ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಜರ್ಮನ್ ಮೂಲದ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ತನ್ನ ಹೊಸ ಮಿಷನ್ ಎ ಕ್ರಾಸ್ ಟೂರಿಸ್ಮೊ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯನ್ನು ಜಿನೇವಾದಲ್ಲಿ ಆರಂಭಗೊಂಡಿರುವ 2018ರ ಮೋಟರ್ ಶೋನಲ್ಲಿ ಪ್ರದರ್ಶಿಸಿದೆ.

By Rahul Ts

ಜರ್ಮನ್ ಮೂಲದ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ತನ್ನ ಹೊಸ ಮಿಷನ್ ಎ ಕ್ರಾಸ್ ಟೂರಿಸ್ಮೊ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯನ್ನು ಜಿನೇವಾದಲ್ಲಿ ಆರಂಭಗೊಂಡಿರುವ 2018ರ ಮೋಟರ್ ಶೋನಲ್ಲಿ ಪ್ರದರ್ಶಿಸಿದ್ದು, ಈ ಮೊದಲ ಬಾರಿಗೆ ಇದೇ ಮಾದರಿಯನ್ನು 2015ರಲ್ಲೂ ಅನಾವರಗೊಳಿಸಿತ್ತು.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಕಾರಿನ ವಿನ್ಯಾಸವು ಮಿಷನ್ ಇ ಮತ್ತು ಹೊಸದಾಗಿ ಬಿಡುಗಡೆಗೊಂಡ ಪೋರ್ಷೆ ಪನಾಮೆರಾ ಸ್ಪೋರ್ಟ್ ಟೂರಿಸ್ಮೊ ಕಾರಿನ ಮಿಶ್ರಣವನ್ನು ಪಡಿದಿದ್ದು, ಸಂಸ್ಥೆಯು ಮಾರುಕಟ್ಟೆಯಲ್ಲಿನ ಜೀರೊ-ಎಮಿಷನ್ ಕ್ರಾಸ್ ಯುಟಿಲಿಟಿ ವೆಹಿಕಲ್ (CUV) ಕಾರುಗಳು ಇರಲಿವೆಯೇ ಎಂದು ಪರಿಶೀಲಿಸಲಿದೆ.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಸಿಂಕ್ರೊನೌಸ್ ಎಲಿಕ್ಟ್ರಿಕ್ ಮೋಟಾರ್‍‍ಗಳನ್ನು ಪಡೆದಿದ್ದು, ಇದು ಎಲೆಕ್ಟ್ರಿಕ್ ಕ್ರಾಸ್ ಓವರ್ ಆಲ್-ವೀಲ್ ಡ್ರೈವ್ ಸೌಲಭ್ಯವನ್ನು ಹೊಂದಿರಲಿದೆ.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಈ ಕಾರು ಎರಡು ಮೋಟಾರ್ ಸಹಾಯದಿಂದ ಸುಮಾರು 590 ಬಿಹೆಚ್‍‍ಪಿ ಅಂದರೆ ಪೋರ್ಷೆ 911ಜಿಟಿಆರ್‍ಎಸ್ ಕಾರಿಗಿಂತೂ 76 ಬಿಹೆಚ್‍‍ಪಿ ಹೆಚ್ಚು ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದ್ದು, 3.5 ಸೆಕೆಂಡಿಗೆ 0-100 ಗಂಟೆಗೆ ಕಿಲೋಮೀಟರ್ ಸ್ಪೀಡ್‍‍ನಲ್ಲಿ ಚಲಿಸಬಲ್ಲದು. ಅಲ್ಲದೆ ಗಂಟೆಗೆ 250ಕಿಲೋಮೀಟರ್ ಚಲಿಸುವ ಟಾಪ್ ಸ್ಪೀಡ್‍ ಪಡೆದಿದೆ.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಹಲವು ತಾಂತ್ರಿಕತೆ ಮತ್ತು ವೈಶಿಷ್ಟ್ಯತೆಗಳನ್ನು ಪಡೆದಿದ್ದು, 15ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದ್ದು, ಸುಮಾರು 400 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯವನ್ನು ಪಡೆದಿರಲಿದೆಯಂತೆ.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ನಿಜವಾದ ಪೋರ್ಷೆ ಇ ಕಾರಿನ ಪರಿಕಲ್ಪನೆಯನ್ನು ಮೊದಲನೆಯದಾಗಿ 2015ರ ಫ್ರಾಂಕ್ಪರ್ಟ್ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಯಿತ್ತು. ಮಿಷನ್ ಇ ಪರಿಕಲ್ಪನೆಯು ಭವಿಷ್ಯದ ಎಲ್ಲಾ ಪೂರ್ಣ-ವಿದ್ಯುತ್ ಪೋರ್ಷೆ ಮಾದರಿಗಳಿಗೆ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಪೋರ್ಷೆ ಹೇಳಿಕೊಂಡಿದೆ.

ಅನಾವರಣಗೊಂಡ ಪೋರ್ಷೆ ಮಿಷನ್ ಇ ಕ್ರಾಸ್ ಟೂರಿಸ್ಮೊ ಪರಿಕಲ್ಪನೆ

ಬೇರೆಲ್ಲಾ ವಾಹನ ತಯಾರಕರು ಮುಂದಿನ ತಲೆಮಾರಿನ ಕಾರುಗಳನ್ನು ತಯಾರಿಸಲು ಮುಂದಾಗಿದ್ದು, ಪೋರ್ಷೆ ಸಂಸ್ಥೆ ಕೂಡ ಇದರಲ್ಲಿ ಭಾಗಿಯಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಉತ್ಪಾದನೆಗಾಗಿ ಜಾಗ್ವಾರ್ ಮತ್ತು ಟೆಸ್ಲಾ ಜೊತೆಗೂ ಒಪ್ಪಂದ ಮಾಡಿಕೊಂಡಿರು ಪೋರ್ಷೆ, ಐ ಪೇಸ್ ಮತ್ತು ಮಾಡೆಲ್ ಎಕ್ಸ್ P100D ಮಾದರಿಯಲ್ಲಿ ತನ್ನ ಹೊಸ ಕಾರನ್ನು ರಸ್ತೆಗಿಳಿಸಲಿದೆ.

Most Read Articles

Kannada
English summary
Porsche Mission E Cross Turismo Concept Unveiled — Specs, Features & Images.
Story first published: Wednesday, March 7, 2018, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X