ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿವೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

2017ರಲ್ಲಿ ಸುಮಾರು 1.50 ಲಕ್ಷ ಭೀಕರ ರಸ್ತೆ ಅಪಘತಾತಗಳು ಸಂಭವಿಸಿದ್ದು, ಅವುಗಳಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಾಕ್ಕೆ ಈಡಾಗಿದೆ. ನಡೆದ ಅಷ್ಟು ಅಪಘಾತಗಳ ಪೈಕಿ ಸುಮಾರು 6,762 ಮಂದಿ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಇಲಾಖೆಯು ಶೀಘ್ರದಲ್ಲೆ ದೇಶದಲ್ಲಿನ ಆಟೋ ಚಾಲಕರಿಗೆ ಶಾಕಿಂಗ್ ವಿಚಾರವನ್ನು ನೀಡಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಹೌದು, 2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ತಯಾರಕ ಸಂಸ್ಥಗಳು ತಾವು ಉತ್ಪಾದಿಸುವ ಆಟೋ ರಿಕ್ಷಾಗಳಲ್ಲಿ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಉಪಕರಣಗಳನ್ನು ಅಳವಡಿಸಬೇಕಾಗಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ರಸ್ತೆ ಸಾರಿಗೆ ಇಲಾಖೆಯ ಪ್ರಕಾರ 2019ರ ಅಕ್ಟೊಬರ್ ತಿಂಗಳಿನಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿ ಆಟೋ ಮಾದರಿಗಳು ಬಾಗಿಲುಗಳು ಅಥವಾ ಪ್ರಯಾಣಿಕರು ನಿಯಂತ್ರಣ ತಪ್ಪಿ ಕೆಳಗೆ ಬೀಳದಿರುವ ಹಾಗೆ ಸಲಕರಣೆಗಳನ್ನು ಪಡೆದುಕೊಂಡಿರಬೇಕಿದ್ದು, ಅಟೋ ರಿಕ್ಷಾ ಚಾಲಕರು ಸೀಟ್‍ಬೆಲ್ಟ್ ಅನ್ನು ಸಹ ಧರಿಸಬೇಕಾಗಿರುತ್ತದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಸೀಟ್ ಬೆಲ್ಡ್ ಕಡ್ದಾಯವಲ್ಲದೇ ಡ್ರೈವರ್ ಸೀಟ್ ಮತ್ತು ಪ್ರಯಾಣಿಕರ ಸೀಟ್ ಉದ್ದಳತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಕಾರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳು ಬಂದರೂ ಬಹುತೇಕರು ಆಟೋ ರಿಕ್ಷಾಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಹೊಸ ಆಟೋ ರಿಕ್ಷಾಗಳು ಚಾಲಕ ಮತ್ತು ಪ್ರಯಾಣಿಕರು ಕೂರವ ಜಾಗದಲ್ಲಿ ವಿಶಾಲವಾದ ಲೆಗ್‍ರೂಂ'ಗೆ ಸರಿಹೊಂದುವ ಜಾಗವನ್ನು ನೀಡಬೇಕಾಗಿದೆ. ಇದರ ಜೊತೆಗೆ ವಿಶೇಷವಾದ ಹೆಡ್‍ಲ್ಯಾಂಪ್‍ಗಳನ್ನು ಸಹ ನೀಡಬೇಕಿದ್ದು, ಪ್ರಸ್ತುತ ಸಿಂಗಲ್ ಯೂನಿಟ್ ಅನ್ನು ಬಳಸುತ್ತಿರುವ ಜಾಗದಲ್ಲಿ ಎರಡು ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಬೇಕಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಕೊನೆಯ ಮೈಲಿ ಸಂಪರ್ಕಕ್ಕೆ ಆಟೋ ರಿಕ್ಷಾಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ಆಟೋ ರಿಕ್ಷಾಗಳು ಅನುಕೂಲಕರ ಮತ್ತು ಆರ್ಥಿಕವಾಗಿರುತ್ತವೆಯಾದರೂ ಈಗಾಗಲೇ ಅದರ ಸುರಕ್ಷತೆಯ ಮೇಲೆ ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆದಿವೆ. ಆಟೋ ರಿಕ್ಷಾಗಳ ಮಾರಾಟವು ವರ್ಷಕ್ಕೆ 5-6 ಲಕ್ಷಗಳ ನಡುವೆ ನಿಲ್ಲುತ್ತಿದ್ದು, ಬಜಾಜ್ ಆಟೋ ಆಟೋ ರಿಕ್ಷಾ ವಿಭಾಗದಲ್ಲಿ ಪ್ರಮುಖ ಪಾಲು ಹೊಂದಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ದೇಶದಲ್ಲಿನ ಹಲವಾರು ಪ್ರಮುಖ ನಗರಗಳಲ್ಲಿ ಅದೆಷ್ಟೋ ಟಾಕ್ಸಿ ಸಂಸ್ಥೆಗಳು ತಲೆ ಎತ್ತಿದರೂ ಆಟೋರಿಕ್ಷಾಗಳಿರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಸದ್ಯ ಮಾರುಕಟ್ಟೆಯಲ್ಲಿ 4 ಸ್ಟ್ರೋಕ್ ಆಟೋಗಳು ಬಂದರೂ ಸಹ ಇನ್ನು ಕೆಲವು ಆಟೋರಿಕ್ಷಾ ಚಾಲಕರು 2 ಸ್ಟ್ರೋಕ್ ವಾಹನವನ್ನೇ ಬಳಕೆ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಈ ನಿಟ್ಟಿನಲ್ಲಿ ಆಟೊ ರಿಕ್ಷಾ ತಯಾರಕ ಸಂಸ್ಥಗಳಾದ ಬಜಾಜ್ ಆಟೋ ಮತ್ತು ಮಹೀಂದ್ರಾ ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ತಯಾರಿಸುವ ಯೋಜನೆಯಲ್ಲಿದ್ದು, ಮಹೀಂದ್ರಾ ಸಂಸ್ಥೆಯು ಈಗಾಗಲೇ ತಮ್ಮ ಟ್ರಿಯೋ ಆಟೊರಿಕ್ಷಾಗಳನ್ನು ಬಿಡುಗಡೆಗೊಳಿಸಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ದೇಶದ ಪ್ರಮುಖನಗರಗಳಲ್ಲಿ ಇಂಧನ ಆಧಾರಿತ ಆಟೋರಿಕ್ಷಾಗಳು ಕಡಿಮೆಯಾದಲ್ಲಿ ವಾಯು ಮಾಲಿನ್ಯವು ಸಹ ಕಡಿಮೆ ಆಗುತ್ತದೆ ಎನ್ನುವ ಆಲೋಚನೆಯೊಂದಿಗೆ ಮಹೀಂದ್ರಾ ಸಂಸ್ಥೆಯು ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪರಿಚಯಿಸಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಮಹೀಂದ್ರಾ ಸಂಸ್ಥೆಯು ಟ್ರಿಯೊ ಮತ್ತು ಟ್ರಿಯೊ ಯಾರಿ ಎಂಬ ಎರಡು ಎಲೆಕ್ಟ್ರಿಕ್ ಆಟೊರಿಕ್ಷಾಗಳನ್ನು ಬಿಡುಗಡೆಗೊಳಿಸಿದ್ದು, ಟ್ರಿಯೋ ವಾಹನದಲ್ಲಿ ಮೂವರು ಮತ್ತು ಟ್ರಿಯೊ ಯಾರಿ ವಾಹನದಲ್ಲಿ ಐದು ಮಂದಿ ಕೂತು ಪ್ರಯಾಣಿಸಬಹುದಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್ ಆಟೋಗಳು ಎಕ್ಸ್ ಶೋರಂ ಬೆಂಗಳೂರಿನ ಪ್ರಕಾರ ರೂ. 2.22 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಐಪಿ 67 ರೇಟೆಡ್ ಬ್ಯಾಟರಿ ಬಾಕ್ಸ್ ಉತ್ತಮ ಬ್ಯಾಟರಿ ಸುರಕ್ಷತೆಯನ್ನು ಒದಗಿಸುತ್ತದೆ, ಹಿಂಭಾಗದ ಇನ್‍ಬ್ಯುಲ್ಟ್ ಕ್ರ್ಯಾಶ್ ಗಾರ್ಡ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಈ ವೈಶಿಷ್ಟ್ಯಗಳು ಮಾಲೀಕರನ್ನು ಮತ್ತು ಚಾಲಕರನ್ನು 20-25% ರಷ್ಟು ಲಾಭ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ. ಟ್ರಿಯೊ ಪ್ರತಿ ಕಿ.ಮಿಗೆ 0.50 ರೂ. ವೆಚ್ಚವನ್ನು ನಿರ್ವಹಿಸುತ್ತಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಇದರಲ್ಲಿ ಅಳವಡಿಸಲಾಗಿರುವ ಲೀಥಿಯಂ ಐಯಾನ್ ಬ್ಯಾಟರಿಗಳಿಗೆ 5 ವರ್ಷಗಳ ಕಾಲ ಜೀರೋ ಮೈಂಟೈನೆನ್ಸ್ ಹೊಂದಿರಲಿದೆ ಮತ್ತು ಟ್ರಿಯೊ ಆಟೋ ಬ್ರೇಕ್ ಹಾಕಿದ ಸಮಯದಲ್ಲಿ ಇದರಲ್ಲಿನ ಕೈನೆಟಿಕ್ ಎನರ್ಜಿ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂನ ಮುಖಾಂತರ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

MOST READ: ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ ನಟ ಸಿಂಬು ಈಗ ಬೆಂಟ್ಲಿ ಒಡೆಯ

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಇನ್ನು ಮಹೀಂದ್ರಾ ಟ್ರಿಯೊ ಯಾರಿ ವಾಹನದಲ್ಲಿ ಅಳವಡಿಸಲಾದ 3.69 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿ 2ಕಿಲೋ ವ್ಯಾಟ್ಸ್ ಪೀಕ್ ಪವರ್ ಮತ್ತು 17.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಒಂದು ಬಾರಿಯ ಚಾರ್ಜ್‍ಗೆ ಸುಮಾರು 80 ಕಿಲೋಮೀಟರ್ ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಹಾಗಾದರೆ ರಸ್ತೆ ಸಾರಿಗೆ ಇಲಾಖೆಯು ಜಾರಿ ಮಾಡಲಿರುವ ಈ ಹೊಸ ಕಾಯಿದೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ...

Source: The Times Of India

Most Read Articles

Kannada
English summary
Rickshaw safety features compulsory from 1st Oct 2019 – Seatbelt, doors, 2 headlights. Rear in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X