ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ನಾವೆಲ್ಲಾ ವಾಹನಗಳ ಖರೀದಿ ಮೇಲೆ ಲೋನ್ ಕೊಡುವುದನ್ನು ಕೇಳಿದ್ದೇವೆ. ಆದ್ರೆ ಇನ್ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೂ ಲೋನ್ ಸಿಗಲಿದೆಯೆಂತೆ. ಹೌದು, ನಿಮಗೆ ಇದು ತುಸು ತಮಾಷೆ ಅನ್ನಿಸಿದರೂ ನಿಮಗೆ ಬೇಕಾದಷ್ಟು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗಾಗಿ ಕೆಲವು ಹಣಕಾಸು ಸಂಸ್ಥೆಗಳು ಲೋನ್ ನೀಡಲು ಮುಂದಾಗಿವೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಸದ್ಯ ದೇಶದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗೆಟ್ಟುಹೋಗಿದ್ದು, ಕಳೆದ ಕೆಲ ದಿನಗಳ ಹಿಂದೆ ಬೆಲೆ ಇಳಿಕೆ ಮಾಡಿದ್ರು ಇದೀಗ ಮತ್ತೆ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಗೆ ಬಂದುನಿಂತಿವೆ. ಹೀಗಿರುವಾಗ ವಾಹನ ಸವಾರರಿಗೆ ಲೋನ್ ಅವಶ್ಯಕತೆ ಇರುವುದನ್ನು ಅರಿತಿರುವ ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆಯು ಲೋನ್ ಆಫರ್ ನೀಡುತ್ತಿದೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ವಾಹನಗಳಿಗೆ ಇಂಧನ ಖರೀದಿಸಲು ಲೋನ್ ನೀಡಲು ಮುಂದಾಗಿರುವ ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆಯು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ಇಂಧನಗಳ ಖರೀದಿಗೆ ಬೇಕಿರುವ ಹಣಕಾಸು ಸೌಲಭ್ಯವನ್ನು ನೀಡಲಿದೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ನವದೆಹಲಿದಲ್ಲಿ ನಡೆದ ಶೃಂಗಸಭೆಯಲ್ಲಿ ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದ್ದು, ಗ್ರಾಹಕರು ತಮ್ಮಅನುಕೂಲಕ್ಕೆ ತಕ್ಕಂತೆ ಇಂಧನ ಖರೀದಿಸಿ ತದನಂತರ ಹಣ ಪಾವತಿಸುವ ಯೋಜನೆ ಇದಾಗಿದೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಮರುಪಾವತಿಯ ಅವಧಿ ಎಷ್ಟು?

ವರದಿಗಳ ಪ್ರಕಾರ ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಎರಡು ರೀತಿಯಲ್ಲಿ ವಾಹನ ಸವಾರರಿಗೆ ಇಂಧನ ಖರೀದಿಗಾಗಿ ಲೋನ್ ನೀಡಲಿದ್ದು, 15 ರಿಂದ 30 ದಿನಗಳ ಕಾಲ ಲೋನ್ ಮರುಪಾವತಿಗೆ ಅವಕಾಶವಿರುತ್ತೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಎರಡು ರೀತಿಯ ಲೋನ್ ಲಭ್ಯ.!

ಹೊಸ ಯೋಜನೆಯ ಪ್ರಕಾರ ಹೊಸ ವಾಹನಗಳ ಮಾಲೀಕರು ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಲೋನ್ ಮೇಲೆ ಖರೀದಿ ಮಾಡುವುದಾದರೇ ಗರಿಷ್ಠ 30 ದಿನಗಳ ಕಾಲಾವಕಾಶ ದೊರೆಯಿದ್ದು, ಹಳೆಯ ವಾಹನಗಳಿಗೆ ಕನಿಷ್ಠ 15 ದಿನಗಳ ಕಾಲ ಮಾತ್ರವೇ ಮರುಪಾವತಿಗೆ ಅವಕಾಶವಿರುತ್ತೆ ಎನ್ನಲಾಗಿದೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಡೆಡ್‌ಲೈನ್ ತಪ್ಪಿದ್ರೆ ದಂಡ..!

