ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಮಾರುತಿ ಸುಜುಕಿ ಕಾರುಗಳು ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ವ್ಯಾಗನ್ ಆರ್ ಪರಿಚಯಿಸಲು ಮುಂದಾಗಿದೆ.

By Praveen Sannamani

ಪ್ರಯಾಣಿಕ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಕಾರುಗಳು ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ವ್ಯಾಗನ್ ಆರ್ ಪರಿಚಯಿಸಲು ಮುಂದಾಗಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿರುವ ಸೊಲಿಯೊ ಕಾರು ಮಾದರಿಯಲ್ಲೇ 7 ಸೀಟರ್ ವ್ಯಾಗನ್ ಆರ್ ಆವೃತ್ತಿಯನ್ನು ಸಹ ಭಾರತದಲ್ಲಿ ಬಿಡುಗಡೆಗೊಳಿಸುವ ಉದ್ಧೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಮೂಲಗಳ ಪ್ರಕಾರ ಹೊಸ ಕಾರು ಬಿಡುಗಡೆಯ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷ ನವೆಂಬರ್‌ನಲ್ಲಿ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಈ ಹಿನ್ನೆಲೆ ದೆಹಲಿ ಸೇರಿದಂತೆ ಗುರುಗ್ರಾಮ್ ಹೊರ ವಲಯದಲ್ಲಿ ವ್ಯಾಗನ್ ಆರ್ 7 ಸೀಟರ್ ಕಾರುಗಳ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರುಗಳನ್ನು ವಿನೂತನ ಹಾರ್ಟ್‌ಟೆಕ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಈಗಾಗಲೇ ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್, ಡಿಜೈರ್, ಎಸ್ ಕ್ರಾಸ್ ಕಾರುಗಳು ಕೂಡಾ ಹಾರ್ಟ್‌ಟೆಕ್ ತಂತ್ರಜ್ಞಾನ ಅಡಯಲ್ಲೇ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆ ವ್ಯಾಗನರ್ 7 ಸೀಟರ್ ಕಾರುಗಳು ಸಹ ಉತ್ತಮ ಬಾಡಿ ಕಿಟ್ ಪಡೆದುಕೊಂಡಿರಲಿವೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಜುಕಿ ನಿರ್ಮಾಣದ ವ್ಯಾಗನರ್ ಹೊಸ ಕಾರುಗಳು 5 ಪ್ಲಸ್ 2 ಆಸನ ಸೌಲಭ್ಯ ಹೊಂದಿದ್ದು, ಎರ್ಟಿಗಾ ಕಾರಿಗಿಂತ ಕಡಿಮೆ ಮತ್ತು ಇಕೋ ವಾಹನಗಿಂತ ಹೆಚ್ಚಿನ ಮಟ್ಟದ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಲಿದೆಯೆಂತೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಒಂದು ವೇಳೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ 7 ಸೀಟರ್ ವ್ಯಾಗನರ್ ಮಾದರಿಗಳು ನಿಗದಿತ ಅವಧಿ ಒಳಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ಎಂಪಿವಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲಯ ಸೃಷ್ಠಿಸಲಿದ್ದು, ವಾಣಿಜ್ಯ ಬಳಕೆಗಾಗಿ ಕೂಡಾ ಉತ್ತಮ ಕಾರು ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಆದ್ರೆ ಹೊಸ ಕಾರಿನ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಡದ ಮಾರುತಿ ಸುಜುಕಿ ಸಂಸ್ಥೆಯು, ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರವೇ ಹೊಸ ಕಾರಿನ ಬಗೆಗಿನ ಮಹತ್ವದ ಮಾಹಿತಿಗಳನ್ನು ಬಹಿರಂಗ ಮಾಡಲಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

7 ಸೀಟರ್ ವ್ಯಾಗನರ್ ಕಾರುಗಳು 1.2-ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 90-ಬಿಎಚ್‌ಪಿ 118-ಎನ್ಎಂ ಉತ್ಪಾದಿಸಬಲ್ಲ ಅತ್ಯುತ್ತಮ ಮಾದರಿಯಾಗಿರಲಿದೆ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಕಾರಿನ ಬೆಲೆಗಳು (ಅಂದಾಜು)

ವಿನೂತನ ವಿನ್ಯಾಸಗಳನ್ನು ಹೊಂದಿರುವ 7 ಸೀಟರ್ ವ್ಯಾನಗರ್ ಕಾರುಗಳ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ.5.50 ಲಕ್ಷದಿಂದ 6.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Image Source: Rushlane

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಹಲವು ಮಾದರಿಯ ಕಾರುಗಳನ್ನು ಪರಿಚಯಿಸಿ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು, 7 ಸೀಟರ್ ವ್ಯಾಗನ್ ಆರ್ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಯಾಕೇಂದ್ರೆ ಸಾಲಿಯೋ ಕಾರುಗಳ ಜನಪ್ರಿಯತೆ ಭಾರತದಲ್ಲೂ ವರ್ಕೌಟ್ ಆಗಲಿದೆ ಎನ್ನುವುದು ಮಾರುತಿ ಸುಜುಕಿ ಲೆಕ್ಕಾಚಾರ.

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಒಂದು ಬಾರಿ ಚಾರ್ಜ್ ಮಾಡಿದ್ರೆ 1 ಸಾವಿರ ಕಿ.ಮೀ ಮೈಲೇಜ್ ನೀಡುತ್ತೆ ಈ ವಿನೂತನ ಎಲೆಕ್ಟ್ರಿಕ್ ಕಾರು...

ಟೈರ್ ಬಸ್ಟ್‌- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

23 ಕ್ಯಾರೆಟ್ ಗೋಲ್ಡ್ ಬ್ಯಾಡ್ಜ್ ಹೊಂದಿರುವ ಈ ಬೈಕ್ ಬೆಲೆ 48 ಲಕ್ಷ ಅಷ್ಟೇ...

Most Read Articles

Kannada
English summary
Maruti WagonR 7 seater India Launch Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X