ ಇರಿಸಿಕೊಳ್ಳಲು ಕಾರಣವಾಯಿತು. ಆದರೆ ಈಗ, ಹ್ಯಾಚ್‍‍ಬ್ಯಾಕ್‍‍ಗೆ ಅಗಾಧವಾದ ಬೇಡಿಕೆಯೊಂದಿಗೆ ಮಾರುತಿ ಸುಜುಕಿ ಎಜಿಎಸ್ (ಆಟೋ ಗೇರ್ ಶಿಫ್ಟ್) ಅನ್ನು ಉನ್ನತ-ಸ್ಪೆಕ್ಟ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಪರಿಚಯಿಸಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಐದನೇ ತಲೆಮಾರಿನ ಹೆರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಸ್ವಿಫ್ಟ್ ಟಾಪ್ ವೇರಿಯಂಟ್ ಜೆಡ್‍ಎಕ್ಸ್ಐ+ ಮತ್ತು ಜೆಡ್‍‍ಡಿಐ+ ಕಾರುಗಳಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಮತ್ತು ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ಆಯ್ಕೆ ಹೊಂದಿರುವ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಎಂಜಿನ್ ಸಾಮರ್ಥ್ಯ

ಬಿಡುಗಡೆಯಾಗಿರುವ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಮತ್ತೆರಡು ಹೊಸ ವೇರಿಯಂಟ್‍‍ಗಳಲ್ಲಿ ಬಿಡುಗಡೆಗೊಂಡ ಮಾರುತಿ ಸ್ವಿಫ್ಟ್ ಎಎಮ್‍‍ಟಿ ಕಾರುಗಳು..

ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

Most Read Articles

Kannada
English summary
New Maruti Swift AMT Launched In Top Variants.
Story first published: Wednesday, August 8, 2018, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X