ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರನ್ನು ಬಿಡುಗಡೆ ಮಾಡಿದ್ದು, ಎಂಪಿವಿ ವಿಭಾಗದಲ್ಲಿ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿರುವ ಹೊಸ ಕಾರು ಹತ್ತಾರು ಹೊಸ ಸೌಲಭ್ಯಗಳನ್ನು ಹೊತ್ತು ಬಂದಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಮಾರುತಿ ಸುಜುಕಿ ಸಂಸ್ಥೆಯ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಎರ್ಟಿಗಾ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರನ್ನು ರಸ್ತೆಗಿಳಿಸಿದೆ. ಈ ಹೊಸ ಭಾರತವನ್ನು ಹೊರತುಪಡಿಸಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟವಾಗುತ್ತಿದ್ದು, ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರನ್ನು ನಿನ್ನೆಯಷ್ಟೇ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಮಾರುತಿ ಸುಜುಕಿ ಹೊಸ ಎರ್ಟಿಗಾ ಕಾರು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳಲ್ಲಿ ಎರ್ಟಿಗಾ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಎರ್ಟಿಗಾ ವೆರಿಯೆಂಟ್ ಮತ್ತು ಬೆಲೆ ಪಟ್ಟಿ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ಎಲ್ಎಕ್ಸ್ಐ(ಪೆಟ್ರೋಲ್ ಮ್ಯಾನುವಲ್) - ರೂ. 7,44,000

ವಿಎಕ್ಸ್ಐ(ಪೆಟ್ರೋಲ್ ಮ್ಯಾನುವಲ್) - ರೂ. 8,16,000

ಜೆಡ್ಎಕ್ಸ್ಐ (ಪೆಟ್ರೋಲ್ ಮ್ಯಾನುವಲ್) - ರೂ. 8,99,000

ಜೆಡ್ಎಕ್ಸ್ಐ ಪ್ಲಸ್ (ಪೆಟ್ರೋಲ್ ಮ್ಯಾನುವಲ್)- 9,50,000

*****

ವಿಎಕ್ಸ್ಐ- (ಪೆಟ್ರೋಲ್ ಆಟೋಮ್ಯಾಟಿಕ್) - ರೂ. 9,18,000

ಜೆಡ್ಎಕ್ಸ್ಐ- (ಪೆಟ್ರೋಲ್ ಆಟೋಮ್ಯಾಟಿಕ್) - ರೂ. 9,95,000

*****

ಎಲ್‌ಡಿಐ (ಡೀಸೆಲ್ ಮ್ಯಾನುವಲ್) - 8,84,000

ವಿಡಿಐ (ಡೀಸೆಲ್ ಮ್ಯಾನುವಲ್) - 9,56,000

ಜೆಡ್‌ಡಿಐ (ಡೀಸೆಲ್ ಮ್ಯಾನುವಲ್) - 10,39,000

ಜೆಡ್‌ಡಿಐ ಪ್ಲಸ್ (ಡೀಸೆಲ್ ಮ್ಯಾನುವಲ್)- 10,90,000

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಇಲ್ಲಿ ಪ್ರಮುಖ ವಿಚಾರ ಅಂದ್ರೆ, ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಹಿಂದಿನ ತಲೆಮಾರಿನ ಎರ್ಟಿಗಾ ಕಾರುಗಳಿಗಿಂತಾ ಇದು ತುಸು ದೊಡ್ಡ ಆಕಾರವನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಗಾತ್ರದಲ್ಲಿ ಬದಲಾವಣೆ

ಹೊಸ ಕಾರನ್ನು ಹಳೆಯ ಎರ್ಟಿಗಾ ಕಾರುಗಳಿಗೆ ಹೋಲಿಕೆ ಮಾಡಿದರೆ ಹೊಸ ಎರ್ಟಿಗಾ ಕಾರಿನಲ್ಲಿ ಹೆಚ್ಚುವರಿಯಾಗಿ 99ಎಂಎಂ ಉದ್ದ, 40ಎಂಎಂ ಅಗಲ ಮತ್ತು 5ಎಂಎಂ ಎತ್ತರವನ್ನು ನೀಡಲಾಗಿದ್ದು, ಇದರಿಂದ ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಹೊಸ ವಿನ್ಯಾಸ

ನೆಕ್ಸ್ಟ್ ಜನರೇಷನ್ ಎರ್ಟಿಗಾ ಎಂ‍ಪಿವಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ಚಕ್ರಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಹೊಸ ಇಂಟೀರಿಯರ್

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ಇಲ್ಲು ಸಹ ನೀಡಲಾಗಿದೆ. ಇದು ಕಾರಿನ ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತಂದಿದೆ ಎನ್ನಬಹುದು.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ತಾಂತ್ರಿಕ ವೈಶಿಷ್ಟ್ಯತೆಗಳು

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳೊಂದಿಗೆ ಲೆದರ್‍ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

MOST READ: ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಗ್ರಾಹಕರು ಹೊಸ ಕಾರುಗಳನ್ನು 4-ಸ್ಪೀಡ್ ಆಟೋಮ್ಯಾಟಿಕ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದ್ದು, ಪೆಟ್ರೋಲ್ ವರ್ಷನ್‌ಗಳಲ್ಲಿ ಮಾತ್ರವೇ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಸೌಲಭ್ಯವಿದ್ದು, ಡೀಸೆಲ್ ವರ್ಷನ್‌ಗಳಲ್ಲಿ ಕೇವಲ ಮ್ಯಾನುವಲ್ ಸೌಲಭ್ಯ ಮಾತ್ರ ಆಯ್ಕೆ ಇರಲಿದೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಮೈಲೇಜ್

ಮೇಲೆ ಹೇಳಿದಂತೆ ಹೊಸ ಎರ್ಟಿಗಾ ಕಾರುಗಳಲ್ಲಿ ಎಂಜಿನ್‌ನಲ್ಲಿ ಈ ಮಹತ್ವದ ಬದಲಾವಣೆ ತರಲಾಗಿದ್ದು, ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆಯಿಂದಾಗಿ ಕಾರುಗಳ ಮೈಲೇಜ್‌ನಲ್ಲಿ ವಿಚಾರದಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

MOST READ: ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..!

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಲಭ್ಯವಿರುವ ಬಣ್ಣಗಳು

ಹೊಸ ಎರ್ಟಿಗಾ ಕಾರುಗಳು ಒಟ್ಟು ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಪರ್ಲ್ ಮೆಟಾಲಿಕ್ ಔಬರ್ನ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಕ್ಸ್ಫಾರ್ಡ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮೆಟಾಲಿಕ್ ಸಿಲ್ಕಿ ಗ್ರೇ ಬಣ್ಣಗಳನ್ನು ಆಯ್ಕೆ ಮಾಡಬಹುದು.

ಬಿಡುಗಡೆಯಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಇನ್ನು 7-ಸೀಟರ್ ಮಾದರಿಗಳಲ್ಲಿ ವಿಶೇಷ ಎನ್ನಿಸುವ ಹೊಸ ಎರ್ಟಿಗಾ ಕಾರು 209-ಲೀಟರ್‌ನಷ್ಟು ಬೂಟ್ ಸ್ಪೆಸ್ ಸೌಲಭ್ಯ ಪಡೆದಿದ್ದು, ದೇಶದಲ್ಲಿ ಉತ್ತಮ ಇಂಧನ ದಕ್ಷತೆ ಹೊಂದಿರುವ ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಕಾರುಗಳಿಗೆ ಇದು ಸಾಕಷ್ಟು ಪೈಪೋಟಿ ನೀಡಲಿದ್ದು, ಕೆಲವು ಸಂದರ್ಭಗಳಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ ಎನ್ನಬಹುದು.

Most Read Articles

Kannada
English summary
Next-gen maruti ertiga top features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X