ಓಲಾ ಚಾಲಕನ ದುರ್ವರ್ತನೆ ವಿರುದ್ಧ ರೊಚ್ಚಿಗೆದ್ದ ಮಹಿಳೆ..!

ಮೆಟ್ರೋ ಸಿಟಿಗಳಲ್ಲಿ ಊಬರ್ ಮತ್ತು ಓಲಾ ಕ್ಯಾಬ್ ಸೇವೆಗಳು ತನ್ನದೆಯಾದ ಪ್ರಾಮುಖ್ಯತೆ ಹೊಂದಿವೆ. ಸುರಕ್ಷತೆ ಸೃಷ್ಠಿಯಿಂದ ನಗರ ಪ್ರದೇಶದ ಜನ ಕ್ಯಾಬ್ ಸೇವೆಗಳ ಮೇಲೆ ಹೆಚ್ಚು ಅವಂಬಿತವಾಗುತ್ತಿದ್ದು, ಇತ್ತೀಚೆಗೆ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳು ಕ್ಯಾಬ್ ಸೇವೆಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿ ಎನ್ನುವಂತಹ ಪ್ರಶ್ನೆ ಹುಟ್ಟುಹಾಕುತ್ತಿವೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದು ಡಿಜಿಟಲ್ ಯುಗ. ಕೈಯೊಂದು ಸ್ಮಾರ್ಟ್ ಫೋನ್ ಇದ್ರೆ ಸಾಕು ನಿಮಗೆ ಬೇಕಾದ ಸೇವೆಗಳು ಮನೆ ಬಾಗಿಲಕ್ಕೆ ಬಂದು ನಿಲ್ಲುತ್ತವೆ. ಇದು ಒಂದು ರೀತಿಯಲ್ಲಿ ಸಹಕಾರಿಯಾಗಿದ್ದರೂ ಇದರಿಂದ ಆಗುತ್ತಿರುವ ಅಹಿತಕರ ಘಟನೆಗಳು ಅಷ್ಟಿಷ್ಟಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲವು ಕ್ಯಾಬ್ ಚಾಲಕರಿಂದ ಆಗುತ್ತಿರುವದುರ್ವರ್ತನೆ ಪ್ರಕರಣಗಳು ಕ್ಯಾಬ್ ಸಹವಾಸವೇ ಬೇಡ ಎನ್ನಿಸದೆ ಇರದು.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಹೌದು, ಓಲಾ, ಊಬರ್‌ನಂತಹ ಟ್ಯಾಕ್ಸಿ ಸೇವೆಗಳು ಎಷ್ಟು ಜನಪ್ರಿಯವಾಗಿವೆ ಅಂದ್ರೆ ಪ್ರತಿಯೊಂದಕ್ಕೂ ಇದೀಗ ಜನ ಕ್ಯಾಬ್ ಮೇಲೆ ಅಲಂಬಿತರಾಗುತ್ತಿದ್ದಾರೆ. ಆದ್ರೆ ಕೆಲವು ಚಾಲಕನ ನಡೆದುಕೊಳ್ಳುವ ಕೆಟ್ಟ ವರ್ತನೆಯಿಂದಾಗಿ ಕ್ಯಾಬ್ ಹತ್ತಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದಕ್ಕೆ ಕಾರಣ, ಮೊನ್ನೆಯಷ್ಟೇ ನಡೆದ ಘಟನೆಯೊಂದು ಮಹಿಳಾ ಪ್ರಯಾಣಿಕರೊಬ್ಬರನ್ನ ರೊಚ್ಚಿಗೆಳುವಂತೆ ಮಾಡಿದ್ದು, ಅಥಿತಿ ದೇವೊಭವ ಎಂದು ನಮ್ಮ ಹಿರಿಯರ ಮಾತನ್ನು ಲೆಕ್ಕಿಸದೆ ಬೆಂಗಳೂರಿಗೆ ಬಂದಿಳಿದ ಕುಟುಂಬ ಒಂದರ ಜೊತೆ ಓಲಾ ಟ್ಯಾಕ್ಸಿ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಗೆ ಅವಾಜ್ ಹಾಕಿರುವ ಕ್ಯಾಬ್ ಚಾಲಕನು ನಡು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಜಗಳಕ್ಕಿಳಿದ್ದಾನೆ. ಡೈವರ್‍‍‍ನಿಂದ ರಕ್ಷಿಸಲು ಮುಂದಾಗದ ಮಹಿಳೆಯ ರಕ್ಷಣೆಗೆ ಬರಬೇಕಿದ್ದ ಟ್ರಾಫಿಕ್ ಪೊಲೀಸರು ಕ್ಯಾಬ್ ಚಾಲಕನ ಪರವಾಗಿಯೇ ಮಾತನಾಡಿರುವುದು ಇದೀಗ ಪ್ರಕರಣ ಮತ್ತೊಂದು ಹಂತ ತಲುಪಿದೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದರಿಂದ ಡ್ರೈ‍‍ವರ್ ಅಸಭ್ಯ ವರ್ತನೆಯಿಂದ ನೊಂದಿರುವ ಮಹಿಳೆಯು ಸದ್ಯ ಚಾಲಕನ ವಿರುದ್ಧ ಕ್ರಮ ಆಗ್ರಹಿಸಿ ಉನ್ನತಾಧಿಕಾರಿಗಳ ಬಳಿ ನ್ಯಾಯಕ್ಕಾಗಿ ಪಟ್ಟುಹಿಡಿದ್ದು, ಸಾಮಾಜಿಕ ಜಾಲದಲ್ಲಿ ಹಾಕಿರುವ ಪೋಸ್ಟ್‌ವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಬೆಂಗಳೂರು ಏರ್‍‍‍ಪೋರ್ಟ್‌ನಿಂದ ಮನೆಗೆ ತೆರಳಲು ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದ್ದು, ಕಾರು ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದಲ್ಲದೇ ಮೊಬೈಲ್ ಡೆಟಾವನ್ನು ಆಫ್ ಮಾಡಿ ನೆವಿಗೆಷನ್ ಬದಲಾಗಿ ಬೇರೆಯದ್ದೆ ಮಾರ್ಗದ ಮೂಲಕ ಚಾಲನೆ ಮಾಡುತ್ತಿರುವುದು ಕೂಡಾ ವಾಗ್ದಾದಕ್ಕೆ ಕಾರಣವಾಗಿದೆ. ಈ ವೇಳೆ ಎಷ್ಟೇ ಮನವಿ ಮಾಡಿದರೂ ಕೇಳದ ಚಾಲಕ ಮಾತ್ರ ತನದೆ ಇಷ್ಟ ಬಂದಂತೆ ಚಾಲನೆ ಮಾಡಿದ್ದಾನೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದಾಗ ಬಳಿಕ ಮುಖ್ಯರಸ್ತೆಯನ್ನು ತಲುಪಿದಾಗಲೂ ಕೂಡಾ ಚಾಲಕ ಮಾತ್ರ ಫೋನ್‌ನಲ್ಲಿ ಮಾತನಾಡುತ್ತಲ್ಲೆ ಕಾರು ಓಡಿಸಿದ್ದಾನೆ. ಇದಕ್ಕೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದಾಗ ಕಾರನ್ನು ನಿಧಾನವಾಗಿ ಚಲಿಸತ್ತಲೇ ಪ್ರಯಾಣಿಕರಿಗೆ ಹಿಗ್ಗಾಮುಗ್ಗ ಬೈಯುತ್ತಿವುದನ್ನು ಮಹಿಳೆಯು ರೆಕಾರ್ಡ್ ಮಾಡಿದ್ದಾರೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಮಹಿಳೆಯ ಹಾಕಿರುವ ಪೊಸ್ಟ್ ಪ್ರಕಾರ, ಕಾರು ಸ್ವಲ್ಪ ಮುಂದೆ ಪ್ರಯಾಣಿಸಿದ ನಂತರ ನಾನು ನನ್ನ ಮಗಳ ಡೈಪರ್ ಅನ್ನು ಬದಲಾಯಿಸುವ ಸಲುವಾಗಿ ಸ್ವಲ್ಪ ಕಾರನ್ನು ಪಕ್ಕಕ್ಕೆ ಪಾರ್ಕ್ ಮಾಡಿ ಎಂದು ಕೇಳೆಕೊಂಡೆ. ಆದರೂ ಚಾಲಕ ಮಾತ್ರ ಇದಕ್ಕೆ ಕಿವಿಗೊಡದೆ ಎಸಿಯನ್ನು ಬಂದ್ ಮಾಡಿದ್ದಾನೆ. ಕೊನೆಯದಾಗಿ ಎಸಿಯಾದ್ರು ಆನ್ ಮಾಡಿ ಎಂದಿದ್ದಕ್ಕೆ ಮತ್ತೆ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದ್ದನಂತೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇದಾದ ಬಳಿಕ ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿದ ಓಲಾ ಚಾಲಕನು 'ನನ್ನನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ' ಅಂತಾ ಹೇಳಿ ಕಾರಿಂದ ಕೆಳಗಿಳಿಯುಂತೆ ಅವಾಜ್ ಹಾಕಿದ್ದಾನೆ. ಇದಕ್ಕೆ ವಿರೋಧಿಸಿದಾಗ ಬಲವಂತವಾಗಿ ಲಗೇಜ್ ಅನ್ನು ಕಾರಿನಿಂದ ಕೆಳಗಿಳಿಸಲು ಯತ್ನಿಸಿದಾಗ ಹತ್ತಿರದಲ್ಲೇ ಇದ್ದ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಕಾರಿನಿಂದ ಲಗೇಜ್ ಅನ್ನು ಕೆಳಗೆಸೆಯುತ್ತಿದ್ದಾಗ ಡ್ರೈವರ್ ಅನ್ನು ತಡೆಯಲು ಹೋದ ಮಹಿಳೆಯ ಪತಿಯ ಮೇಲೂ ಡ್ರೈವರ್ ಹಲ್ಲೆಗೆ ಮುಂದಾಗಿದ್ದು, ಇದೆಲ್ಲವನ್ನು ಅಲ್ಲಯೇ ನಿಂತು ನೋಡುತ್ತಿದ್ದ ಟ್ರಾಫಿಕ್ ಪೊಲೀಸರು ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ನನ್ನ ಹಿಂದೆ ಯೂನಿಯನ್ ಇದೆ..!

