ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

By Praveen Sannamani

ಜಪಾನ್ ಬ್ರಾಂಡ್ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಭಾರತದಲ್ಲಿ ತನ್ನ ಹೊಸ ಉತ್ಪನ್ನಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಟೈಮ್‌ಲೈನ್ ಬಗೆಗೆ ಬೃಹತ್ ಯೋಜನೆ ರೂಪಿಸುತ್ತಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ನಿಸ್ಸಾನ್ ಬಿಡುಗಡೆ ಮಾಡಲಿರುವ ಹೊಸ ಕಾರುಗಳ ಪೈಕಿ ಕಿಕ್ಸ್ ಎಸ್‌ಯುವಿ ಆವೃತ್ತಿಗಳು ಈಗಾಗಲೇ ಬಿಡುಗಡೆಗಾಗಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್‌ಗಳನ್ನು ನಡೆಸುತ್ತಿದ್ದು, ಹೊಸ ಕಾರುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಸಂಬಂಧ ಭಾರೀ ಪ್ರಮಾಣದ ಹೂಡಿಕೆಯನ್ನು ಸಹ ಮಾಡುತ್ತಿದೆ. ಇದರಲ್ಲಿ ತನ್ನ ಅಂಗಸಂಸ್ಥೆಯಾದ ದಟ್ಸನ್ ಕಾರುಗಳಲ್ಲೂ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಜಪಾನ್ ತಂತ್ರಜ್ಞಾನವನ್ನು ಇಲ್ಲಿ ಪ್ರಯೋಗ ಮಾಡುವ ಗುರಿಹೊಂದಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಇದಕ್ಕಾಗಿ ತನ್ನ ಉದ್ಯೋಗಿಗಳಿಗೆ ವಿಶ್ವದರ್ಜೆಯ ಕೌಶಲ್ಯ ತರಬೇತಿ ನೀಡಲು ಯೋಜಿಸಿದ್ದು, ಮುಂಬರುವ ತಿಂಗಳು ಶೇ.10 ಉದ್ಯೋಗಿಗಳಿಗೆ ತನ್ನ ಹೊಸ ಕಾರು ಉತ್ಪಾದನಾ ಕೌಶಲ್ಯ ನೀಡಲು ತಯಾರಿ ನಡೆಸುತ್ತಿರುವ ಬಗ್ಗೆ ಮಧ್ಯಮಗೊಷ್ಠಿಯಲ್ಲಿ ಮಾಹಿತಿ ನೀಡಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಹೀಗಾಗಿ ನಿಸ್ಸಾನ್ ಸಂಸ್ಥೆಯು ಮುಂಬರುವ ಕಾರುಗಳನ್ನು ವಿಶ್ವದರ್ಜೆ ಗುಣಮಟ್ಟಗಳೊಂದಿಗೆ ಕಾರು ಉತ್ಪನ್ನ ಅಭಿವೃದ್ಧಿಗೊಳಿಲಿದ್ದು, ತಂತ್ರಜ್ಞಾನ ಎರವಲು ಮಾಡುವ ಸಂಬಂಧ ಹಲವು ಜನಪ್ರಿಯ ಸಂಸ್ಥೆಗಳೊಂದಿಗೂ ಕೈ ಜೋಡಿಸುತ್ತಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಇದರಿಂದ ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಟೆರಾನೋ ಕಾರುಗಳಿಂತಲೂ ಕಿಕ್ಸ್ ಕಾರುಗಳು ಮೇಲ್ಪಟ್ಟ ಕಾರು ಮಾದರಿಯಾಗಿರಲಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಜೊತೆಗೆ ಕ್ಯಾಪ್ಚರ್‌ ಕ್ರಾಸ್ ಒವರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಡಸ್ಟರ್ ಮತ್ತು ಲೊಡ್ಜಿ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಇನ್ನು ಹೊಸ ಕಾರಿನ ಹೊರ ವಿನ್ಯಾಸಗಳು ಕಿಕ್ಸ್‌ಗೆ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ ಲೆದರ್ ಕೊಟಿಂಗ್ ಸೀಟುಗಳ ವ್ಯವಸ್ಥೆಯಿದ್ದು, ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ವಿನೂತನ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ ವಿವ್ಯು ಮಾನಿಟರ್ ವ್ಯವಸ್ಥೆಯಿದೆ. ಅಲ್ಲದೇ ಪ್ರಸ್ತುತ ಮಾದರಿಯ ಹಲವು ವಿಶೇಷತೆಗಳು ಕಾರಿನಲ್ಲಿವೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಎಸ್‌ಯುವಿ ಮಾದರಿಯ ಕಿಕ್ಸ್ ಮಾದರಿಯು 4,295ಎಂಎಂ ಉದ್ದವಿದ್ದು, 1,760ಎಂಎಂ ಅಗಲವಾಗಿದೆ. ಜೊತೆಗೆ 2,610 ಎಂಎಂ ಎತ್ತರವಾಗಿದ್ದು, ಐದು ಜನ ಅರಾಮಾವಾಗಿ ಪ್ರಯಾಣ ಮಾಡಬಹುದಾಗಿದೆ.

MOST READ: ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಎಂಜಿನ್ ಸಾಮರ್ಥ್ಯ

ಹೊಸ ಮಾದರಿಯ ಕಿಕ್ಸ್ ಮಾದರಿಯು 1.5-ಲೀಟರ್ ಹಾಗೂ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 83ಎಂಎನ್ ಮತ್ತು 107 ಬಿಎಚ್‌ಪಿ ಉತ್ಪಾದಿಸುತ್ತದೆ. ಹಾಗಿಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಲಭ್ಯವಿರಲಿದ್ದು, ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅಭಿವೃದ್ಧಿ ಹೊಂದಲಿವೆ.

ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ ಪಡಿಸಿದ ನಿಸ್ಸಾನ್

ಒಂದು ವೇಳೆ ನಿಗದಿತ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಕಿಕ್ಸ್ ಲಗ್ಗೆಯಿಟ್ಟರೆ ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಹುಂಡೈ ಕ್ರೇಟಾ, ರೆನಾಲ್ಟ್ ಡಸ್ಟರ್ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ಹೆಚ್ಚು ಪೈಪೋಟಿ ನೀಡಲಿದೆ.

Most Read Articles

Kannada
Read more on nissan suv new car
English summary
Nissan India Shares Their Latest Strategy, Starting With The Nissan Kicks.
Story first published: Friday, September 7, 2018, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X