'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

By Praveen Sannamani

ಮಾನವನ ಬದುಕಿನಲ್ಲಿ ಪ್ರವಾಸಕ್ಕೆ ವಿಶೇಷ ಮಹತ್ವವಿದೆ. ಇದಕ್ಕೆ ಸ್ಪಷ್ಟ ಉದಾಹಣರಣೆ ಅಂದ್ರೆ 'ಕೋಶ ಓದಿ ನೋಡು ಇಲ್ಲವೇ ದೇಶ ಸುತ್ತಿ ನೋಡು' ಎಂಬ ಗಾದೆ ಮಾತು ಅಕ್ಷರಶಃ ನಿಜ. ಇದಕ್ಕೆ ಕಾರಣ ಪ್ರವಾಸಗಳ ಮೂಲಕ ವಿಭಿನ್ನ ಪ್ರದೇಶಗಳಲ್ಲಿ ಸುತ್ತಾಡುವುದರಿಂದ ಬಗೆಬಗೆಯ ಜನರ ಪರಿಚಯವಾಗುವುದಲ್ಲದೇ ವಿಭಿನ್ನ ಸಂಸ್ಕೃತಿಯು ಸಹ ಪರಿಚಯವಾಗುತ್ತೆ. ಇದೆ ಕಾರಣಕ್ಕೆ ಸ್ಕೋಡಾ ಸಂಸ್ಥೆಯು ಸಹ ತನ್ನ ವಿಭಿನ್ನ ಕಾರು ಉತ್ಪನ್ನವಾದ ಕೊಡಿಯಾಕ್ ಎಸ್‌ಯುವಿ ಮೂಲಕ ದೇಶದ ಪ್ರಮುಖ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಿದ್ದಲ್ಲೇ ಸಹಸಮಯ ಪ್ರಯಾಣ ಕೈಗೊಳ್ಳುವ ಮೂಲಕ ಎಸ್‌ಯುವಿ ಪ್ರಿಯರನ್ನೇ ರಂಜಿಸಿದ್ದು ವಿಶೇಷವಾಗಿತ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಅಂದಹಾಗೆ ಸ್ಕೋಡಾ ಇಂಡಿಯಾ ಸಂಸ್ಥೆಯು ಸದ್ಯ ಕೊಡಿಯಾಕ್ ಎಸ್‌ಯುವಿ ಕಾರುಗಳು ಮಾರಾಟ ವಿಶೇಷ ಬೇಡಿಕೆಯನ್ನು ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನಿಸಿದ್ದ ಸ್ಕೋಡಾ ಸಂಸ್ಥೆಯು ಕೊಡಿಯಾಕ್ ಎಸ್‌ಯುವಿ ಮೂಲಕ ಒಂದು ರೋಮಾಂಚಕಾರಿ ಮತ್ತು ಸಾಹಸಮಯ ಪ್ರಯಾಣವನ್ನ ಏರ್ಪಡಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡದಿಂದ ಇಬ್ಬರು ಮಾಧ್ಯಮ ಪ್ರತಿನಿಧಿಗಳನ್ನ ಆಯ್ಕೆ ಮಾಡಿದ್ದ ಸ್ಕೋಡಾ ಸಂಸ್ಥೆಯು ಕೊಡಿಯಾಕ್ ಕಾರುಗಳ ಆಪ್ ರೋಡ್ ಪ್ರದರ್ಶನಗೊಳಿಸಿದ್ದು ಹಲವು ವಿಶೇತೆಗಳಿಗೆ ಕಾರಣವಾಯ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಒಟ್ಟು ನಾಲ್ಕು ದಿನಗಳ ಕಾಲ ನಡೆದ ನಮ್ಮ ಪ್ರಯಣವು ಎಂದೂ ಮರೆಯಾಗದ ಕ್ಷಣಗಳು ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ ಹಲವು. ಭಾರತ ಮತ್ತು ಟೆಬೆಟ್ ಗಡಿ ಉದ್ದಕ್ಕೂ ಸಾಗಿದ ನಮ್ಮ ಪಯಣಲ್ಲಿ ಆರಾಮದಾಯಕ ಚಾಲನಾ ಸೌಲಭ್ಯ ಒಗದಿಸಿದ ಕೊಡಿಯಾಕ್ ಎಸ್‌ಯುವಿ ಕಾರುಗಳು ಸಾವಿರಾರು ಕಿಲೋ ಮೀಟರ್ ದೂರದ ಸುದೀರ್ಘ ಪ್ರಯಾಣದಲ್ಲೂ ಒಂದೇ ಒಂದು ಸಣ್ಣ ಅಡೆ ತಡೆ ಇಲ್ಲದೇ ಯಶಸ್ವಿಯಾಗಿ ಗುರಿತಲುಪಿದ್ದು ಮಾತ್ರ ಸಾಮಾನ್ಯ ವಿಚಾರವಂತೂ ಅಲ್ಲವೇ ಅಲ್ಲ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

7 ಸೀಟರ್ ಎಸ್‌ಯುವಿ ಕಾರುಗಳಲ್ಲೇ ಇತರೆ ಕಾರುಗಳಿಂತಲೂ ಭಿನ್ನ ಎನ್ನಿಸುವ ಕೊಡಿಯಾಕ್ ಕಾರುಗಳು ಕಠಿಣ ಭೂ ಪ್ರದೇಶಗಳಲ್ಲೂ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಿದ್ದು, ಇದೇ ಕಾರಣಕ್ಕಾಗಿಯೇ ಕಣಿವೆ ರಾಜ್ಯಗಳಲ್ಲಿನ ಅಪಾಯಕಾರಿ ರಸ್ತೆಗಳಲ್ಲೂ ಮರೆಯಲಾಗದಂತಹ ಚಾಲನಾ ಕೌಶಲ್ಯಗಳನ್ನು ಪ್ರದರ್ಶನ ಮಾಡಿದ್ದು ಎಂತರಿಗೂ ಥ್ರೀಲ್ ಆಗದೇ ಇರಲಾಗದು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ನಾವು ಕೈಗೊಂಡ ನಾಲ್ಕು ದಿನಗಳ ಸುಧೀರ್ಘ ಪ್ರಯಾಣದಲ್ಲಿನ ಪ್ರತಿ ಕ್ಷಣವು ಒಂದೊಂದು ವಿಶೇಷತೆಗಳಿಗೆ ಸಾಕ್ಷಿ ಆಗಿತ್ತಲ್ಲದೇ ಪ್ರಯಾಣದಲ್ಲಿ ಕಾರಿನ ಮೌಲ್ಯ ಏನು ಅನ್ನುವುದು ಸಹ ಅರಿವಿಗೆ ಬಂದಿದ್ದು ಸುಳ್ಳಲ್ಲ. ಮೊದಲ ದಿನದಿಂದ ಹಿಡಿದು ಪ್ರಯಾಣದ ಕೊನೆ ಕ್ಷಣದ ತನಕವು ಒಂದೊಂದು ವಿಶೇಷತೆಗಳಿಗೆ ಕಾರಣವಾದ ಕೊಡಿಯಾಕ್ ಎಸ್‌ಯುವಿ ಕಾರಿನಲ್ಲಿನ ಪ್ರಯಾಣದ ಅನುಭವವು ನಮ್ಮ ಪಾಲಿಗೆ ಒಂದು ಪ್ರವಾಸ ಕಥನವೇ ಸರಿ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಚಂಡೀಗಡ್‌ ಟು ಮನಾಲಿ

ಪಂಜಾಬ್ ರಾಜಧಾನಿ ಚಂಡೀಗಡ್‌ನಿಂದ ಆರಂಭಗೊಂಡ ನಮ್ಮ ಮೊದಲ ದಿನದ ಪ್ರಯಾಣವು ಮನಾಲಿಯತ್ತ ಹೊರಟಿದ್ದಲ್ಲದೇ ಪ್ರಯಾಣದ ಯಾವುದೇ ತೊಂದರೆ ಆಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದ ಸ್ಕೋಡಾ ಸಂಸ್ಥೆಯು ಮೊಲದ ದಿನದ 300 ಕಿ.