ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಲಿನಿಯನ್ ಕಾರು ಭಾರತದಲ್ಲಿ ಬಿಡುಗಡೆಯಾಗಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಮೊದಲ ರೋಲ್ಸ್ ರಾಯ್ಸ್ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಐಷಾರಾಮಿ ಸೆಡಾನ್‌ ಕಾರುಗಳ ನಿರ್ಮಾಣದಲ್ಲಿ ಹೆಸರುವಾಸಿವಾಗಿರುವ ರೋಲ್ಸ್ ರಾಯ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರು ಮಾದರಿಗಳ ನಿರ್ಮಾಣಕ್ಕೆ ಕೈಹಾಕಿದ್ದು, ಕೇವಲ ಐಷಾರಾಮಿ ಅಷ್ಟೇ ಅಲ್ಲದೇ ಆಪ್ ರೋಡ್ ವೈಶಿಷ್ಟ್ಯತೆಗಳನ್ನು ಹೊತ್ತುಬಂದಿರುವ ಕಲಿನಿಯನ್ ಕಾರು ನೂರಕ್ಕೂ ಹೆಚ್ಚು ವಿನೂತನ ಸೌಲಭ್ಯಗಳೊಂದಿಗೆ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಎಸ್‌ಯುವಿ ಕಾರುಗಳಿಂತಲೂ ಇದು ವಿಶೇಷ ಎನ್ನಿಸಲಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಆರ್ಕಿಟೆಕ್ಚರ್ ಆಫ್ ಲಗ್ಷುರಿ ಎನ್ನುವ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಲಿನಿಯನ್ ಕಾರು ಉತ್ಪಾದನೆಗೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಫ್ಯಾಂಟಮ್ VIII ಕಾರಿಗಿಂತಲೂ ಕೆಳದರ್ಜೆಯಲ್ಲಿ ಕಲಿನಿಯನ್ ಕಾರು ಮಾರಾಟಗೊಳ್ಳಲಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ವಿಶ್ವದರ್ಜೆ ಐಷಾರಾಮಿ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಲಿನಿಯನ್ ಕಾರಿನ ಬೆಲೆಯನ್ನು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 6.95 ಕೋಟಿ ಬೆಲೆ ಹೊಂದಿದ್ದು, ಇದು ಆನ್ ರೋಡ್ ಬೆಲೆ ಪ್ರಕಾರ ರೂ. 8.50 ಕೋಟಿ ಬೆಲೆ ಪಡೆದುಕೊಳ್ಳಲಿವೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಲಿನಿಯನ್ ಅಂದ್ರೆ ಏನು?

ರೋಲ್ಸ್ ರಾಯ್ಸ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಮೊದಲ ಎಸ್‌ಯುವಿಗೆ ಕಲಿನಿಯನ್ ಎಂದು ನಾಮಕರಣ ಮಾಡಲು ಹಲವು ಕಾರಣಗಳಿದ್ದು, ಕಲಿನಿಯನ್ ಎನ್ನುವುದು ಜಗತ್ತಿನ ಅತಿ ದುಬಾರಿ ವಜ್ರದ ಮಾದರಿಯಾಗಿದೆ. ಇದು ಮೊದಲ ಬಾರಿಗೆ 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾಗಿದ್ದಲ್ಲದೆ 3,106 ಕ್ಯಾರೆಟ್ ವೈಶಿಷ್ಟ್ಯತೆಗಳೊಂದಿಗೆ ಜಗತ್ತಿನ ಅತಿ ದುಬಾರಿ ವಸ್ತುಗಳಲ್ಲಿ ಅದು ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಹೀಗಾಗಿಯೇ ರೋಲ್ಸ್ ರಾಯ್ಸ್ ಸಂಸ್ಥೆಯು ತನ್ನ ಮೊದಲ ಎಸ್‌ಯುವಿಯನ್ನು ಕಲಿನಿಯನ್ ಎಂದು ನಾಮಕರಣ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಎಸ್‌ಯುವಿ ಎಂದು ವರ್ಣನೆ ಮಾಡಿದ್ದು, ಕಾರಿನ ಪ್ರತಿ ಇಂಚಿಂಚೂ ಕೂಡಾ ಒಂದೊಂದು ವಿಶೇಷತೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಾರಿನ ಡಿಸೈನ್

ಕಲಿನಿಯನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಲಿನಿಯನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿದ್ದು, ಇದು ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಲಿನಿಯನ್ ಕಾರಿನ ಉದ್ದಳತೆ

ಎಸ್‌ಯುವಿ ಹೆಸರಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರುಗಳು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕಾರಿನ ಒಳವಿನ್ಯಾಸ

ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯವನ್ನು ಇದಲ್ಲಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇದು ತ್ರಿ ಬಾಕ್ಸ್ ಎಸ್‌ಯುವಿ!

ಹೌದು, ಕಲಿನಿಯನ್ ಕಾರುಗಳನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇನ್ನು ಮುಂದುವರೆದು, ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

ಕಲಿನಿಯನ್ ಕಾರುಗಳು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಬೆಂಟ್ಲಿ ಬೆಂಟಾಗಾ ಎಸ್‌ಯುವಿ ಮತ್ತು ಲಂಬೋರ್ಗಿನಿ ಉರಸ್ ಎಸ್‌ಯುವಿ ಕಾರುಗಳಿಗೆ ಕುಲಿನಿಯನ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಭಾರತೀಯ ಮಾರುಕಟ್ಟೆಯಲ್ಲೂ ಸಹ ಕಲಿನಿಯನ್ ಖರೀದಿಗಾಗಿ ನೂರಕ್ಕೂ ಹೆಚ್ಚು ಉದ್ಯಮಿಗಳು ಮತ್ತು ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ.

Most Read Articles

Kannada
English summary
Rolls Royce Cullinan Launched In India At Rs 6.95 Crore — The World's Most Luxurious Off-Roader.
Story first published: Monday, December 3, 2018, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X