ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

By Praveen Sannamani

ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಸದ್ಯದಲ್ಲೇ ತನ್ನ ಹೊಸ ಮಾದರಿಯ ಕಿಕ್ಸ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, 2019ರ ಆರಂಭದಲ್ಲಿ ಹೊಸ ಕಾರು ಮಾರುಕಟ್ಟೆಗೆ ಬರುವುದು ಖಚಿತವಾಗಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

2016ರಲ್ಲಿ ಬ್ರೆಜಿಲ್ ಮಾರುಕಟ್ಟೆಗೆ ಇದೇ ಮಾದರಿಯನ್ನು ಬಿಡುಗೆಡೆಗೊಳಿಸಿದ್ದ ನಿಸ್ಸಾನ್, ಈ ಬಾರಿ ಭಾರತೀಯ ಮಾರುಕಟ್ಟೆಗೂ ಬಿಡುಗಡೆಗೊಳಿಸುತ್ತಿದೆ. ಹೀಗಾಗಿ ಹೊಸ ಮಾದರಿಯ ಎಸ್‌ಯುವಿ ಆವೃತ್ತಿಯು ಮೇಲೆ ಸಾಕಷ್ಟು ನೀರಿಕ್ಷೆಗಳಿದ್ದು, ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಜೊತೆಗೆ ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಡಸ್ಟರ್ ಮತ್ತು ಲೊಡ್ಜಿ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಇನ್ನು ಹೊರ ವಿನ್ಯಾಸಗಳು ಹೊಸ ಮಾರದಿಯ ಕಿಕ್ಸ್‌ಗೆ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ ಲೆದರ್ ಕೊಟಿಂಗ್ ಸೀಟುಗಳ ವ್ಯವಸ್ಥೆಯಿದ್ದು, ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ವಿನೂತನ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ ವಿವ್ಯು ಮಾನಿಟರ್ ವ್ಯವಸ್ಥೆಯಿದೆ. ಅಲ್ಲದೇ ಪ್ರಸ್ತುತ ಮಾದರಿಯ ಹಲವು ವಿಶೇಷತೆಗಳು ಕಾರಿನಲ್ಲಿವೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಎಸ್‌ಯುವಿ ಮಾದರಿಯ ಕಿಕ್ಸ್ ಮಾದರಿಯು 4,295ಎಂಎಂ ಉದ್ದವಿದ್ದು, 1,760ಎಂಎಂ ಅಗಲವಾಗಿದೆ. ಜೊತೆಗೆ 2,610 ಎಂಎಂ ಎತ್ತರವಾಗಿದ್ದು, ಐದು ಜನ ಅರಾಮಾವಾಗಿ ಪ್ರಯಾಣ ಮಾಡಬಹುದಾಗಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಹೊಸ ಮಾದರಿಯ ಕಿಕ್ಸ್ ಮಾದರಿಯು 1.5-ಲೀಟರ್ ಹಾಗೂ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 83ಎಂಎನ್ ಮತ್ತು 107 ಬಿಎಚ್‌ಪಿ ಉತ್ಪಾದಿಸುತ್ತದೆ. ಹಾಗಿಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಲಭ್ಯವಿರಲಿದ್ದು, ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅಭಿವೃದ್ಧಿ ಹೊಂದಲಿವೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಒಂದು ವೇಳೆ ನಿಗದಿತ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಕಿಕ್ಸ್ ಲಗ್ಗೆಯಿಟ್ಟರೆ ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಹುಂಡೈ ಕ್ರೇಟಾ, ರೆನಾಲ್ಟ್ ಡಸ್ಟರ್ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ಹೆಚ್ಚು ಪೈಪೋಟಿ ನೀಡಲಿದೆ.

ಎಸ್‌ಯುವಿ ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಕಿಕ್ಸ್ ಆವೃತ್ತಿಯು 2018ಕ್ಕೆ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಬಗ್ಗೆ ನೀರಿಕ್ಷೆಯಿದ್ದು, ಹೊಸ ಕಾರಿನ ಬೆಲೆಗಳು 15 ರಿಂದ 20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on nissan suv
English summary
Nissan Kicks To Be Launched In India In 2019 — To Rival Hyundai Creta.
Story first published: Saturday, August 4, 2018, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X