ಮೀ ಪ್ರಯಾಣವನ್ನ ಅತ್ಯಂತ ಕಡಿಮೆ ಸಮಯದಲ್ಲಿ ಯಾವುದೇ ತೊಂದರೆ ಇಲ್ಲದೇ ಅಚ್ಚುಕಟ್ಟಾಗಿ ನಿರ್ವಹಿಸಿ ನಮ್ಮಲ್ಲರಿಗೂ ಅಚ್ಚರಿ ಉಂಟು ಮಾಡಿತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಅತಿ ಕಠಿಣ ಪರಿಸ್ಥಿತಿಯಲ್ಲೂ ಸುಲಭ ಸಂಚಾರದ ಮೂಲಕ ಗಮನಸೆಳೆಯದ ಸ್ಕೋಡಾ ಕೊಡಿಯಾಕ್ ಕಾರುಗಳು ವಿಸ್ತರಿತ ಬೂಟ್ ಸ್ಪೆಸ್‌ ಮೂಲಕ ದೀರ್ಘ ಕಾಲದ ಪ್ರಯಾಣಕ್ಕೆ ಬೇಕಾದ ಲಗೇಜ್ ಅನ್ನು ಕೊಂಡಯ್ಯಲು ಸಹಕಾರಿಯಾಯ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಪ್ರತಿ ಗಂಟೆಗೂ ಬದಲಾಗುವ ಕಣಿವೆ ರಾಜ್ಯದ ಪರಿಸರದಲ್ಲಿ ಸುರಿಯುವ ಮಳೆ ಮತ್ತು ಅತಿಯಾದ ಚಳಿಯಲ್ಲೂ ವಿಹಂಗಮ ನೋಟಕ್ಕೆ ಸಹಕಾರಿಯಾದ ಕೊಡಿಯಾಕ್ ಕಾರುಗಳಲ್ಲಿನ ಸನ್ರೂಫ್ ಗಳು, ಜರ್ನಿ ಉದ್ದಕ್ಕೂ ಯಾವುದಕ್ಕೂ ಬೇಸರ ತರಿಸದ ಮನರಂಜನಾ ವ್ಯವಸ್ಥೆಗಳು ಪ್ರಯಾಣಕ್ಕೆ ಮತ್ತಷ್ಟು ಮೆರಗು ತಂದವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಅಂತಿಮವಾಗಿ, ನಾವು ಮಧ್ಯರಾತ್ರಿ ವೇಳೆಗೆ ಮನಾಲಿ ತಲುಪಿದ ನಂತರ ಶುರುವಾಗಿದ್ದೇ ಹೊಸದೊಂದು ಪ್ರಪಂಚ. ಅದು ನಿಜವಾಗಿಯೂ ಚಂಡೀಗಢದ ಶಾಖದಿಂದ ಮನಾಲಿಯ ಚಳಿಯ ಪರ್ವತಗಳಲ್ಲಿ ನಮ್ಮನ್ನ ತೆರೆದುಕೊಳ್ಳುವ ಅವಕಾಶ ಎಂದೇ ಹೇಳಬಹುದು. ಆದರೂ ಮರುದಿನದ ನಮಗಾಗಿ ಕಾಯ್ದಿದ್ದ ವಿಶ್ವಾಸಘಾತುಕ ರಸ್ತೆಗಳಲ್ಲಿ ಪ್ರಯಾಣಕ್ಕಾಗಿ ಮೊದಲ ದಿನ ಡ್ರೈವ್ ಕೊಂಚ ಮೃದವಾಗಿತ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಮನಾಲಿ ಟು ಚಂದ್ರತಾಲ್

ಮನಾಲಿಯಿಂದ ನಮ್ಮ ಮುಂದಿನ ಕಣಿವೆ ಪ್ರವಾಸದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಚಂದ್ರತಾಲ್. ಸಮುದ್ರಮಟ್ಟಕ್ಕಿಂತ 14,100 ಅಡಿ ಎತ್ತರದಲ್ಲಿರುವ ಚಂದ್ರತಾಲ್ ಸರೋವರ ಮಧ್ಯದ ಹಿಮಾಲಯದ ಪರ್ವತ ಶ್ರೇಣಿಯಲ್ಲಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿರುವ ಇದು ಸ್ಪಿತಿ ಶೀತ ಮರುಭೂಮಿ ಕಣಿವೆಯಲ್ಲಿ ಅತ್ಯಂತ ಸುಂದರವಾದ ಸ್ಥಳ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ರೋಹ್ಟಂಗ್ ಪಾಸ್ ಮೂಲಕ ಆರಂಭಗೊಂಡ ನಮ್ಮ ಪ್ರಯಾಣವು ಮೆಲಕ್ಕೆ ಏರಿದಂತೆ ಭಾರೀ ಪ್ರಮಾಣದ ಶೀತಗಾಳಿಯು ನಮ್ಮನ್ನ ಕೆಲ ಗಂಟೆಗಳ ಕಾಲ ಅವಾಕ್ಕಾಗುವಂತೆ ಮಾಡಿದ್ದು ಸುಳ್ಳಲ್ಲ. ಆದ್ರೆ ಕಾರಿನಲ್ಲಿದ್ದ ತಾಂತ್ರಿಕ ಅಂಶಗಳು ನಮ್ಮ ಸಹಾಯಕ್ಕೆ ಬಂದಿದ್ದಲ್ಲದೇ ಸುಖಕರ ಪ್ರಯಾಣಕ್ಕೆ ಸಹಕಾರಿಯಾಗಿದ್ದನ್ನು ಮರೆಯುವಂತಿಲ್ಲ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ನಾವು ನಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದಂತೆ ಹಚ್ಚ ಹಸಿರಿನ ಭೂದೃಶ್ಯವು ಹಿಮದಿಂದ ಆವೃತವಾದ ಪರ್ವತಗಳಾಗಿ ಬದಲಾಯಿತು. ಜೊತೆಗೆ ಸೆವೆನ್ ಸ್ಪೀಡ್ ಸ್ವಯಂಚಾಲಿಕ ಗೇರ್‌ಬಾಕ್ಸ್ ಮೂಲಕ ನಮ್ಮ ಪ್ರಯಾಣವನ್ನು ಮತ್ತಷ್ಟು ಸುಲಭ ಮಾಡಿದ್ದ ಕೊಡಿಯಾಕ್ ಕಾರುಗಳು ಇತರೆ ಕಾರುಗಳಿಂತೂ ಕೊಂಚ ವಿಭಿನ್ನ ಚಾಲನಾ ಅನುಭವ ನೀಡಿದವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ರೋಹ್ಟಂಗ್ ಅನ್ನು ದಾಟಿದ ನಂತರ ನಾವು ಲೆಹ್-ಮನಾಲಿ ಹೆದ್ದಾರಿಯಿಂದ ನಿರ್ಗಮಿಸಿ ಗ್ರಾಂಪು ಪಾಯಿಂಟ್ ಬಳಿ ತಿರುವು ತೆಗೆದುಕೊಂಡೆವು. ಈ ವೇಳೆ ತಗ್ಗು ದಿಣ್ಣೆ ಕೂಡಿದ ರಸ್ತೆಗಳಲ್ಲಿ ಥ್ರೀಲಿಂಗ್ ಜರ್ನಿ ನೀಡಿದ ಕೊಡಿಯಾಕ್ ಕಾರುಗಳು ಚೆನಾಬ್ ನದಿ ಹರಿವುಗಳಲ್ಲಿ ಹಾಯ್ದು ಹೊಗಿದ್ದು ರೋಚಕವಾಗಿತ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಇದಲ್ಲದೇ ಕೊಡಿಯಾಕ್ ಕಾರುಗಳಲ್ಲಿ ಒದಗಿಸಲಾಗಿರುವ ಸ್ಮಾರ್ಟ್ ಆಲ್-ವೀಲ್ಹ್ ಡ್ರೈವ್ ವ್ಯವಸ್ಥೆಯು ಒರಟು ರಸ್ತೆಗಳನ್ನು ಚೆನ್ನಾಗಿ ನಿರ್ವಹಿಸಿದ್ದಲ್ಲದೇ ನದಿ ದಾಟುವಿಕೆ ಸಂದರ್ಭದಲ್ಲಿ ಹೆಚ್ಚು ಕಷ್ಟುಪಟ್ಟುಪಡದೆ ಅತಿ ಸುಲಭವಾಗಿ ತನ್ನ ಗುರಿತಲುಪುವಲ್ಲಿ ಯಶಸ್ವಿ ಆಯ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಕೊಡಿಯಾಕ್ ಕಾರಿನ ಡ್ರೈವಿಂಗ್ ಮೋಡ್‌ಗಳು: ಪ್ರಮುಖ ಐದು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿರುವ ಕೊಡಿಯಾಕ್ ಕಾರುಗಳಲ್ಲಿ ಇಕೊ, ಸಾಧಾರಣ, ಸ್ಪೋರ್ಟ್, ಇಂಡಿವಿಜುವಲ್ ಮತ್ತು ಸ್ನೋ ಎನ್ನುವ ಡ್ರೈವ್ ಮೋಡ್‌ಗಳಿದ್ದು, ಇವು ಸಡಿಲ ನೆಲದ ಮತ್ತು ಸಾಂದರ್ಭಿಕ ನದಿ ದಾಟುವಿಕೆಗಳನ್ನು ನಿಭಾಯಿಸಲು ಮತ್ತು ಹಿಮದ ಮೋಡ್ ರಸ್ತೆಗಳಿಗೆ ಪರಿಪೂರ್ಣವಾಗಿವೆ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಇದರೊಂದಿಗೆ ನಮ್ಮ ಪ್ರಯಾಣವನ್ನು ಚಂದ್ರತಾಲ್ ಕಡೆಗೆ ಮುಂದುವರೆತ್ತಿದ್ದಂತೆ ಚಾತ್ರು ಮೂಲಕ ಹೊರಟ ಪ್ರಯಾಣದ ಅವಧಿಯಲ್ಲಿ ಕೆಟ್ಟದಾದ ರಸ್ತೆಗಳು ಮತ್ತು ತಿರುವುಗಳು ಕಾರು ಚಾಲನೆಯನ್ನೆ ಮತ್ತಷ್ಟು ಕಠಿಣವಾಗಿಸಿದವು. ವಾಸ್ತವವಾಗಿ ಅಲ್ಲಿ ಯಾವುದೇ ರಸ್ತೆಗಳು ಇರಲಿಲ್ಲ. ಕೇವಲ ಚೂಪಾದ ಕಲ್ಲುಗಳ ರಾಶಿ ಮಧ್ಯೆ ಪ್ರಯಣಿಸುವುದೇ ಒಂದು ಹರಸಾಹಸ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಈ ಮಧ್ಯೆ ನಮಗೂ ಕೆಲವು ಸಂಕಷ್ಟು ಎದರಾದವು. ಇದರ ಮಧ್ಯೆ ಎರಡು ಬಾರಿ ಕಾರು ಪಂಚರ್ ಆದ್ರು ಮನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಅಷ್ಟೇನು ತೊಂದರೆ ಆಗಲಿಲ್ಲ. ಜೊತೆಗೆ ಪ್ರಯಾಣದ ಸಂದರ್ಭದಲ್ಲಿ ಯಾರೊಬ್ಬರಿಗೂ ತೊಂದರೆ ಆಗದಂತೆ ಪ್ರಥಮ ಚಿಕಿತ್ಸೆಯ ಸೌಲಭ್ಯಗಳು ಮತ್ತು ಊಟ ಉಪಚಾರದ ವ್ಯವಸ್ಥೆಯು ಪ್ರಯಾಣದ ಆಯಾಸವನ್ನು ಮರೆಸುತ್ತಿದ್ದವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಚಾತ್ರು ಪ್ರಯಾಣ ಮುಗಿದ ಬಳಿಕ ಪರ್ವತ ಸರಣಿಯಲ್ಲಿ ಹಾಯ್ದು ಹೊರಟ ನಮ್ಮ ಪ್ರಯಾಣವು ಸಂಜೆ ಹೊತ್ತಿಗೆ ಬಟಾಲ್ ಎನ್ನುವ ಪ್ರದೇಶವನ್ನು ತಲುಪಿದೆವು. ಚಹಾ ವಿರಾಮ ನಂತರ ಮತ್ತೆ ಶಿಖರದತ್ತ ಮುಂದುವರೆದ ನಮ್ಮ ಪ್ರಯಾಣವು ಶೀತಗಾಳಿ ನಡುವೆ ಹೊರಡುತ್ತೆ 120 ಕಿ.