ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಸ್ವಿಡನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ವೋಲ್ವೊ ತಮ್ಮ ಈಗಾಗಲೆ ಮಾರುಕಟ್ಟೆಯಲ್ಲಿ ತಮ್ಮ ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಎಸ್‍‍ಯುವಿ ಕಾರುಗಳನ್ನು ಮಾರಾಟಮಾಡುತ್ತಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಕ್ಸ್‌ಸಿ40 ಎಸ್‍‍ಯುವಿ

By Rahul Ts

ಸ್ವಿಡನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ವೋಲ್ವೊ ತಮ್ಮ ಈಗಾಗಲೆ ಮಾರುಕಟ್ಟೆಯಲ್ಲಿ ತಮ್ಮ ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಎಸ್‍‍ಯುವಿ ಕಾರುಗಳನ್ನು ಮಾರಾಟಮಾಡುತ್ತಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಕ್ಸ್‌ಸಿ40 ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಬಿಡುಗಡೆಗೊಂಡ ಹೊಸ ವೋಲ್ವೊ ಎಕ್ಸ್‌ಸಿ40 ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 39.9 ಲಕ್ಷಕ್ಕೆ ನಿಗಧಿಪಡಿಸಲಾಗಿದೆ. ಈ ಕಾರು ಕೇವಲ ಎಂದು ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿದ್ದು, ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಹೊಸದಾಗಿ ಬಿಡುಗಡೆಗೊಂಡ ವೋಲ್ವೋ ಎಕ್ಸ್‌ಸಿ40 ಕಾರಿನ ಖರೀದಿಗಾಗಿ ನಿಮ್ಮ ಹತ್ತಿರದ ಡೀಲರ್‍‍ಗಳನ್ನು ಭೇಟಿಮಾಡಬೇಕಾಗಿದ್ದು, ಇದು ವೋಲ್ವೋ ಸಂಸ್ಥೆಯ ಸಣ್ಣದಾದ ಎಸ್‍‍ಯುವಿ ಕಾರಾಗಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ವೋಲ್ವೋ ಎಕ್ಸ್‌ಸಿ40 ಕಾರು ಕಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚುರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದ್ದು, ಮಾರುಕಟ್ಟೆಯಲ್ಲಿ ಯುವ ಸಮುದಾಯವನ್ನು ಸೆಳೆಯಲಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಕಾರಿನ ಆಯಾಮಗಳು

ಹೊಸ ವೋಲ್ವೊ ಎಕ್ಸ್‌ಸಿ40 ಕಾರು 4,425ಎಮ್ಎಮ್ ಉದ್ದ, 1,652ಎಮ್ಎಮ್ ಎತ್ತರ ಮತ್ತು 1,863ಎಮ್ಎಮ್ ಅಗಲವನ್ನು ಹೊಂದಿದ್ದು, 211ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಎಕ್ಸ್‌ಸಿ40 ಎಸ್‍ಯುವಿ ಕಾರು ಎಕ್ಸ್‌ಸಿ60 ಕಾರಿನಂತೆಯೆ ಅಪ್‍‍ರೈಟ್ ಫ್ರಂಟ್ ಗ್ರಿಲ್ ಅನ್ನು ಹೊಂದಿದ್ದು, ಜೊತೆಗೆ 'ಥಾರ್ ಹಾಮರ್' ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದಿದೆ. ಈ ವಿನ್ಯಾಸವು ಭಾರತದಲ್ಲಿ ಮಾರಾಟವಾದ ಇತರೆ ವೋಲ್ವೋ ಮಾದರಿಗಳಿಗೆ ಹೋಲುತ್ತದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಇನ್ನು ಕಾರಿನ ಹಿಂಭಾಗದಲ್ಲಿ ರೇಕ್ಡ್ ವಿಂಡ್‍‍ಶೀಲ್ಡ್ ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಟ್ವಿನ್ ಕ್ರೋಮ್ ಎಕ್ಸಾಸ್ಟ್, ಬ್ಲೆಕ್ಡ್ ಔಟ್ ರೂಫ್, ಎಲ್ ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್ ಬಳಾಸಿರುವುದು 5 ಆಸನವುಳ್ಳ ಈ ಕಾರಿಗೆ ಹೊಸ ಆಕರ್ಷಕ ರೂಪವನ್ನು ನೀಡುತ್ತದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಕಾರಿನ ಒಳವಿನ್ಯಾಸ

ವೋಲ್ವೊ ಎಕ್ಸ್‌ಸಿ40 ಕಾರಿನ ಒಳಭಾಗವು ಪೂರ್ಣ ಕಪ್ಪು ಅಥವ ಬ್ಲಾಕ್ ಆಂಡ್ ಆರೆಂಜ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸಜ್ಜುಗೊಂಡಿದ್ದು, 3 ಸ್ಪೋಕ್ ವಿವಿಧ ಆಯ್ಕೆಯುಳ್ಳ ಸ್ಟೀರಿಂಗ್ ವ್ಹೀಲ್ಸ್, ಟ್ವಿನ್ ಡೈಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಲಂಬಾಕಾರದ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಇದಲ್ಲದೆ ಈ ಕಾರಿನ ಸೀಟ್‍‍ಗಳನ್ನು ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದ್ದು, 5 ಮಂದಿ ಕೂರಬಹುದಾಗಿದೆ. ಮತ್ತು ಹಿಂದಿನ ಸೀಟ್‍ಗಳನ್ನು ಮಡಿಚಬಹುದಾಗಿದ್ದು, ಮಡಿಚಿದ್ದಲ್ಲಿ 460 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಪಡೆಯಬಹುದಾಗಿದೆ.

ಬಿಡುಗಡೆಗೊಂಡ ವೋಲ್ವೊ ಎಕ್ಸ್‌ಸಿ40 ಎಸ್‍‍ಯುವಿ ಕಾರು..

ಎಂಜಿನ್ ಸಾಮರ್ಥ್ಯ

ವೋಲ್ವೊ ಎಕ್ಸ್‌ಸಿ40 ಕಾರು 190 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ 2.0 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರಿನ ಪೆಟ್ರೋಲ್ ಮಾದರಿಗಳು ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿದೆ.

https%3A%2F%2Fwww.facebook.com%2Fsnehasish.mondal.14%2Fvideos%2F1382022155275418%2F

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವೋಲ್ವೊ ಎಕ್ಸ್‌ಸಿ40 ಕಾರು ಬಿಎಮ್‍‍ಡಬ್ಲ್ಯೂ ಎಕ್ಸ್1, ಆಡಿ ಕ್ಯೂ3, ಮರ್ಸಿಡಿಸ್-ಬೆಂಝ್ ಜಿಎಲ್ಎ ಎಂಬ ಪ್ರೀಮಿಯಮ್ ಎಸ್‍‍ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New Volvo XC40 India launched.
Story first published: Wednesday, July 4, 2018, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X