2019ರ ಜನವರಿಯಲ್ಲಿ ನಿಸ್ಸಾನ್ ಕಿಕ್ಸ್ ಎಸ್‌ಯುವಿ ಕಾರು ಬಿಡುಗಡೆ ಪಕ್ಕಾ..!

ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಭಾರತದಲ್ಲಿ ತನ್ನ ಹೊಸ ಉತ್ಪನ್ನಗಳ ಬಿಡುಗಡೆಯಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಿಕ್ಸ್ ಎಸ್‌ಯುವಿ ಕಾರಿನ ರಚನೆ ಕುರಿತಾದ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ.

2019ರ ಜನವರಿಯಲ್ಲಿ ನಿಸ್ಸಾನ್ ಕಿಕ್ಸ್ ಎಸ್‌ಯುವಿ ಕಾರು ಬಿಡುಗಡೆ ಪಕ್ಕಾ..!

2016ರಲ್ಲೇ ಬ್ರೆಜಿಲ್ ಮಾರುಕಟ್ಟೆಯಲ್ಲಿ ಕಿಕ್ಸ್ ಮಾದರಿಯನ್ನು ಬಿಡುಗೆಡೆಗೊಳಿಸಿದ್ದ ನಿಸ್ಸಾನ್ ಸಂಸ್ಥೆಯು ಈ ಬಾರಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕಿಕ್ಸ್ ಕಾರುಗಳನ್ನು ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಕಿಕ್ಸ್ ಹೊಸ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಳ್ಳುವುದು ಖಚಿತವಾಗಿದೆ.

ನಿಸ್ಸಾನ್ ಕಿಕ್ಸ್ ಕಾರು

ಜೊತೆಗೆ ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಡಸ್ಟರ್ ಮತ್ತು ಲೊಡ್ಜಿ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.

ನಿಸ್ಸಾನ್ ಕಿಕ್ಸ್ ಕಾರು

ಇನ್ನು ಹೊರ ವಿನ್ಯಾಸಗಳು ಹೊಸ ಮಾರದಿಯ ಕಿಕ್ಸ್‌ಗೆ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ ಲೆದರ್ ಕೊಟಿಂಗ್ ಸೀಟುಗಳ ವ್ಯವಸ್ಥೆಯಿದ್ದು, ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ನಿಸ್ಸಾನ್ ಕಿಕ್ಸ್ ಕಾರು

ವಿನೂತನ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ ವಿವ್ಯು ಮಾನಿಟರ್ ವ್ಯವಸ್ಥೆಯಿದೆ. ಅಲ್ಲದೇ ಪ್ರಸ್ತುತ ಮಾದರಿಯ ಹಲವು ವಿಶೇಷತೆಗಳು ಕಾರಿನಲ್ಲಿವೆ.

ನಿಸ್ಸಾನ್ ಕಿಕ್ಸ್ ಕಾರು

ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರುಗಳು ಉತ್ತಮ ಉದ್ದಳತೆ ಹೊಂದಿದ್ದು, 4,295ಎಂಎಂ ಉದ್ದ, 1,760ಎಂಎಂ ಅಗಲವಾಗಿದೆ. ಜೊತೆಗೆ 2,610 ಎಂಎಂ ಎತ್ತರವಾಗಿದ್ದು, ಐದು ಜನ ಅರಾಮಾವಾಗಿ ಪ್ರಯಾಣ ಮಾಡಬಹುದಾಗಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ನಿಸ್ಸಾನ್ ಕಿಕ್ಸ್ ಕಾರು

ಹೊಸ ಮಾದರಿಯ ಕಿಕ್ಸ್ ಮಾದರಿಯು 1.5-ಲೀಟರ್ ಹಾಗೂ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 83ಎಂಎನ್ ಮತ್ತು 107 ಬಿಎಚ್‌ಪಿ ಉತ್ಪಾದಿಸುತ್ತದೆ. ಹಾಗಿಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಲಭ್ಯವಿರಲಿದ್ದು, ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅಭಿವೃದ್ಧಿ ಹೊಂದಲಿವೆ.

ನಿಸ್ಸಾನ್ ಕಿಕ್ಸ್ ಕಾರು

ಒಂದು ವೇಳೆ ನಿಗದಿತ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಕಿಕ್ಸ್ ಲಗ್ಗೆಯಿಟ್ಟರೆ ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಹುಂಡೈ ಕ್ರೇಟಾ, ರೆನಾಲ್ಟ್ ಡಸ್ಟರ್ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ಹೆಚ್ಚು ಪೈಪೋಟಿ ನೀಡಲಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ನಿಸ್ಸಾನ್ ಕಿಕ್ಸ್ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಕಿಕ್ಸ್ ಆವೃತ್ತಿಯು 2019ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಯಿದ್ದು, ಹೊಸ ಕಾರಿನ ಬೆಲೆಗಳು ರೂ. 12 ರಿಂದ ರೂ. 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on nissan suv
English summary
Nissan Has Revealed The First Sketches Of The India-Bound Kicks SUV; To Be launched In 2019.
Story first published: Tuesday, September 11, 2018, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X