ಮಿ ದೂರ ಸಾಗಿದೆವು. ನೀವು ನಂಬುತ್ತಿರೋ ಇಲ್ಲವೋ 120 ಕಿ.ಮಿ ದೂರ ಸಾಗಲು ತೆಗೆದುಕೊಂಡಿದ್ದು ಬರೋಬ್ಬರಿ 12 ತಾಸು. ಇದಕ್ಕೆ ಕಾರಣ, ಕಠಿಣ ಭೂ ಪ್ರದೇಶಗಳಲ್ಲಿ ಸಾಗುವುದು ಅಷ್ಟು ಸುಲಭದ ಮಾತಲ್ಲ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಅಂತು ಇಂತೂ ರಾತ್ರಿ ಹೊತ್ತಿಗೆ ಗೂಡು ಸೇರಿಕೊಂಡ ಸ್ಕೋಡಾ ಮತ್ತು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಮೈನೆಸ್ 2 ಡಿಗ್ರಿ ಚಳಿ ವಾತಾವರಣದಲ್ಲಿ ಆ ದಿನ ರಾತ್ರಿ ಕಳೆಯುವುದು ಒಂದು ಟಾಸ್ಕ್ ಆಗಿತ್ತು. ಸ್ವಚ್ಚಂದ ಗಾಳಿ, ಬೆಳಕು, ಕಣ್ಣು ಹಾಯಿಸಿದಷ್ಟು ರಮಣಿಯ ನಿಸರ್ಗದ ನೋಟವು ನಮ್ಮೆಲ್ಲಾ ಆಯಾಸ, ಕೊರೆಯುವ ಚಳಿಯನ್ನೇ ಮಿರಿಸಿ ಖುಷಿ ನೀಡುತ್ತಿದ್ದವು. ಹೀಗಾಗಿ ನಮ್ಮ ಮೂರನೇ ದಿನ ಪ್ರಯಾಣ ಮತ್ತಷ್ಟು ರೋಚಕವಾಗಿತ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಚಂದ್ರತಾಲ್ ಟು ಕಾಜಾ

ಚಂದ್ರತಾಲ್ ಸರೋವರದ ಭೇಟಿ ನಂತರ ನಮ್ಮ ಮುಂದಿನ ಪ್ರಯಾಣವು ಕಾಜಾ ಕಡೆಗೆ ಹೊರಟಿತು. ನಿದ್ದೆಯಿಲ್ಲದ ರಾತ್ರಿ ಕಳೆದಿದ್ದ ನಮಗೆ ಬೆಳಗಿನ ಸೂರ್ಯೊದಯವಾಗುವುದನ್ನೇ ಕಾಯ್ದುಕುಳಿದ್ದೇವು. ಯಾವಾಗ ಬೆಳಗಾಯಿತೋ ಮತ್ತೆ ಪ್ರಯಾಣವನ್ನು ಆರಂಭಿಸಿದ ನಮ್ಮ ತಂಡವು 10 ನಿಮಿಷ ಕಾಲ ನಡೆದುಕೊಂಡೆ ಸೋರವರ ದಡದಲ್ಲಿ ಕಾಲಕಳೆದೆವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

4,250 ಮೀಟರ್ ಎತ್ತರದಲ್ಲಿರುವ 'ಚಂದ್ರತಾಲ್' ಎಂಬ ಹೆಸರು ಸರೋವರದ ಕ್ರೆಸೆಂಟ್ ಆಕಾರದಿಂದ ಬಂದಿದೆ ಎಂದು ತಿಳಿದ ನಮಗೆ 'ಚಂದ್ರ' ಸರೋವರದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ವಾರವೇ ಬೇಕೆಂಬ ಅಂಶವು ಅಲ್ಲಿದ್ದ ಪ್ರವಾಸಿಗರಿಂದಲೇ ತಿಳಿಯಿತು. ಹೀಗಾಗಿ ಪ್ರಕೃತಿ ಸೌಂದರ್ಯವನ್ನು ಮಾತ್ರ ಸವಿಯಲು ಸಾಧ್ಯವಿರುವ ನಮ್ಮಿಂದ ತಾಂತ್ರಿಕ ಅಂಶಗಳಲ್ಲಿ ಎಷ್ಟೇ ಮುಂದುವರೆದರೂ ಅಂತಹ ವಾತಾವರಣ ನಿರ್ಮಿಸಲು ಸಾಧ್ಯವೇ ಇಲ್ಲ ಎನ್ನವುದು ಅಷ್ಟೇ ಸತ್ಯ.