ಅ.1ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಸುರಕ್ಷಿತ ವಾಹನ ಚಾಲನೆಗಾಗಿ ಕೇಂದ್ರ ಸರ್ಕಾರವು ಹಲವಾರು ಹೊಸ ಕಾಯ್ದೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದೀಗ ಮತ್ತೊಂದು ಹೊಸ ಸುರಕ್ಷಾ ಕ್ರಮವನ್ನು ತಪ್ಪದೇ ಪಾಲಿಸಬೇಕೆಂದು ಸೂಚನೆ ನೀಡಿದೆ.

By Praveen Sannamani

ಸುರಕ್ಷಿತ ವಾಹನ ಚಾಲನೆಗಾಗಿ ಕೇಂದ್ರ ಸರ್ಕಾರವು ಹಲವಾರು ಹೊಸ ಕಾಯ್ದೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದೀಗ ಮತ್ತೊಂದು ಹೊಸ ಸುರಕ್ಷಾ ಕ್ರಮವನ್ನು ತಪ್ಪದೇ ಪಾಲಿಸಬೇಕೆಂದು ಸೂಚನೆ ನೀಡಿದೆ. ಇಲ್ಲವಾದ್ರೆ ರೂ.300 ದಂಡ ಪಾವತಿಬೇಕಲ್ಲದೇ ಪದೇ ಪದೇ ಸಾರಿಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ನಿಮ್ಮ ಚಾಲನಾ ಪರವಾನಿಯೂ ರದ್ದುಗೊಳ್ಳುವ ಸಾಧ್ಯತೆಗಳಿವೆ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಕೇಂದ್ರ ಸಾರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಕಾರು ಚಾಲನೆಯ ವೇಳೆ ರಿಯರ್ ವ್ಯೂ ಮಿರರ್(ಹಿನ್ನೊಟದ ಕನ್ನಡಿ) ಅನ್ನು ಕಡ್ಡಾಯವಾಗಿ ತೆರೆದಿಬೇಕು ಎಂಬ ನಿಯಮವನ್ನು ಜಾರಿಗೆ ತರುತ್ತಿದ್ದು, ಒಂದು ವೇಳೆ ಕಾರು ಚಾಲನೆ ವೇಳೆ ಒಂದು ಬದಿ ತೆರೆದು ಇನ್ನೊಂದು ಬದಿಯ ಕನ್ನಡಿಯು ಮುಚ್ಚಿಕೊಂಡಿದ್ದರು ದಂಡ ಬೀಳುವುದು ಗ್ಯಾರಂಟಿ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

ಹೌದು, ಕೇಂದ್ರ ಸಾರಿಗೆ ಇಲಾಖೆ ಜಾರಿ ತರುತ್ತಿರುವ ನಿಯಮವು ಅಕ್ಟೋಬರ್ 1ರಿಂದಲೇ ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಸುರಕ್ಷಾ ದೃಷ್ಟಿಯಿಂದ ಕಾರಿನ ರಿಯರ್ ವ್ಯೂ ಮಿರರ್‌ಗಳನ್ನು ತೆರೆದಿಟ್ಟಿದ್ದರೆ ಆಗಬಹುದಾದ ಅಪಘಾತಗಳನ್ನು ತಡೆಯಲು ಇದು ನೆರಲಿವೆ ಬರಲಿದೆ ಎನ್ನುವುದು ಹೊಸ ನಿಯಮದ ವಾದ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ನಿಯಮ ಉಲ್ಲಂಘಿಸಿದ್ರೆ ರೂ.300 ದಂಡ

ಸಾರಿಗೆ ಇಲಾಖೆಯು ಜಾರಿಗೆ ತರುತ್ತಿರುವ ಹೊಸ ನಿಯಯ ಉಲ್ಲಂಘನೆ ಮಾಡಿದ್ರೆ ಪ್ರತಿ ಬಾರಿಯೂ ರೂ. 300 ದಂಡ ಪಾವತಿಸಬೇಕಾಗುತ್ತೆ. ಇದರ ಜೊತೆಗೆ ಹೊಸ ನಿಯಮವನ್ನು ಮಿತಿ ಮೀರಿ ಉಲ್ಲಂಘನೆ ಮಾಡುತ್ತಿದ್ದರೇ ಚಾಲನಾ ಪರವಾನಿಗೂ ಸಂಕಷ್ಟ ತಪ್ಪಿದ್ದಲ್ಲ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಇನ್ನೂ ಹೊಸ ನಿಯಮವು ಕಾರು, ಬಸ್ ಮತ್ತು ವಾಣಿಜ್ಯ ವಾಹನಗಳಿಗೂ ಅನ್ವಯವಾಗಲಿದ್ದು, ದ್ವಿಚಕ್ರ ವಾಹನಗಳಿಗೂ ಈ ನಿಯಮ ಅನ್ವಯವಾಗಲಿದೆ? ಎನ್ನುವ ಯಾವುದೇ ಬಗ್ಗೆ ಯಾವುದೇ ಸ್ಪಷ್ಟ ವರದಿಗಳಿಲ್ಲ. ಹೀಗಾಗಿ ನಿಯಮ ಜಾರಿಗೂ ಮುನ್ನವೇ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಹೊಸ ಕಾಯ್ದೆ ಯಾಕೆ?

