ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಪ್ಲೇನ್- ಆದ್ರು ಕಾರಿನಲ್ಲಿದ್ದವರಿಗೆ ಸೇಫ್ ಆಗಿದ್ದು ಹೇಗೆ ಗೊತ್ತಾ?

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರುವೊಂದರ ಮೇಲೆ ಆಕಸ್ಮಿಕವಾಗಿ ಪ್ಲೇನ್ ಒಂದು ಅಪ್ಪಳಿಸಿರುವ ಘಟನೆ ನಡೆದಿದೆ. ಆದರೂ ಕಾರು ಬಲಿಷ್ಠ ಬಾಡಿ ಕಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಕೊಂಚವು ಗಾಯಗಳಿಲ್ಲದೆ ಕ್ರಾಶ್‍ನಿಂದ ಬಚಾವ್ ಆಗಿದ್ದಾರೆ. ಅಸಲಿಗೆ ನಡೆದುದ್ದೇನು ಎಂಬುವುದನ್ನು ತಿಳಿಯಲು ಮುಂದಕ್ಕೆ ಓದಿರಿ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಡ್ರಗ್ ಎನ್ಫೋರ್ಸ್ಮೆಂಟ್ ಏಜನ್ಸಿಗೆ ಸೇರಿದ ಸೆನ್ನಾ 206 ಎಂಬ ಪ್ಲೇನ್ ಒಂದು ಟೆಸ್ಟಿಂಗ್ ನಡೆಸುತ್ತಿರುವಾ ತಾಂತ್ರಿಕ ದೋಷದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಮೂಲದ ಒನಿಯಲ್ ಕುರೂಪ್ ಎನ್ನುವವರು ಟೆಸ್ಲಾ ಮಾಡೆಲ್ ಎಕ್ಸ್ ಕಾರಿನ ಮೇಲೆ ಅಪ್ಪಳಿಸಿದೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಈ ಘಟನೆಯು ಟೆಕ್ಸಾಸ್‍‍ನ ಸುಗರ್ ಲ್ಯಾಂಡ್‍‍ನಲ್ಲಿ ಸಂಭವಿಸಿದ್ದು, ಪ್ಲೇ‍ನ್‍‍ನಲ್ಲಿದ್ದ ಮೂವರು ಏಜೆಂಟ್‍‍ಗಳಲ್ಲಿ ಒಬ್ಬರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಈ ಘಟನೆಯಲ್ಲಿನ ಪ್ರಮುಖ ಅಂಶವೆಂದರೇ, ವೇಗದಿಂದ ಬಂದ ಪ್ಲೇನ್ ಅಪ್ಪಳಿಸಿದ ಕಾರಿನಲ್ಲಿದ್ದವರಿಗೆ ಕೊಂಚವು ಗಾಯವಾಗಲಿಲ್ಲ ಎಂದರೆ ನೀವು ನಂಬಲೇಬೇಕು.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಹೌದು, ಟೆಸ್ಲಾ ಮಾಡೆಲ್ ಎಕ್ಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒನಿಯಲ್ ಮತ್ತು ಅವರ ಪುತ್ರ ಅಪಘಾತದ ವೇಳೆ ಗಾಯಗಳಾಗದೆ ಸುರಕ್ಷಿತವಾಗಿ ಪರಾಗಿದ್ದು, ಭೀಕರ ದುರಂತದಲ್ಲೂ ಜೀವ ಉಳಿಸಿದ ಟೆಸ್ಲಾ ಮಾಡೆಲ್ ಎಕ್ಸ್ ಕಾರಿನ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದವನ್ನು ಹೇಳಿಕೊಂಡಿದ್ದಾರೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಓನಿಯಲ್ ಅವರ ಪೋಸ್ಟ್ ನಲ್ಲಿ 'ಈ ಘಟನೆಯ ನಂತರ ನನ್ನ ಮತ್ತು ನನ್ನ ಮಗನ ಯೋಗಕ್ಷೇಮದ ಬಗ್ಗೆ ಹಲವರು ಕರೆ ಮಾಡಿ ವಿಚಾರಿಸಿದ್ದು, ನಾನು ಮತ್ತು ನನ್ನ ಮಗ ಆರವ್ ಇಬ್ಬರು ಸುರಕ್ಷಿತವಾಗಿ ಪಾರಾಗಿದ್ದೇವೆ. ದೇವರು ಮತ್ತು ಈ ಕಾರು (ಟೆಸ್ಲಾ ಮಾಡೆಲ್ ಎಕ್ಸ್) ನಮ್ಮನ್ನು