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಹೀಗೆ ಮುಂದುವರೆದ ನಮ್ಮ ಪ್ರಯಾಣವು ಕಾಜಾ ಕಡೆಗೆ ಮುಂದುವರೆಯುತ್ತಿದ್ದಂತೆ ಅತಿ ಕಠಿಣ ಪ್ರದೇಶವಾದ ಕುನ್ಜುಮ್ ಪಾಸ್ ದಾಟುವುದು ನಮ್ಮ ಮುಂದಿನ ದೊಡ್ಡ ಸವಾಲಾಗಿತ್ತು. ಕಾಜಾಕ್ಕೆ ಹೋಗುವ ಮಾರ್ಗದಲ್ಲಿ ನಾವು ಒಂದು ಖಾಲಿ ಭೂಮಿಯನ್ನು ಗುರುತಿಸಿದ್ದೇವೆ ಮತ್ತು ಸ್ಕೋಡಾ ಕೊಡಿಯಾಕ್ ಅವರೊಂದಿಗೆ ಕೆಲವು ಮೋಜು ಮಾಡಲು ನಿರ್ಧರಿಸಿದ್ದೇವು. ಅಂತೆಯೇ ಕೊಡಿಯಾಕ್ ಕಾರಿನ ಮೂಲಕ ಕೆಲವು ಚಾಲನಾ ಕೌಶಲ್ಯಗಳನ್ನು ಪ್ರದರ್ಶನ ಮಾಡಿದ್ದು ಸಾಕಷ್ಟು ಗಮನ ಸೆಳೆದವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಕಾಜಾ ತಲುಪಿದ ಕ್ಷಣ

ಇದು ನಮ್ಮ ಪ್ರಯಾಣದ ಕೊನೆಯ ಹಂತವಾಗಿದ್ದಲ್ಲದೇ ಯಾವುದೇ ಅಡೆತಡೆ ಇಲ್ಲದೇ ಕಾಜಾ ತಲುಪಿದ ನಮ್ಮ ಸುಧೀರ್ಘ ಪ್ರಯಾಣವು ನಮ್ಮನೆ ಮೂಕವಿಸ್ಮಿತರನ್ನಾಗಿ ಮಾಡಿದ್ದವು. ಇದರಲ್ಲಿ ಮೊದಲನೆಯದಾಗಿ ಧಂಕರ್ ಮೊನಾಸ್ಟರಿ ಆಶ್ರಮಕ್ಕೆ ಹೊಗುವ ದಾರಿಯಂತೂ ಕೂದಲಿನ ಬಾಗುವಿಕೆ ರೀತಿಯಲ್ಲಿ ಬಾಗಿಕೊಂಡಿರುವುದು ಸಾಕಷ್ಟು ಆಸಕ್ತಿದಾಯಕವಾಗಿತ್ತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಧಂಕರ್ ಆಶ್ರಮವು ಸ್ಪಿತಿ ಕಣಿವೆಯ ಅತ್ಯುನ್ನತ ಸ್ಥಳದಲ್ಲಿದ್ದು, ಇದು ಒಮ್ಮೆ ಸ್ಪಿತಿಯ ರಾಜಧಾನಿ ಕೂಡಾ ಆಗಿತ್ತು. ಈ ಮಠವನ್ನು ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಆಶ್ರಮದಲ್ಲಿ ಕೆಲ ಸಮಯವನ್ನು ಕಳೆದ ನಂತರ ಮತ್ತೊಂದು ಟಾಬೊ ಆಶ್ರಮದ ಕಡೆಗೆ ಹೋಗಲು ನಿರ್ಧರಿಸಿದ್ದೇವು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಇದೇ ವೇಳೆ ದಾರಿ ಮಧ್ಯದಲ್ಲಿ ಅನೀರಿಕ್ಷಿತ ಸಿಕ್ಕ ಮತ್ತೊಂದು ವಿಶೇಷ ಅಂದ್ರೆ ವಿಶ್ವದಲ್ಲೇ ಅತಿ ಎತ್ತರದ ಭೂ ಪ್ರದೇಶದಲ್ಲಿರುವ ಹಿಕಿಮ್ ಪೋಸ್ಟ್ ಆಫೀಸ್‌ಗೆ ಭೇಟಿ ಕೊಟ್ಟಿದ್ದು ಎಂದಿಗೂ ಮರೆಲಾಗದ ಕ್ಷಣ ಅದು. ಇಲ್ಲಿ ನಾವು ಕೆಲ ಹೊತ್ತು ಸಮಯ ಕಳೆದಿದ್ದಲ್ಲದೇ ಅಲ್ಲಿಂದ ನಮ್ಮ ಪ್ರೀತಿ ಬಂಧು ಮಿತ್ರರಿಗೆ ಯೋಗ ಕ್ಷೇಮದ ಪೋಸ್ಟ್ ಕಾರ್ಡ್ ರವಾಸಿದ್ದನ್ನು ಸಾಕಷ್ಟು ಖುಷಿ ಕೊಟ್ಟಿತು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ಈ ಹೊತ್ತಿಗಾಗಲೇ ವಿಶ್ವದ ಅತ್ಯಂತ ಎತ್ತರದ ರೆಸ್ಟೋರೆಂಟ್ ಅನ್ನು ತಲುಪಿದ್ದ ನಮಗೆ ಕೊಮಿಕ್ ಪ್ರದೇಶವನ್ನು ದಾಟಿ ನಮ್ಮ ಅಂತಿಮ ಗುರಿ ತಲುಪಬೇಕಿದ್ದ ಮೊನಾಸ್ಟರಿಯತ್ತ ಸಾಗಿದೆವು. ಈ ಹೊತ್ತಿಗಾಗಲೇ ಕಾಜಾದ ಅಂತಿಮ ಪ್ರದೇಶವಾಗಿದ್ದ ಮೊನಾಸ್ಟರಿಯು ಕತ್ತಲೆಯಿಂದ ಆವರಿಸಿಕೊಳ್ಳುತ್ತಲೇ ಮತ್ತೊಂದು ಲೋಕಕ್ಕೆ ತೆರೆದುಕೊಳ್ಳುತ್ತಿದ್ದ ಕ್ಷಣಗಳು ನಮ್ಮ ಬದುಕಿನ ಮತ್ತೊಂದು ವಿಶೇಷ ಎನ್ನಿಸುವಷ್ಟೇ ಆಪ್ತವಾಗಿದ್ದನ್ನ ಮರೆಯಲು ಸಾಧ್ಯವೇ ಇಲ್ಲ ಎನ್ನಬಹುದು.

'ಸ್ಕೋಡಾ ಕೊಡಿಯಾಕ್' ಜೊತೆಗೊಂದು ಸಾಹಸಮಯ ಪ್ರಯಾಣ

ತದನಂತರ ಐದನೇ ದಿನ ಮತ್ತು ಆರನೇ ದಿನದಂದು ಬಂದ ಹಾದಿಯಲ್ಲೇ ವಾಪಸ್ ಪ್ರಯಾಣ ಬೆಳಸಿದ ನಮ್ಮ ತಂಡವು ಒಟ್ಟು 1 ಸಾವಿರ ಕಿ.ಮೀ ದೂರ ಕ್ರಮಿಸಿದ್ದಲ್ಲದೇ ತಗ್ಗು ದಿಣ್ಣೆ, ಕಡಿದಾದ ಪ್ರದೇಶಗಳಲ್ಲಿ ಆಪ್ ರೋಡ್ ಸಾಹಸವು ಕೊಡಿಯಾಕ್ ಕಾರುಗಳಿಗೆ ಯಾವುದು ಕಠಿಣ ಅಲ್ಲವೇ ಅಲ್ಲ ಅನಿಸಿತು. ಕಾರಣ, ಕೊಡಿಯಾಕ್ ಕಾರುಗಳಲ್ಲಿ ಒದಗಿಸಲಾಗಿರುವ ಐಷಾರಾಮಿ ಚಾಲನಾ ಸೌಲಭ್ಯಗಳು ಮತ್ತು ವಿಶೇಷ ಡ್ರೈವಿಂಗ್ ಮೋಡ್‌ಗಳು ಆಪ್ ರೋಡ್ ಎಸ್‌ಯುವಿಗಳಲ್ಲೇ ಒಂದು ವಿಶೇಷ ಕಾರು ಉತ್ಪನ್ನ ಅಂದ್ರೆ ತಪ್ಪಾಗುದಿಲ್ಲ.

Most Read Articles

Kannada
Read more on skoda travelogues suv
English summary
The Skoda Kodiaq Expedition — A Journey To ‘The Middle Land’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X