ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಕಿಕ್ಸ್ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಕಿಕ್ಸ್ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಈ ಕಾರಿನ ವಿಶೇಷವೇನೆಂದರೆ ನಿಸ್ಸಾನ್ ಸಂಸ್ಥೆಯು 5 ವರ್ಷಗಳ ನಂತರ ತಮ್ಮ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ನಿಸ್ಸಾನ್ ಕಿಕ್ಸ್ ಈಗಾಗಲೆ ಜಾಗತಿಕ ಮಾರುಕಟ್ಟೆಯಲ್ಲಿ ವಿ ಪ್ಲಾಟ್‍‍ಫಾರ್ಮ್ ಆಧಾರಿತ ಕ್ರಾಸ್ಓವರ್ ಎಸ್‍ಯುವಿ ಕಾರ್ ರೂಪದಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಕ್ಯಾಪ್ಚುರ್ ಕಾರಿನಲ್ಲಿ ಬಳಸಿರುವ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 104 ಬಿಹೆಚ್‍‍ಪಿ ಮತ್ತು 142ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍‍ಪಿ ಮತ್ತು 240ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಗಿದೆ ಜೋಡಿಸಲಾಗಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಜಾಗತಿಕವಾಗಿ ನಿಸ್ಸಾನ್ ಕಿಕ್ಸ್ ಆಲ್ ವೀಲ್ ಡ್ರೈವ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ಕೂಡ ಆಲ್ ವೀಲ್ ಡ್ರೈವ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಇನ್ನು ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ನಿಸ್ಸಾನ್ ಕಿಕ್ಸ್ ಕಾರಿನ ಲುಕ್ ಅನ್ನು ಹೆಚ್ಚಿಸಲು ಸಂಸ್ಥೆಯ ಕ್ರಾಸ್ಓವರ್ ಡಿಸೈನ್ ಸಿಗ್ನೇಚರ್ ಥೀಮ್ ಅನ್ನು ಅಳವಡಿಸಲಾಗಿದ್ದು, ಕಾರಿನ ಮುಂಭಾಗದಲ್ಲಿ ಸಂಸ್ಥೆಯ ವಿ ಮೋಶನ್ ಗ್ರಿಲ್ ಮತ್ತು ಮೋಜಿನ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಕಳೆದ ಐದು ವರ್ಷಗಳಿಂದಲು ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್ ವಾಹನಗಳು ಹೆಚ್ಚು ಮಾರಾಟವಾಗುತ್ತಿದ್ದು ಈ ನಿಟ್ಟಿನಲ್ಲಿ ನಿಸ್ಸಾನ್ ಸಂಸ್ಥೆಯು ತಮ್ಮ ಕಿಕ್ಸ್ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಹೊಸ ಪ್ರೀಮಿಯಮ್ ಎಸ್‍‍‍ಯುವಿ ಕಾರನ್ನು ಪರಿಚಯಿಸಲಿರುವ ನಿಸ್ಸಾನ್..

ಬರಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.5 ಲಕ್ಷದಿಂದ ರೂ. 14.5 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಹ್ಯುಂಡೈ ಕ್ರೆಟಾ, ಮಾರುತಿ ಎಸ್-ಕ್ರಾಸ್ಓವರ್, ಹೋಂಡಾ ಬಿಆರ್- ವಿ ಮತ್ತು ರೆನಾಲ್ಟ್ ಕ್ಯಾಪ್ಚುರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on nissan suv
English summary
Nissan India to launch premium SUV to rival Hyundai Creta.
Story first published: Tuesday, June 26, 2018, 9:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X