Just In
- 49 min ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
- 59 min ago ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ
- 1 hr ago ಈ ಕಾರಿನ ವಿಡಿಯೋ ಬಿಡುಗಡೆ ಮಾಡಿದ ಟೊಯೋಟಾ: ಫ್ರಾಂಕ್ಸ್ ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ!
- 4 hrs ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜು
Don't Miss!
- News Heavy Rain: ಇನ್ನೆರಡು ದಿನ ಮಾತ್ರ ರಾಜ್ಯದಲ್ಲಿ ಮಳೆ; ಎಲ್ಲೆಲ್ಲಿ ತಿಳಿಯಿರಿ
- Movies Shrirasthu Shubhamasthu:ಪೂರ್ಣಿಮಾ ವ್ರತ ಭಂಗ ಮಾಡಿದ ದೀಪಿಕಾ ಕೈ ತಿರುಪಿ ಆವಾಜ್
- Lifestyle ಈ ಲಕ್ಷಣಗಳು ನಿರ್ಲಕ್ಷ್ಯ ಮಾಡಲೇಬೇಡಿ, ಪಾರ್ಶ್ವವಾಯು ಆಗಲಿದೆ ಎಂಬುವುದರ ಲಕ್ಷಣಗಳಿವು
- Sports ರಾಹುಲ್ ಅಲ್ಲ, ಹಾರ್ದಿಕ್ ಅಲ್ಲ; ಭಾರತ ತಂಡಕ್ಕೆ ರೋಹಿತ್ ಶರ್ಮಾ ಉತ್ತರಾಧಿಕಾರಿ ಹೆಸರಿಸಿದ ಸುರೇಶ್ ರೈನಾ!
- Finance ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ?
- Technology Google: ಕಾಂಟ್ಯಾಕ್ಟ್ ಲೆಸ್ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್ ವಾಲೆಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು
ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ನೀತಿ ಅಡಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ.
ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ನೀತಿ ಅಡಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಸಿದ್ದಗೊಳಿಸಿದೆ. ಹೀಗಾಗಿ ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
Recommended Video
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹೊಸ ಯೋಜನೆಯಿಂದ ಮಾಲಿನ್ಯ ತಡೆಗೆ ಸೂಕ್ತ ಮಾರ್ಗವಾಗಲಿದ್ದು, ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಲಿದೆ ಎಂದಿದ್ದಾರೆ.
ಜೊತೆಗೆ ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬಂದ ಬಿಡಿಭಾಗಗಳನ್ನು ಹೊಸ ಕಾರುಗಳ ತಯಾರಿಕೆಗೆ ಮರುಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಕಾರುಗಳ ಬೆಲೆಯನ್ನು ಕೂಡಾ ತಗ್ಗಿಸಬಹುದೆಂದು ಎಂಬ ಸಲಹೆ ನೀಡಿದ್ದಾರೆ.
ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ದೇಶಾದ್ಯಂತ ಬರೋಬ್ಬರಿ 2.80 ಕೋಟಿ ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್ಗೊಳ್ಳಲಿದ್ದು, ಇದರಿಂದ ಶೇ. 65ರಷ್ಟು ಮಾಲಿನ್ಯ ತಗ್ಗಲಿದೆ ಎನ್ನಲಾಗಿದೆ.
ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿ ಅಭಿಪ್ರಾಯವಾಗಿದೆ.
ಹೀಗಾಗಿ ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಕಾರುಗಳು ಸ್ಕ್ರ್ಯಾಪ್ಗೊಳ್ಳಲಿವೆ.
Trending On DriveSpark Kannada: