ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಕಾರುಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿ ಮಾಡಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

By Praveen Sannamani

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಆರಂಭಿಕ ಕಾರು ಆವೃತ್ತಿಗಳನ್ನು ಸಣ್ಣ ಗಾತ್ರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಟಾಟಾ ಮೋಟಾರ್ಸ್ ಜೊತೆ ಕೈ ಜೋಡಿಸಲು ಮುಂದಾಗಿದೆ.

ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಈಗಾಗಲೇ ಸಣ್ಣ ಕಾರು ಉತ್ಪಾದನೆಯಲ್ಲಿರುವ ಮುಂದಿರುವ ಟಾಟಾ ಮೋಟಾರ್ಸ್ ಜೊತೆ ಕೈ ಜೊಡಿಸುವ ಮೂಲಕ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಮಾತುಕತೆ ನಡೆಸಿರುವ ಸ್ಕೋಡಾ, 2020ರ ವೇಳೆಗೆ ಹೊಸ ಕಾರುಗಳನ್ನು ರಸ್ತೆಗಿಳಿಸುವ ತವಕದಲ್ಲಿದೆ.

ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಅದಲ್ಲದೇ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹ್ಯುಂಡೈ ಕ್ರೇಟಾಗೆ ಪ್ರತಿಸ್ಪರ್ಧಿಯಾಗಿ ವಿಷನ್ ಎಕ್ಸ್ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಕೋಡಾ ಇಂಡಿಯಾ ಮತ್ತಷ್ಟು ಮಾಹಿತಿ ಬಿಡುಗಡೆ ಮಾಡಲಿದೆ.

ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಇನ್ನು ಕೆಲವು ಮೂಲಗಳ ಪ್ರಕಾರ ಫೋಕ್ಸ್‌ವ್ಯಾಗನ್ ಜೊತೆಗಿನ ಸಣ್ಣ ಕಾರು ಉತ್ಪಾದನಾ ಯೋಜನೆ ಕಡಿತಗೊಂಡಿದ್ದು, ಅದೇ ಯೋಜನೆಯನ್ನೇ ಟಾಟಾ ಮೋಟಾರ್ಸ್ ಜೊತೆಗೆ ಮುಂದುವರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಟಾಟಾ ಮೋಟಾರ್ಸ್‌ನ ಚಾಕನ್ ಕಾರು ಉತ್ಪಾದನಾ ಘಟಕದಲ್ಲೇ ಸಣ್ಣ ಕಾರುಗಳ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಹೊಸ ಯೋಜನೆ ಫಲಪ್ರದವಾದಲ್ಲಿ ಕೆಲವೇ ದಿನಗಳಲ್ಲಿ ಹೊಸ ಮಾದರಿಯ ಐಷಾರಾಮಿ ಸಣ್ಣ ಕಾರುಗಳು ರಸ್ತೆಗಿಳಿಯಲಿವೆ.

ಸ್ಥಳೀಯವಾಗಿ ಕಾರುಗಳ ಉತ್ಪಾದನೆಗೆ ಸ್ಕೋಡಾ ಬೃಹತ್ ಪ್ಲ್ಯಾನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಸುಧಾರಿತ ಸಣ್ಣ ಕಾರುಗಳ ಉತ್ಪಾದನೆಗೆ ಮುಂದಾಗಿರುವ ಸ್ಕೋಡಾ ಯೋಜನೆಯು ಸಫಲಗೊಳ್ಳುವ ಎಲ್ಲಾ ಲಕ್ಷಣಗಳಿದ್ದು, ಬೃಹತ್ ಮಾರುಕಟ್ಟೆಗಾಗಿ ಟಾಟಾ ಮೋಟಾರ್ಸ್ ಕೈ ಜೋಡಿಸಿರುವುದು ಮತ್ತೊಂದು ವಿಶೇಷ.

Most Read Articles

Kannada
Read more on skoda ಸ್ಕೋಡಾ
English summary
Skoda To Introduce Locally-Built New Models In India.
Story first published: Saturday, March 10, 2018, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X