ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ನೀತಿ ಅಡಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್‌ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ.

By Praveen

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಸಿದ್ದಗೊಳಿಸಿದೆ. ಹೀಗಾಗಿ ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

Recommended Video

New Maruti Swift Launch: Price; Mileage; Specifications; Features; Changes
ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹೊಸ ಯೋಜನೆಯಿಂದ ಮಾಲಿನ್ಯ ತಡೆಗೆ ಸೂಕ್ತ ಮಾರ್ಗವಾಗಲಿದ್ದು, ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಲಿದೆ ಎಂದಿದ್ದಾರೆ.

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಜೊತೆಗೆ ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬಂದ ಬಿಡಿಭಾಗಗಳನ್ನು ಹೊಸ ಕಾರುಗಳ ತಯಾರಿಕೆಗೆ ಮರುಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಕಾರುಗಳ ಬೆಲೆಯನ್ನು ಕೂಡಾ ತಗ್ಗಿಸಬಹುದೆಂದು ಎಂಬ ಸಲಹೆ ನೀಡಿದ್ದಾರೆ.

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ದೇಶಾದ್ಯಂತ ಬರೋಬ್ಬರಿ 2.80 ಕೋಟಿ ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿದ್ದು, ಇದರಿಂದ ಶೇ. 65ರಷ್ಟು ಮಾಲಿನ್ಯ ತಗ್ಗಲಿದೆ ಎನ್ನಲಾಗಿದೆ.

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿ ಅಭಿಪ್ರಾಯವಾಗಿದೆ.

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಹೀಗಾಗಿ ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಕಾರುಗಳು ಸ್ಕ್ರ್ಯಾಪ್‌ಗೊಳ್ಳಲಿವೆ.

Trending On DriveSpark Kannada:

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

Most Read Articles

Kannada
English summary
Old Cars Scrapping Policy Almost Complete.
Story first published: Friday, February 16, 2018, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X