ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕಲ್ಲಿನನ್...

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್ ತನ್ನ ಮೊದಲ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಬೃಹತ್ ಯೋಜನೆಯಲಿದ್ದು, ಇದೀಗ ಹೊಸ ಕಾರಿನ ಬಗೆಗಿನ ಮಹತ್ವದ ವೈಶಿಷ್ಟ್ಯತೆಗಳನ್ನು ಅನಾವರಣಗೊಳಿಸಿದೆ.

By Praveen Sannamani

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್ ತನ್ನ ಮೊದಲ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಬೃಹತ್ ಯೋಜನೆಯಲಿದ್ದು, ಇದೀಗ ಹೊಸ ಕಾರಿನ ಬಗೆಗಿನ ಮಹತ್ವದ ವೈಶಿಷ್ಟ್ಯತೆಗಳನ್ನು ಅನಾವರಣಗೊಳಿಸಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ನೂರಕ್ಕೂ ಹೆಚ್ಚು ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿರುವ ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಎಸ್‌ಯುವಿ ಕಾರಿಗೆ ಕಲ್ಲಿನನ್ ಎಂದು ನಾಮಕರಣ ಮಾಡಲಾಗಿದ್ದು, ಕುಲ್ಲಿನನ್ ಕಾರಿನ ವಿನ್ಯಾಸಗಳು ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಕಾರುಗಳಿಂತ ಅತಿವಿನೂತ ತಂತ್ರಜ್ಞಾನಗಳೊಂದಿಗೆ ಸಿದ್ದಗೊಂಡಿರುವುದು ಮತ್ತೊಂದು ವಿಶೇಷ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಕಲ್ಲಿನನ್ ಅರ್ಥ?

ರೋಲ್ಸ್ ರಾಯ್ಸ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಮೊದಲ ಎಸ್‌ಯುವಿಗೆ ಕಲ್ಲಿನನ್ ಎಂದು ನಾಮಕರಣ ಮಾಡಲು ಹಲವು ಕಾರಣಗಳಿದ್ದು, ಕಲ್ಲಿನನ್ ಎನ್ನುವುದು ಜಗತ್ತಿನ ಅತಿ ದುಬಾರಿ ವಜ್ರದ ಮಾದರಿಯಾಗಿದೆ. ಇದು ಮೊದಲ ಬಾರಿಗೆ 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾಗಿದ್ದಲ್ಲದೇ 3,106-ಕ್ಯಾರೆಟ್ ವೈಶಿಷ್ಟ್ಯತೆಗಳೊಂದಿಗೆ ಜಗತ್ತಿನ ಅತಿ ದುಬಾರಿ ವಸ್ತುಗಳಲ್ಲಿ ಅದು ಒಂದು ಎಂಬ ಹೆಗ್ಗಳಿಕೆ ಪಡೆದಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಹೀಗಾಗಿಯೇ ರೋಲ್ಸ್ ರಾಯ್ಸ್ ತನ್ನ ಮೊದಲ ಎಸ್‌ಯುವಿಯನ್ನು ಕಲ್ಲಿನನ್ ಎಂದು ನಾಮಕರಣ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಎಸ್‌ಯುವಿ ಎಂದು ವರ್ಣನೆ ಮಾಡಿದ್ದು, ಕಾರಿನ ಪ್ರತಿ ಇಂಚಿಂಚೂ ಕೂಡಾ ಒಂದೊಂದು ವಿಶೇಷತೆಯನ್ನು ಪಡೆದುಕೊಂಡಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಕಾರಿನ ಡಿಸೈನ್

ಕಲ್ಲಿನನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಕಲ್ಲಿನನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಹೀಗಾಗಿ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲ್ಲಿನನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿರಲಿದ್ದು, ಈ ಹಿಂದೆ 1930ರಲ್ಲಿ ನಿರ್ಮಾಣದವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಕಾರಿನ ಒಳವಿನ್ಯಾಸ

ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯವನ್ನು ಬಳಕೆ ಮಾಡಬಹುದು.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಇನ್ನು ಮುಂದುವರೆದು, ಕಲ್ಲಿನನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡಲಾಗಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಎಂಜಿನ್ ಸಾಮರ್ಥ್ಯ

ಕಲ್ಲಿನನ್ ಕಾರುಗಳು 6.75-ಲೀಟರ್ ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲ್ಲಿನನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಕಾರಿನ ಬೆಲೆಗಳು ಮತ್ತು ಬಿಡುಗಡೆ ಮಾಹಿತಿ

ರೋಲ್ಸ್ ರಾಯ್ಸ್ ನಿರ್ಮಾಣದ ಫ್ಯಾಂಟಮ್ ಮತ್ತು ಘೋಸ್ಟ್ ಕಾರುಗಳ ನಡುವಿನ ಕಾರು ಮಾದರಿಯಾಗಲಿರುವ ಕಲ್ಲಿನನ್ ಕಾರುಗಳ ಬೆಲೆಯು ಭಾರತೀಯ ಮಾರುಕಟ್ಟೆಯ ಪ್ರಕಾರ ರೂ.5.50 ಕೋಟಿಯಿಂದ 7 ಕೋಟಿ(ಎಕ್ಸ್‌ಶೋರಂ) ಇರಬಹುದೆಂದು ಅಂದಾಜಿಸಲಾಗಿದೆ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಬೆಂಟ್ಲಿ ಬೆಂಟಾಗಾ ಎಸ್‌ಯುವಿ ಕಾರುಗಳಿಗೆ ಕುಲ್ಲಿನನ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಇದೇ ವರ್ಷ ಡಿಸೆಂಬರ್‌ನಲ್ಲಿ ರೋಲ್ಸ್ ರಾಯ್ಸ್ ಎಸ್‌ಯುವಿ ಮಾದರಿಯು ಜಗತ್ತಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಈ ಬೈಕಿನ ಬೆಲೆ ಎಷ್ಟು ಅಂತಾ ಕೇಳಿದ್ರೆ ನೀವು ಈಗಲೇ ಬುಕ್ ಮಾಡೋದು ಗ್ಯಾರಂಟಿ....

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Most Read Articles

Kannada
Read more on rolls royce suv
English summary
Rolls-Royce Cullinan SUV Revealed — Rivals The Bentley Bentayga W12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X