ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

By Praveen Sannamani

ಇಟಲಿಯ ಐಕಾನಿಕ್ ಡಿಸೈನ್ ಮತ್ತು ಎಂಜಿನಿಯರ್ ಸಂಸ್ಥೆಯಾಗಿರುವ ಪಿನಿನ್ ಫರಿನಾ ಅತಿ ನೂತನ ಎಲೆಕ್ಟ್ರಿಕ್ ಸೆಡಾನ್ ಕಾರು ಒಂದನ್ನು ಅಭಿವೃದ್ಧಿಪಡಿಸಿದ್ದು, ವಿನೂತನ ವೈಶಿಷ್ಟ್ಯತೆ ಮತ್ತು ವಿನ್ಯಾಸದ ಜೊತೆಗೆ ಸಂಯೋಜನೆ ಹೊಂದಿರುವ ಈ ಕಾರು ಬಿಜೀಂಗ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಪಿನಿನ್ ಫರಿನಾ ಸಂಸ್ಥೆಯು ಸದ್ಯ ಮಹೀಂದ್ರಾ ಸಂಸ್ಥೆಯ ಅಧಿನದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಹಾಂಕಾಂಗ್‌ ಮೂಲದ ಹೈಬ್ರಿಡ್ ಕೆನೆಟಿಕ್ ಗ್ರೂಫ್ ಸಂಸ್ಥೆಗಾಗಿ ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾರನ್ನು ಡಿಸೈನ್ ಮಾಡಿರುವುದು ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಇದಕ್ಕೆ ಕಾರಣ ಹೈಬ್ರಿಡ್ ಕೆನೆಟಿಕ್ ಗ್ರೂಫ್ ಸಂಸ್ಥೆಗಾಗಿ ಸಿದ್ದಗೊಳಿಸಲಾಗಿರುವ ಹೆಚ್500 ಕಾರಿನ ವಿನ್ಯಾಸಗಳು ಆಟೋ ಉದ್ಯಮದಲ್ಲಿ ಇದುವರಿಗೆ ಪರಿಚಯಿಸಲಾದ ಕಾರು ಮಾದರಿಗಳಿಂತ ವಿಭಿನ್ನವಾಗಿದ್ದು, ಈ ಹಿಂದೆ ಪ್ರದರ್ಶನ ಮಾಡಲಾಗಿದ್ದ ಹೆಚ್600 ಕಾರು ಪರಿಕಲ್ಪನೆಗಿಂತಲೂ ಬೇರೆಯದ್ದೆ ವಿನ್ಯಾಸ ಪಡೆದಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಸ್ಪೋರ್ಟಿ ಲುಕ್ ಹೊಂದಿರುವ ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾರುಗಳು ಕ್ರೋಮ್ ಸ್ಲಾಟ್ ಗ್ರಿಲ್, ಸ್ಲಿಕ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ವಿನೂತನ ಮಾದರಿಯ ಫ್ರಂಟ್ ಬಂಪರ್, ಫ್ಯೂಚರಿಸ್ಟಿಕ್ ಫಾಗ್ ಲ್ಯಾಂಪ್ ಸೌಲಭ್ಯಗಳನ್ನು ಪರಿಕಲ್ಪನಾ ಮಾದರಿಯಲ್ಲಿ ಸೇರಿಸಲಾಗಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಇನ್ನು ಕಾರಿನ ಒಳ ವಿನ್ಯಾಸ ಬಗೆಗೆ ಹೇಳುವುದಾರರೇ, ವಿಸ್ತರಿತ ಇಂಟಿರಿಯರ್ ಜೊತೆ ಇನ್ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯವಿದ್ದು, ಕಾರಿನ ಕನ್‌ಸೋಲ್‌ನಲ್ಲೂ ಡಿಸ್‌ಫೈ, ಇನ್ಪೋಟೈನ್‌ಮೆಂಟ್ ಮತ್ತು ಕ್ಲೈಮೆಟ್ ಕಂಟ್ರೊಲರ್ ಒದಿಗಸಲಾಗಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ರಿಯರ್ ಸೀಟುಗಳನ್ನು ಕುಳಿತುಕೊಳ್ಳುವ ಸವಾರರಿಗೂ ಕನ್‌ಸೋಲ್ ಡಿಸ್‌ಫೈ ನೀಡಲಾಗಿದ್ದು, ಒಂದೇ ಸೂರಿನಡಿ ಎಲ್ಲಾ ಸ್ಮಾಟ್ ಕನೆಕ್ಟಿವಿಟಿ ಸೌಲಭ್ಯ ಇಲ್ಲಿ ದೊರೆಯುತ್ತದೆ. ಹೀಗಾಗಿ ಪಿನಿನ್ ಫರಿನಾ ಕಾರಿನ ಪರಿಕ್ಪನೆ ಒಂದು ಅದ್ಬುತ ಎನ್ನಬಹುದು.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಎಂಜಿನ್ ವೈಶಿಷ್ಟ್ಯತೆ

330ಕೆವಿ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿರುವ ಹೆಚ್500 ಸೆಡಾನ್ ಕಾರುಗಳು ಒಂದು ಚಾರ್ಜ್ ಆದಲ್ಲಿ 1 ಸಾವಿರ ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಕೇವಲ 4.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸಬಲ್ಲದು.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಜೊತೆಗೆ 250ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೆಚ್500 ಕಾನ್ಸೆಪ್ಟ್ ಸೆಡಾನ್ ಕಾರುಗಳು ಅಂತಾರಾಷ್ಟ್ರೀಯ ಗುಣಮಟ್ಟದ ಡ್ರೈವ್ ಟೆಕ್ನಾಲಜಿ ಪಡೆದುಕೊಳ್ಳಲಿದ್ದು, ಭವಿಷ್ಯದಲ್ಲಿ ಹೊಸ ಸಂಚಲನ ಸೃಷ್ಠಿಸುವ ಎಲ್ಲಾ ಗುಣಲಕ್ಷಣಗಳನ್ನು ಪಡೆದುಕೊಂಡಿದೆ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಅಧೀನ ಸಂಸ್ಥೆಯಾಗಿರುವ ಪಿನಿನ್ ಫರಿನಾ ಸಂಸ್ಥೆಯು ಕಾರ್ ಡಿಸೈನ್‌ ತಯಾರಿಸುವಲ್ಲಿ ಜನಪ್ರಿಯತೆ ಸಾಧಿಸಿದ್ದು, ಹೈಬ್ರಿಡ್ ಕೆನೆಟಿಕ್ ಗ್ರೂಫ್‌ಗಾಗಿ ಸಿದ್ದಗೊಳಿಸಲಾಗಿರುವ ಹೆಚ್500 ಕಾನ್ಸೆಪ್ಟ್ ಸೆಡಾನ್ ಕಾರುಗಳು ಲಗ್ಷುರಿ ಎಲೆಕ್ಟ್ರಿಕ್ ಕಾರು ಪ್ರಿಯರನ್ನು ಸೆಳೆದಿದೆ. ಆದ್ರೆ ಪರಿಕಲ್ಪನೆ ಕಾರು ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೆಚ್500 ಎಲೆಕ್ಟ್ರಿಕ್ ಸೆಡಾನ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಪಿನಿನ್ ಫರಿನಾ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

Most Read Articles

Kannada
English summary
Pininfarina H500 Electric Sedan Concept Revealed At Beijing Motor Show.
Story first published: Tuesday, May 1, 2018, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X