ಕಾರು ಚಾಲನೆಯ ವೇಳೆ ರಿಯರ್ ವ್ಯೂ ಮಿರರ್ ಅನ್ನು ಕಡ್ಡಾಯವಾಗಿ ತೆರೆದಿಬೇಕು ಎಂಬ ನಿಯಮವನ್ನು ಜಾರಿಗೆ ಮಾಡುತ್ತಿರುವುದು ಸುರಕ್ಷೆ ದೃಷ್ಠಿಯಿಂದ ಉತ್ತಮ ನಿರ್ಧಾರ ಎನ್ನಲಾಗಿದ್ದು, ಕೆಲವರು ಫ್ಯಾಶನ್‌ಗಾಗಿ ರಿಯರ್ ವ್ಯೂ ತೆರೆದೆ ವೇಗದ ಚಾಲನೆ ಮಾಡುತ್ತಿರುತ್ತಾರೆ. ಈ ವೇಳೆ ಹಿಂಬದಿಯಲ್ಲಿ ಬರುವ ವಾಹನ ಸವಾರರಿಗೆ ತೊಂದರೆಯಾಗುವುದಲ್ಲದೇ ಸ್ವಲ್ಪವೇ ಹೆಚ್ಚು ಕಡಿಮೆ ಆದರೂ ಅಪಘಾತ ತಪ್ಪಿದ್ದಲ್ಲ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಹೊಸ ನಿಯಮದಿಂದ ಅಪಘಾತಗಳಿಗೆ ಬ್ರೇಕ್

ರಿಯರ್ ವ್ಯೂ ಮಿರರ್ ಅನ್ನು ತೆರೆದುಕೊಂಡು ವಾಹನ ಚಾಲನೆ ಮಾಡುವುದರಿಂದ ಅದು ಸರ್ಕಾರಕ್ಕೆ ಲಾಭವಲ್ಲ. ಬದಲಾಗಿ ಆಗಬಹುದಾದ ಅಪಘಾತಗಳಲ್ಲಿ ವಾಹನ ಸವಾರರ ಜೀವ ಉಳಿಸಲು ಇದೊಂದು ಉತ್ತಮ ಮಾರ್ಗ ಎನ್ನಬಹುದು.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಇನ್ನು ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸದ ಹಿನ್ನೆಲೆ ಅನೇಕ ವಾಹನ ಸವಾರರು ಮತ್ತು ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಇದೇ ಕಾರಣಕ್ಕೆ ಕೆಲವು ರಸ್ತೆ ನಿಯಮಗಳನ್ನು ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರವು ಮೊತ್ತೊಂದು ಹೆಜ್ಜೆ ಮುಂದೆ ಹೋಗಿ ಅಪಘಾತದಲ್ಲಿ ಮೃತರ ಕುಟಂಬಗಳಿಗೆ ಇದುವರಗೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವುದಲ್ಲದೇ ಪರಿಹಾರದ ಮೊತ್ತವನ್ನು ಪಡೆಯುವಲ್ಲಿ ಇದುವರೆಗೆ ಇದ್ದ ಕೆಲವು ನಿಯಮಗಳನ್ನು ಸಡಿಸಲಾಗಿರುವುದು ಮತ್ತೊಂದು ಪ್ರಮುಖ ವಿಚಾರ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಸದ್ಯ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ರೂ. 50 ಸಾವಿರ ಪರಿಹಾರ ನೀಡುತ್ತಿದ್ದು, ಅಪಘಾತಗಳಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ರೂ.25 ಸಾವಿರ ಪರಿಹಾರ ಒದಗಿಸುತ್ತಿದೆ.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಆದ್ರೆ ಕೆಲವು ಅಪಘಾತ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಒದಗಿಸಲಾಗುವ ರೂ. 50 ಸಾವಿರ ಅಥವಾ ಗಾಯಾಳುಗಳಿಗೆ ಒದಗಿಸಲಾಗುವ ರೂ. 25 ಸಾವಿರ ಪರಿಹಾರ ಯಾವುದಕ್ಕೂ ಸಾಲದು. ಕಾರಣ, ಮೃತ ವ್ಯಕ್ತಿಯನ್ನು ನಂಬಿಕೊಂಡ ಕುಟುಂಬಸ್ಥರ ಪಾಡು ಹೇಳತಿರದು.

ಅ.1 ರಿಂದ ಹೊಸ ರೂಲ್ಸ್- ಕಾರು ಚಾಲನೆ ವೇಳೆ ಈ ತಪ್ಪು ಮಾಡಿದ್ರೆ ದಂಡ ಖಾಯಂ..!

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಪರಿಹಾರ ಮೊತ್ತವನ್ನು 50 ಸಾವಿರದಿಂದ 5 ಲಕ್ಷ ಹೆಚ್ಚಿಸಿದ್ದು, ಗಾಯಾಳುಗಳಿಗೆ 25 ಸಾವಿರದಿಂದ 2.5 ಲಕ್ಷ ಪರಿಹಾರ ಒದಗಿಸುವ ಸುತ್ತೋಲೆಗೆ ಸಹಿ ಹಾಕಿದೆ. ಜೊತೆಗೆ ಹೊಸ ನಿಯಮವು ಈ ಕೂಡಲೇ ಜಾರಿಗೆ ಬರುವಂತೆ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ನಿಯಮ ಸೂಕ್ತವಾಗಿದೆ ಎನ್ನಬಹುದು.

Most Read Articles

Kannada
Read more on traffic rules
English summary
People who drive with folded side view mirrors will be fined by cops.
Story first published: Friday, July 6, 2018, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X