ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಇತ್ತೀಚೆಗೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿ ದುಷ್ಕೃತ್ಯವೆಸಗುವವರ ಸಂಖ್ಯೆ ಅತಿಯಾಗುತ್ತಿದೆ. ಇದಕ್ಕೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯವು ನಂಬರ್ ಪ್ಲೇಟ್ ವಿನ್ಯಾಸದಲ್ಲಿ ಹೊಸ ಬದಲಾವಣೆಗೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಗಾಗಿ ಹಲವು ಹೊಸ ನಿಯಮಗಳನ್ನು ಕಡ್ಡಾಯಗೊಳಿಸುತ್ತಿದ್ದು, ಇದೀಗ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅನ್ನು ಎಲ್ಲಾ ವಾಹನಗಳು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿ ಮಾಡಲು ಮುಂದಾಗಿರುವುದು ವಾಹನ ಮಾಲೀಕರಿಗೆ ಹತ್ತು ಹಲವು ಪ್ರಯೋಜನಗಳಿವೆ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಎಚ್‌ಎಸ್‌ಆರ್‌ಪಿ ಇಲ್ಲವಾದ್ರೆ ಜೈಲು ವಾಸ.!

ಹೊಸ ನಿಯಮವನ್ನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ಇಲ್ಲವೇ ಜೈಲು ವಾಸ ವಿಧಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು, ಮೊದಲ ಹಂತವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸುತ್ತಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಅಕ್ಟೋಬರ್ 13ರಿಂದಲೇ ಹೊಸ ನಿಯಮ ಅನ್ವಯ!

ರಾಜಧಾನಿ ದೆಹಲಿಯಲ್ಲಿ ಮೊದಲ ಹಂತವಾಗಿ ಎಚ್‌ಎಸ್‌ಆರ್‌ಪಿ(ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್) ಅಳವಡಿಕೆಯನ್ನು ಅಕ್ಟೋಬರ್ 13ರಿಂದಲೇ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದ್ದು, ದೆಹಲಿಯೊಂದರಲ್ಲೇ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ ಎಹೆಚ್ಎಸ್ಆರ್‌ಪಿ ಸೌಲಭ್ಯವಿಲ್ಲದಿರುವುದು ವಾಹನಗಳ ದತ್ತಾಂಶ ಸಂಗ್ರಹಣೆಗೂ ತೊಡಕಾಗಿ ಪರಿಣಮಿಸಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಕೇಂದ್ರ ಸರ್ಕಾರವು 2001ರಲ್ಲೇ ಮೋಟಾರ್ ವೆಹಿಕಲ್ ಆ್ಯಕ್ಟ್ ಅನ್ವಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದರೂ ಇದುವರೆಗೆ ಅದು ಯಾವ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿಯೇ ಈ ಕಾಯ್ದೆಗೆ ಹೊಸ ತಿದ್ದುಪಡಿ ತರುವ ಮೂಲಕ ಇದೀಗ ದೇಶಾದ್ಯಂತ ಹಂತ ಹಂತವಾಗಿ ಜಾರಿಗೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಹೊಸ ನಂಬರ್ ಪ್ಲೇಟ್‌ಗೆ ರೇಟ್ ಫಿಕ್ಸ್.!

ಈ ಹಿಂದೆ ಈ ನಿಯಮ ಜಾರಿಗೆ ಬಂದಾಗ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದ ನಂಬರ್ ‌ಪ್ಲೇಟ್‌ಗಳು ದುಬಾರಿಯಾಗಿದ್ದವು. ಇದೇ ಕಾರಣಕ್ಕಾಗಿ ವಾಹನ ಸವಾರರು ಹೊಸ ನಿಯಮಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಕೇಂದ್ರ ಸಾರಿಗೆ ಇಲಾಖೆಯ ಈ ಬಾರಿ ನಿಗದಿ ಮಾಡಿರುವ ದರಗಳು ಅಷ್ಟೇನು ದುಬಾರಿ ಇಲ್ಲ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಇದಕ್ಕಾಗಿ ದೆಹಲಿಯಲ್ಲಿ 13 ಕಡೆಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಆನ್‌ಲೈನ್ ಮೂಲಕ ಹಣ ಪಾವತಿ ನಂತರ ಇಲ್ಲಿ ನಿಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಪಡೆದುಕೊಳ್ಳಬಹುದು.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಇದಕ್ಕಾಗಿ ಅಕ್ಟೋಬರ್ 2ರ ತನಕ ಡೆಡ್‌ಲೈನ್ ನೀಡಿರುವ ಕೇಂದ್ರ ಸಾರಿಗೆ ಇಲಾಖೆಯು ಅಕ್ಟೋಬರ್ 13ರ ನಂತರ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದಿರುವ ವಾಹನಗಳಿಂದ ದಂಡ ವಸೂಲಿ ಮಾಡುವ ಬಗ್ಗೆ ಅಭಿಯಾನ ಮಾಡುತ್ತಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಹೊಸ ಕಾಯ್ದೆಯಿಂದ ಏನು ಲಾಭ?

ವಾಹನಗಳ ಮೇಲೆ ಸೂಕ್ತ ನಿಗಾ ಇಡಲು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅವಶ್ಯಕತೆಯಿದ್ದು, ಡಿಕೋಡಿಂಗ್ ಮಾದರಿಯಲ್ಲಿರುವ ಹೊಸ ನಂಬರ್ ಪ್ಲೇಟ್‌ನಲ್ಲಿ ವಾಹನದ ಪ್ರತಿಯೊಂದು ದಾಖಲೆ ಸಹ ಸಂಗ್ರಹವಾಗಿರುತ್ತೆ. ಜೊತೆಗೆ ಹೊಸ ನಂಬರ್ ಪ್ಲೇಟ್ 5 ವರ್ಷಗಳ ವಾರಂಟಿ ಹೊಂದಿರುತ್ತೆ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಹೊಸ ವಾಹನ ಮಾಲೀಕರಿಗೆ ಚಿಂತೆಯಿಲ್ಲ..!

ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಪ್ರಕಾರ, ಇಷ್ಟು ದಿನಗಳ ಕಾಲ ವಾಹನ ಮಾಲೀಕರೆ ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಇನ್ಮುಂದೆ ವಾಹನ ಉತ್ಪಾದನಾ ಸಂಸ್ಥೆಗಳೆ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್‌ ಜೋಡಣೆ ಇರಲಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಈ ಮೂಲಕ ಕಾರುಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಒಟ್ಟಿನಲ್ಲಿ ಹೊಸ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರುವುದರಿಂದ ಹಲವು ಲಾಭಗಳಿದ್ದು, ವಾಹನಗಳ ದತ್ತಾಂಶ ಸಂಗ್ರಹಣೆ ಸೇರಿದಂತೆ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ ಬ್ರೇಕ್ ಹಾಕಬಹುದಾಗಿದೆ. ಹೀಗಾಗಿ ಮೊದಲ ಹಂತವಾಗಿ ದೆಹಲಿಯಲ್ಲಿ ಜಾರಿಗೊಳ್ಳುತ್ತಿರುವ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಕಡ್ಡಾಯ ಅಳವಡಿಕೆಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಜಾರಿಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
New number plate for your vehicle by October 13 or risk going to jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X