ಒಂದೇ ವೇಳೆ ನೀವು ಲೋನ್ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಿ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡದೆ ಇದ್ದಲ್ಲಿ ನಿಮ್ಮ ಲೋನ್ ಮೊತ್ತಕ್ಕೆ ಅನುಗುಣವಾಗಿ ಇಂತಿಷ್ಟು ಪ್ರಮಾಣದ ದಂಡ ಪಾವತಿ ಮಾಡಬೇಕಾಗುತ್ತೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಇದ್ಕಕಾಗಿ ನೀವು ಒಂದು ಬಾರಿ ಯುನಿಕ್ ಐಡಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದ್ದು, ತದನಂತರ ನಿಮಗೆ ಬೇಕೆಂದಾಗ ಲೋನ್ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಬಹುದು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಪೆಟ್ರೋಲ್ ಮತ್ತು ಡೀಸೆಲ್ ಬೇಕೆಂದಾಗ ಮೊದಲು ನೀವು ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಆ್ಯಪ್ ಮೂಲಕ ಲಾಗಿನ್ ಮಾಡಿಕೊಳ್ಳುವ ಮೂಲಕ ನೋಂದಿತ ಮೊಬೈಲ್ ಸಂಖ್ಯೆ ನೀಡಿ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ಪಡೆದುಕೊಂಡು ಆ ಸಂಖ್ಯೆಯನ್ನು ಪೆಟ್ರೋಲ್ ಬಂಕ್‌ನಲ್ಲಿ ಉಪಯೋಗಿಸಬೇಕು.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಆಗ ನಿಮಗೆ ಪೆಟ್ರೋಲ್ ಸಿಬ್ಬಂದಿಯು ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆಯು ನೀಡಿರುವ ಒಟಿಪಿ ಸಂಖ್ಯೆಯನ್ನು ಪಡೆದು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪೂರೈಸುತ್ತಾರೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಈ ಹೊಸ ಯೋಜನೆಯು ದೇಶಾದ್ಯಂತ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಲೋನ್ ಸೌಲಭ್ಯ ಸಿಗಲಿದ್ದು, ಲೋನ್ ಬಳಕೆ ಮತ್ತು ಮರುಪಾವತಿ ಆಧಾರದ ಮೇಲೆ ಆಯ್ದ ಗ್ರಾಹಕರಿಗೆ ಕೆಲವು ಆಫರ್‌ಗಳು ಸಹ ನೀಡುವ ಬಗ್ಗೆ ಶ್ರೀರಾಮ್ ಕಮರ್ಷಿಯಲ್ ವೆಹಿಕಲ್ ಫೈನಾನ್ಸ್ ಸಂಸ್ಥೆಯು ಹೇಳಿಕೊಂಡಿದೆ.

MOST READ: ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಬುಕ್ಕಿಂಗ್ ಆರಂಭ- ಬೆಲೆ ಎಷ್ಟಿರಲಿದೆ ಗೊತ್ತಾ?

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಡಿಜಿಟಲ್ ಇಂಡಿಯಾಗೆ ಮಾನ್ಯತೆ

ಅಂದಹಾಗೆ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಈ ವಿನೂತನ ಪರಿಕಲ್ಪನೆಯನ್ನು ಹೊರತರಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಹೊಸ ಯೋಜನೆಯು ಕಾರ್ಯರೂಪಕ್ಕೆ ಬರುವುದು ಖಚಿತವಾಗಿದೆ.

ದಯವಿಟ್ಟು ಗಮನಿಸಿ: ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲೆ ಲೋನ್ ಲಭ್ಯ..!

ಒಟ್ಟಿನಲ್ಲಿ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ವಾಹನ ಸವಾರರ ಅನೂಕಲಕ್ಕೆ ಇದು ಸಹಕಾರಿಯಾಗಲಿದ್ದು, ಲೋನ್ ಸೌಲಭ್ಯದಿಂದಾಗಿ ಹಣಕಾಸು ಮುಗ್ಗಟ್ಟು ಇರುವ ಗ್ರಾಹಕರಿಗೆ ಇದು ವರವಾಗಲಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ಉಚಿತವಾಗಿ ಮರುಪಾವತಿಗೆ ಅವಕಾಶವಿರುವುದು ಸಹ ಪ್ರಮುಖ ಆಕರ್ಷಣೆಯಾಗಲಿದೆ.

Most Read Articles

ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಚಿಂತೆ ಬೀಡಿ- ಪ್ರತಿ ಚಾರ್ಜಿಂಗ್‌ಗೆ 350 ಕಿ.ಮಿ ಮೈಲೇಜ್ ನೀಡುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ನೋಡಿ..!

Kannada
Read more on auto news petrol diesel
English summary
Shriram Transport Finance And HPCL To Offer Cashless Fuel Filling Services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X