ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

By Praveen Sannamani

ಸ್ಕೋಡಾ ಸಂಸ್ಥೆಯು ಸದ್ಯ ಮಧ್ಯಮ ಕ್ರಮಾಂಕ ಸೆಡಾನ್ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಜನಪ್ರಿಯ ರ‍್ಯಾಪಿಡ್ ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಒಂದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿರುವ ಮಹತ್ವದ ಮಾಹಿತಿ ಲಭ್ಯವಾಗಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಸ್ಕೋಡಾ ಸಂಸ್ಥೆಯು ಜರ್ಮನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಜೊತೆಗೂಡಿ ಹೊಸ ಉತ್ಪನ್ನಗಳನ್ನು ಸಿದ್ದಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನ ರೂಪಿಸುತ್ತಿದ್ದು, ಕಳೆದ ವಾರವಷ್ಟೇ ರ‍್ಯಾಪಿಡ್ ಕಾರುಗಳಿಗಾಗಿ 1.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಭಿವೃದ್ಧಿಗೊಳಿಸಿರುವುದಲ್ಲದೇ ಹೊಸ ಎಂಜಿನ್ ಪ್ರೇರಿತ ರ‍್ಯಾಪಿಡ್ ಕಾರುಗಳ ಎಂಜಿನ್ ದಕ್ಷತೆ ಕುರಿತು ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸಿರುವುದು ಬೆಳಕಿಗೆ ಬಂದಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ 1.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ರ‍್ಯಾಪಿಡ್ ಕಾರುಗಳಿಗೆ ಮಾತ್ರವಲ್ಲದೇ ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಲ್ಲೂ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದು ಅತ್ಯುತ್ತಮ ಇಂಧನ ದಕ್ಷತೆ ಒದಗಿಸುವುದಲ್ಲದೇ ಕಾರುಗಳ ಬೆಲೆ ಇಳಿಕೆಗೂ ಸಹಕಾರಿಯಾಗಲಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಸದ್ಯ ಸ್ಕೋಡಾ ಸಂಸ್ಥೆಯು ಸ್ಥಳೀಯವಾಗಿ ಎಂಜಿನ್ ಅಭಿವೃದ್ಧಿ ಮಾಡುವ ಉದ್ದೇಶದಿಂದಲೇ ಜನಪ್ರಿಯ ಎಂಕ್ಯೂಬಿ ಮತ್ತುಎಒ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಿದ್ದು, ಈ ಮೂಲಕ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಗ್ಗದ ಬೆಲೆಯ ಕಾರುಗಳನ್ನ ಸಿದ್ದಗೊಳಿಸಲಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಹೊಸ ಎಂಜಿನ್ ವೈಶಿಷ್ಟ್ಯತೆ

ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ರ‍್ಯಾಪಿಡ್ ಕಾರುಗಳು 1.5-ಲೀಟರ್ ಡಿಸೇಲ್ ಹಾಗೂ 1.4-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಹೊಸದಾಗಿ ಅಭಿವೃದ್ಧಿಗೊಳಿಸಿರುವ 1.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯು ಮೈಲ್ಡ್ ಹೈಬ್ರಿಡ್ ಗುಣಲಕ್ಷಣಗಳನ್ನ ಹೊಂದಿರಲಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಹೀಗಾಗಿ ಕಾರುಗಳ ಪರ್ಫಾಮೆನ್ಸ್ ಬಲವು ಹೆಚ್ಚಲಿದ್ದು, 1.0-ಲೀಟರ್ ಪೆಟ್ರೋಲ್ ಕಾರುಗಳು 115-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನಾ ಮಾಡಬಲ್ಲವು. ಜೊತೆಗೆ ಕಾರಿನ ಮೈಲೇಜ್ ಸಾಮರ್ಥ್ಯವು ಸಹ ಗಣನೀಯವಾಗಿ ಹೆಚ್ಚಲಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಇನ್ನು 2020ರ ವೇಳೆಗೆ ಬಿಎಸ್-6 ವೈಶಿಷ್ಟ್ಯತೆಯ ಎಂಜಿನ್‌ಗಳು ಕಡ್ಡಾಯವಾಗಿರಲಿದ್ದು, ಇದೇ ಕಾರಣಕ್ಕಾಗಿ ಸ್ಕೋಡಾ ಸಂಸ್ಥೆಯು 'ಇಂಡಿಯಾ 2.0 ಪ್ರಾಜೆಕ್ಟ್' ಎನ್ನುವ ಬೃಹತ್ ಯೋಜನೆಯೊಂದಿಗೆ ಸದ್ಯದ ಕಾರುಗಳ ಎಂಜಿನ್‌ ವಿಭಾಗದಲ್ಲಿ ಭಾರೀ ಬದಲಾವಣೆ ತರುವ ಗುರಿಹೊಂದಿದೆ.

ರ‍್ಯಾಪಿಡ್ ಕಾರುಗಳಲ್ಲಿ ಹೊಸ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಸ್ಕೋಡಾ

ಇದರೊಂದಿಗೆ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆಯುವ ತವಕದಲ್ಲಿದ್ದು, ಇದಕ್ಕೆ ಪೂರಕವಾಗಿ ಹೊಸ ಎಂಜಿನ್‌ಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವಿವಿಧ ಮಾದರಿಯ ಟೆಸ್ಟಿಂಗ್‌ಗಳನ್ನ ನಡೆಸುತ್ತಿರುವ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆಗಳಿಗೆ ಮುನ್ನಡೆಯಾಗಿದೆ ಎನ್ನಬಹುದು.

Image Courtesy: Thrust Zone

Most Read Articles

Kannada
Read more on skoda sedan
English summary
Skoda’s New 1.0-Litre TFSI Turbocharged Petrol Engine Spied Testing In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X