ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

By Praveen Sannamani

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳ ನಡೆಯುತ್ತಲೇ ಇವೆ. ಇದರಲ್ಲಿ ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ. ಇದೀಗ ಇಂತದ್ದೇ ಅವಘಡ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ನಗರ ಪ್ರದೇಶಗಳಲ್ಲಿ ಯಾವುದೇ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದಲೇ ಅಗತ್ಯ ಪ್ರದೇಶಗಳಲ್ಲಿ ಸಿಗ್ನಲ್ ಹಾಕಿರಲಾಗುತ್ತದೆ. ಆದ್ರೆ ಕೆಲವು ವಾಹನ ಸವಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವಕಾಶ ಸಿಕ್ಕ ಕಡೆಗೆಲ್ಲಾ ಸಿಗ್ನಲ್ ಮಾಡುವುದೇ ಅವರ ಹವ್ಯಾಸವಾಗಿರುತ್ತದೆ. ಆದ್ರೆ ಅದು ಒಂದಿಲ್ಲಾ ಒಂದು ದಿನ ಜೀವಕ್ಕೆ ಹಾನಿ ಉಂಟು ಮಾಡುತ್ತೆ ಎಂಬುವುದು ಸ್ವತಃ ಅವರ ಅನುಭವಕ್ಕೆ ಬಂದಾಗಲೇ ಗೊತ್ತಾಗುವುದು.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಇಲ್ಲೂ ಕೂಡಾ ನಡೆದಿರುವುದು ಅಂತದ್ದೆ ಒಂದು ಅಪಘಾತ ಪ್ರಕರಣ. ಕೇರಳದ ಕೊಚ್ಚಿನ್ ನಗರದಲ್ಲಿ ಸಿಗ್ನಲ್ ಜಂಪ್ ಮಾಡುತ್ತಿದ್ದ ಲಾರಿ ಚಾಲಕನೊಬ್ಬ ರೇಂಜ್ ರೋವರ್ ಕಾರಿಗೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಲಾರಿಯೇ ಉರುಳಿಬಿದ್ದಿದೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಲಾರಿಯಲ್ಲಿ ಗೂಡ್ಸ್ ತುಂಬಿದ್ದ ಹಿನ್ನೆಲೆಯಲ್ಲಿ ಕಾರಿಗೆ ಗುದ್ದಿದ ರಭಸಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಹೇಳಲಾಗಿದೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಇಡುಕ್ಕಿ ನೋಂದಣಿಯ ಲಾರಿ ಇದಾಗಿದ್ದು, ರೆಡ್ ಲೈಟ್ ಬಿದ್ದ ಮೇಲೂ ಸಿಗ್ನಲ್ ಜಂಪ್ ಮಾಡಲು ಲಾರಿ ಚಾಲಕ ಯತ್ನಿಸಿದ್ದಾನೆ. ಅದೇ ವೇಳೆ ಇನ್ನೊಂದು ಮಾರ್ಗದಿಂದ ಬಂದ ರೇಂಜ್ ರೋವರ್‌ ಐಷಾರಾಮಿ ಕಾರಿನ ಬ್ಯಾನೆಟ್‌ಗೆ ರಭಸವಾಗಿ ಗುದ್ದಿದ್ದಾನೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಈ ವೇಳೆ ರೇಂಜ್ ರೋವರ್ ಕಾರು ಚಾಲಕ ಬ್ರೇಕ್ ಹಾಕಿದ್ದು, ವೇಗದಲ್ಲಿದ್ದ ಲಾರಿ ಬ್ಯಾನೆಟ್ ಗುದ್ದಿದ್ದಲ್ಲದೇ ಅಲ್ಲಿಯೇ ಉರುಳಿ ಬಿದ್ದಿದೆ. ಕಾರಿಗೆ ಗುದ್ದಿದ ಸಂದರ್ಭದಲ್ಲಿ ಲಾರಿಯಲ್ಲಿ ಹೆೇರಲಾಗಿದ್ದ ಗೂಡ್ಸ್ ಒಂದೇ ಬದಿಗೆ ವಾಲಿಕೊಂಡಿದ್ದೆ ಲಾರಿ ಉರುಳಿ ಬೀಳಲು ಪ್ರಮುಖ ಕಾರಣವಾಗಿದೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಜೊತೆಗೆ ಲಾರಿಯ ವೀಲ್ಹ್ ಆರ್ಚ್ ಸಹ ಕಳಚಿ ಬಿದ್ದಿದ್ದು, ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯು ಕ್ರೇನ್ ಸಹಾಯದೊಂದಿದೆ ನಡು ರಸ್ತೆಯಲ್ಲಿ ಉರುಳಿ ಬಿದ್ದಿದ್ದ ಲಾರಿಯನ್ನು ತೆರವುಗೊಳಿಸಿದ್ದಾರೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು ಪ್ರಾಥಮಿಕ ತನಿಖೆ ವೇಳೆ ಇದು ಲಾರಿ ಚಾಲಕನ ಅಜಾಗರೂಕತೆಯಿಂದ ನಡೆದ ಘಟನೆ ಎಂದು ಹೇಳಿದ್ದು, ರೆಡ್ ಮಾರ್ಕ್ ಇದ್ದಾಗಲೇ ಸಿಗ್ನಲ್ ಜಂಪ್ ಮಾಡುತ್ತಿರುವ ಸಿಸಿಟಿವಿ ಫುಟೇಜ್ ಸಹ ಲಭ್ಯವಾಗಿದೆ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಇನ್ನು ಅಪಘಾತದಲ್ಲಿ ಜಖಂಗೊಂಡ ರೇಂಜ್ ರೋವರ್ ಕಾರು ತಿಂಗಳ ಹಿಂದಷ್ಟೇ ಖರೀದಿಸಿದ ಹೊಸ ಕಾರು ಎನ್ನಲಾಗಿದ್ದು, ಲಾರಿ ಚಾಲಕ ಮಾಡಿದ ಎಡವಟ್ಟಿನಿಂದ ಗ್ಯಾರೇಜ್ ಸೇರುವಂತಾಗಿದೆ. ಆದರೂ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುವುದು ಸಮಾಧಾನಕರ ಸಂಗತಿ.

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಡ್ರೈವ್‌ಸ್ಪಾರ್ಕ್ ಸಲಹೆ

ನಗರ ಪ್ರದೇಶಗಳಲ್ಲಿ ಸಿಗ್ನಲ್‌ಗಳು ಇರುವುದೇ ವಾಹನ ಸವಾರರಿಗೆ ಯಾವುದೇ ರೀತಿ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾಗಿರುತ್ತೆ. ಆದ್ರೆ ಬಹುತೇಕ ವಾಹನ ಸವಾರರು ವೇಗದ ಚಾಲನೆಯ ಒಂದೇ ಒಂದು ಉದ್ದೇಶದಿಂದ ಸಿಗ್ನಲ್ ಜಂಪ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಆದ್ರೆ ಅದು ಅಂತಿಮವಾಗಿ ಇಂತಹ ಅವಘಡಗಳಿಗೆ ಕಾರಣವಾಗುತ್ತೆ ಎನ್ನುವುದೇ ದುರಂತ..

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Most Read Articles

Kannada
Read more on accident off beat
English summary
Signal Jumping Can End Up In A Crash.
Story first published: Thursday, May 24, 2018, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X