ಕಾಪಾಡಿದೆ ಎಂದು ಹೇಳಿಕೊಂಡಿದ್ದಾರೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಇದರ ಜೊತೆಗೆ 'ಕಿಂಚಿತ್ತು ಗಾಯಗಳಾಗದೆ ಅಪಘಾತದಿಂದ ಪಾರಾಗಿದ್ದೇವೆ ಎಂದು ಹೇಳಿದರೂ ಯಾರೂ ನನ್ನ ಮಾತನ್ನು ನಂಬುತ್ತಿಲ್ಲ. ಸ್ವತಃ ಟೆಸ್ಲಾ ಸಂಸ್ಥೆಯು ಕೂಡಾ ಇದು ಯಾವುದೊ ಹುಡುಕಾಟಿಕೆಯ ಕರೆ ಇರಬೇಕು ಎಂದು ನನ್ನ ಕರೆಯನ್ನು ಲೆಕ್ಕಿಸಲಿಲ್ಲ. ಆಷ್ಟೆ ಯಾಕೆ ನನ್ನ ಹೆಂಡತಿಯೇ ನನ್ನ ಮಾತುಗಳನ್ನು ನಂಬಲಿಲ್ಲ. ಕೇವಲ ಒಂದು ಸೆಕೆಂಡಿನಲ್ಲಿ ನನ್ನ ಜೀವ ನನ್ನ ಕಣ್ಣು ಮುಂದೆ ಬಂದತಾಯ್ತು' ಎಂದು ಹೇಳಿಕೊಂಡಿದ್ದಾರೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಡಿಇಎ ಇಂದ ನಿರ್ಮಿತಗೊಂಡ ಅಪಘಾತಕ್ಕೀಡಾದ ವಿಮಾನವು ತರಬೇತಿಯ ಸಮಯದಲ್ಲಿ ತಾಂತ್ರಿಕ ದೋಷಗಳ ಕಾರಣ ಪೈಲೆಟ್ ರಸ್ತೆಯಲ್ಲಿಯೇ ಲ್ಯಾಂಡ್ ಮಾಡಲು ಮುಂದಾಗಿದ್ದರು. ಆದ್ರೆ ಈ ಘಟನೆ ನಡೆಯುವುದಕ್ಕೂ ಮುನ್ನವೇ ಹಲವಾರು ವಾಹನಗಳಿಗೆ ಮತ್ತು ಎಲೆಕ್ಟ್ರಿಕ್ ಲೈನ್‍‍ಗಳಿಗೆ ಅಪ್ಪಳಿಸಿರುವುದಾಗಿ ಮಾಹಿತಿ ದೊರೆತಿದೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಟೆಸ್ಲಾ ಸಂಸ್ಥೆಯ ಸಿಇಒ ಇಯಾನ್ ಮಾಸ್ಕ್ ಕೂಡಾ ತಮ್ಮ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಪಘಾತದಲ್ಲಿ ಯಾರಿಗೂ ಏನು ಆಗಲಿಲ್ಲ ಇದರಿಂದ ನನ್ನ ಮನಸ್ಸಿಗೆ ಸಮಾಧಾನ ತಂದಿದೆ ಎಂದಿದ್ದಾರೆ. ಹಾಗಾದ್ರೆ ಇಷ್ಟು ದೊಡ್ಡ ಪ್ರಮಾದದಲ್ಲೂ ಓನಿಯಲ್ ಕುರುಪ್ ಅವರ ಜೀವ ಉಳಿಯಲು ಕಾರಣವಾದ ಟೆಸ್ಲಾ ಮಾಡೆಲ್ ಎಕ್ಸ್ ಕಾರಿನ ಬಗ್ಗೆ ಮುಂದೆ ಓದಿ ತಿಳಿಯಿರಿ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಟೆಸ್ಲಾ ಮಾಡೆಲ್ ಎಕ್ಸ್ ಒಂದು ಎಲೆಕ್ಟ್ರಿಕ್ ವಾಹನವಾಗಿದ್ದು, ಪ್ರಂಪಂಚದಲ್ಲಿ ಲಭ್ಯವಿರುವ ಅತ್ಯಂತ ವೇಗವುಳ್ಳ ಸೆಡಾನ್ ಕಾರುಗಳಲ್ಲಿ ಇದು ಕೂಡಾ ಒಂದು. ಈ ಕಾರು ಆಲ್ ವ್ಹೀಲ್ ಡ್ರೈವ್ ಅನ್ನು ಸಹ ಪಡೆದುಕೊಂಡಿದೆ. ಒಂದು ಬಾರಿ ಚಾರ್ಜ್‍ಗೆ ಸುಮಾರು 475ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಟೆಸ್ಲಾ ಮಾಡೆಲ್ ಎಕ್ಸ್ ಕಾರು 0 ದಿಂದ ಗಂಟೆಗೆ 97ಕಿಲೋಮೀಟರ್ ಅನ್ನು ಕೇವಲ 2.9 ಸೆಕೆಂಡುಗಳಲ್ಲಿ ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಯುಎಸ್ಎ ಮಾರುಕಟ್ಟೆಯಲ್ಲಿ 5 ಸೀಟರ್, 6 ಸೀಟರ್ ಮತ್ತು 7 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿದೆ.

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

75 ಕಿಲೋ ವ್ಯಾಟ್ಸ್ ಅಥವಾ 100 ಕಿಲೋ ವ್ಯಾಟ್ಸ್ ಲಿಥಿಯಂ ಇಯಾನ್ ಬ್ಯಾಟರಿಗಳಿಂದ ಶಕ್ತಿಯನ್ನು ಈ ಕಾರು ಪಡೆಯಲಿದ್ದು, ಈ ಕಾರಿನಲ್ಲಿ ಮ್ಯಾಪ್ಸ್, ನ್ಯಾವಿಗೇಷನ್, ರಿಯಲ್ ಟೈಮ್ ಟ್ರಾಫಿಕ್ ಮಾಹಿತಿ, ಆಕ್ಟೀವ್ ಸೇಫ್ಟಿ ಟೆಕ್ನಾಲಜಿಸ್, ಕೊಲಿಷನ್ ಅಡ್ವಾನ್ಸ್ ಮತ್ತು ಆಟೋಮ್ಯಾಟಿಕ್ ಬ್ರೇಕಿಂಗ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

MOST READ: ಪೆಟ್ರೋಲ್ ಬೇಡಾ ಗುರು.. ವೋಡ್ಕಾ ಇದ್ರೆ ಸಾಕು ಈ ಬೈಕಿಗೆ..!

ಪ್ಲೇನ್ ಕ್ರಾಶ್‍ನಿಂದ ಇಬ್ಬರ ಜೀವ ಉಳಿಸಿದ ಟೆಸ್ಲಾ ಕಾರು.!

ಇವುಗಳಲ್ಲದೇ ಎಲ್ಇಡಿ ಫಾಲ್ ಲೈಟ್ಸ್, 3 ಆಸನಗಳ ಡೈನಾಮಿಲಕ್ ಎಲ್ಇಡಿ ಟರ್ನಿಂಗ್ ಲೈಟ್ಸ್ ದೊಡ್ಡ ಗಾತ್ರದ ಪ್ಯಾನರಮಿಕ್ ವಿಂಡ್‍‍ಶೀಲ್ಡ್ ಪ್ರೊಡಕ್ಷನ್, ಆಟೋಮ್ಯಾಟಿಕ್ ಕೀಲೆಸ್ ಎಂಟ್ರಿ ಮತ್ತು ಇನ್ನಿತರೆ ಫೀಚರ್‍‍ಗಳನ್ನು ಪಡೆದುಕೊಂಡಿದೆ.

Most Read Articles

ಜಗತ್ತಿನಲ್ಲೇ ಅತಿಹೆಚ್ಚು ಮೈಲೇಜ್ ಹೊಂದಿರುವ ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರುಗಳ ಮತ್ತಷ್ಟು ಚಿತ್ರಗಳನ್ನು ನೋಡಲು ಫೋಟೋ ಗ್ಯಾಲರಿಗೆ ಭೇಟಿ ನೀಡಿ..

Kannada
English summary
Plane crashes on a moving Tesla Model X – Owner escapes unhurt, thanks Tesla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X