ಈ ವೇಳೆ ಹತ್ತಿರ ಪೊಲೀಸ್ ಸ್ಟೆಷನ್ ಕರೆ ಮಾಡಲು ಶುರು ಮಾಡಿದಾಗ ಕ್ಯಾಬ್ ಚಾಲಕ ಮತ್ತೆ ಅವಾಜ್ ಹಾಕಲು ಶುರುಮಾಡಿದ್ದಾನೆ. ಈಗ ನಮ್ಮ ಯೂನಿಯನ್ ಅವರು ಬರುತ್ತಾರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ನೋಡಿಕೊಳ್ಳುತ್ತಾರೆ' ಎಂದು ಹೆದರಿಸಿದ್ದಾನೆ. ಈ ಸಮಯದಲ್ಲಿ ನಾವೇನು ಮಾಡಲು ಸಾಧ್ಯ.? ಅಂತಾ ಫೇಸ್‌ಬುಕ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

MOST READ: ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಕೊನೆಗೂ ನಾವು ನನ್ನ ಮಕ್ಕಳೊಂದಿಗೆ ಪಕ್ಕದಲ್ಲೇ ಇದ್ದ ಶೋರಂ ಒಂದ ಬಳಿ ನಿಂತಕೊಂಡಾದ ನನ್ನ ಪತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು. ಆದ್ರೆ ಪೊಲೀಸ್ ಠಾಣೆಯಲ್ಲಿ ಇದು ನಿಮಗೆ ಮತ್ತು ಓಲಾ ನಡುವಿನ ಸಮಸ್ಯೆ ಇದರಲ್ಲಿ ನಾವೇನು ಮಾಡಲು ಸಾಧ್ಯವಿಲ್ಲ ಅಂತಾ ಕೈತೊಳೆದುಕೊಂಡಿದ್ದಾರೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಕೊನೆಗೂ ಕೇಸ್ ದಾಖಲಿಸಿದ ಮಹಿಳೆ.!

ಕ್ಯಾಬ್ ಚಾಲಕನಿಂದ ಇಷ್ಟೆಲ್ಲಾ ಆದ್ರು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದಾಗ ಓಲಾ ಸಂಸ್ಥೆಯಗೆ ಚಾಲಕನ ಬಗ್ಗೆ ದೂರು ನೀಡಿದ್ದಾರೆ. ಈ ವೇಳೆ ಬರೋಬ್ಬರಿ 2 ಘಂಟೆಗಳ ಕಾಲ ವಾಗ್ದಾದ ನಡೆದಿದ್ದು, ಹಲವಾರು ಕ್ಯಾಬ್ ಕ್ಯಾನ್ಸಲೇಷನ್‍‍ಗಳ ನಂತರ ಒಂದು ಕ್ಯಾಬ್ ದೊರೆತಿದೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಇಷ್ಟೆಲ್ಲಾ ರಾದ್ದಾಂತವಾದ ಮೇಲೆ ಚಾಲನೆ ಮಾಡಿರುವ ಹಣ ಪಾವತಿಸುವಂತೆ ಪಿಡಿಸಿರುವ ಕ್ಯಾಬ್ ಚಾಲಕನು ಮಹಿಳೆಯ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಅಂತೂ ಇಂತೂ ಜಗಳ ನಿಂತ ಮೇಲೆ ಮತ್ತೊಂದು ಕ್ಯಾಬ್ ಮೂಲಕ ಮನೆ ಸೇರಿದ ಮಹಿಳೆಯು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ತನದಾಗ ಅನುಭವವನ್ನು ಹಂಚಿಕೊಂಡಿದ್ದಾರೆ.

ಓಲಾ ಚಾಲಕನ ದುವರ್ತನೆಯಿಂದಾಗಿ ರೊಚ್ಚಿಗೆದ್ದ ಮಹಿಳೆ..!

ಸದ್ಯ ಓಲಾ ಸಂಸ್ಥೆಯು ದುವರ್ತನೆ ತೊರಿದ ಕ್ಯಾಬ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಆದರೂ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರ ಜೊತೆ ಕೆಲವು ಕ್ಯಾಬ್ ಚಾಲಕರು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯ ಅನ್ನಿಸದೆ ಇರಲಾರದು.

Source: Nikita Kapoor

Most Read Articles

ಟ್ಯಾಕ್ಸಿ ವಿಭಾಗದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಹೊಸ ಮಹೀಂದ್ರಾ ಮರಾಜೊ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..

Kannada
Read more on auto news taxi
English summary
Ola cab passenger asks valid questions after a shockingly bad experience in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X