ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

By Praveen Sannamani

ವಿಶ್ವಾದ್ಯಂತ ನೂರಾರು ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಣೆಯಲ್ಲಿದ್ದು, ಲಾಭಾಂಶದ ವಿಚಾರಕ್ಕೆ ಬಂದಲ್ಲಿ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಭಾರೀ ಲಾಭಾಂಶದೊಂದಿಗೆ ಮುನ್ನಡೆ ಸಾಧಿಸುತ್ತಿರುವುದು ವಾಸ್ತವ. ಈ ಪೈಕಿ ಜಪಾನ್ ದೈತ್ಯ ವಾಹನ ಸಂಸ್ಥೆಯಾದ ಸುಜುಕಿ ಸದ್ಯ ಐಷಾರಾಮಿ ಸಂಸ್ಥೆಗಳನ್ನೇ ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದು, ಸುಜುಕಿ ಲಾಭಾಂಶಕ್ಕೆ ಭಾರತೀಯ ಮಾರುಕಟ್ಟೆಯೇ ಪ್ರಮುಖ ಕಾರಣ ಅಂದ್ರೆ ನೀವು ನಂಬಲೇಬೇಕು.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಸದ್ಯ ದೇಶದಲ್ಲಿ ಕಾರು ಖರೀದಿ ಟ್ರೆಂಡ್ ಹೇಗಿದೆ ಅಂದ್ರೆ, ಮಾರಾಟವಾಗುವ ಪ್ರತಿ ನೂರು ಕಾರುಗಳ ಪೈಕಿ 50ರಿಂದ 55 ಕಾರುಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ರಸ್ತೆಗಿಳಿಯುತ್ತಿದ್ದು, ಇದೇ ಕಾರಣಕ್ಕೆ ಲಾಭಾಂಶ ವಿಚಾರದಲ್ಲಿ ಐಷಾರಾಮಿ ಸಂಸ್ಥೆಗಳನ್ನೇ ಮಿರಿಸಿರುವ ಸುಜುಕಿ ಸಂಸ್ಥೆಯು ಭಾರತವಷ್ಟೇ ಅಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿದೆ ಎನ್ನಬಹುದು.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಇದೇ ಕಾರಣಕ್ಕೆ ಭಾರತದಲ್ಲಿ ನಂ.1 ಕಾರು ಉತ್ಪಾದನೆ ಮತ್ತು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಸಂಸ್ಥೆಯು ಶೇ.51ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಬಿಎಂಡಬ್ಲ್ಯು ಸಂಸ್ಥೆಗಿಂತಲೂ ಭಾರೀ ಲಾಭಾಂಶ ತನ್ನದಾಗಿಸಿಕೊಂಡಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

2016ರ ಅವಧಿಯಲ್ಲಿ ಬೆಸ್ಟ್ ಲಗ್ಷುರಿ ಕಾರು ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಬಿಎಂಡಬ್ಲ್ಯು ಸಂಸ್ಥೆಯು ಸದ್ಯ ವಿಶ್ವ ಮಾರುಕಟ್ಟೆಯಲ್ಲಿ ನಷ್ಟ ಹಾದಿಯಲ್ಲಿದ್ದು, ಸಂಸ್ಥೆಯ ಲಾಭಾಂಶವು ನೆಲಕಚ್ಚಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುವ ಕಾರುಗಳಿಂದ ಸಿಗುವ ಲಾಭ ಮೇಲೆ ಸಿದ್ದಪಡಿಸಲಾಗುವ ಲಾಭಾಂಶಗಳ ಪಟ್ಟಿ ಪ್ರಕಾರ, 2018-19 ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಸುಜುಕಿ ಸಂಸ್ಥೆಯು ಶೇ. 11.8 ರಷ್ಟು ಲಾಭ ಗಳಿಕೆ ಮಾಡಿದ್ರೆ ಬಿಎಂಡಬ್ಲ್ಯು ಸಂಸ್ಥೆಯು ಶೇ. 0.4 ರಷ್ಟು ಲಾಭಗಳಿಸಿರುವುದು ಬಹಿರಂಗವಾಗಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಈ ಹಿಂದೆ ಸರಾಸರಿ ಶೇ.3.50 ರಿಂದ ಶೇ.4 ರಷ್ಟು ಲಾಭ ಗಳಿಕೆ ಮಾಡುತ್ತಿದ್ದ ಬಿಎಂಡಬ್ಲ್ಯು ಸಂಸ್ಥೆಯು ಈ ಬಾರಿ ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, ಭಾರತದಲ್ಲಿ ದಿನದಿಂದ ಕಾರು ಮಾರಾಟದಲ್ಲಿ ಅತ್ಯುತ್ತಮ ಬೇಡಿಕೆ ದಾಖಲಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಲಾಭ ಗಳಿಕೆಯಲ್ಲಿ ಐಷಾರಾಮಿ ಸಂಸ್ಥೆಗಳನ್ನೇ ಹಿಂದಿಕ್ಕಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ವಾಹನ ಸಂಸ್ಥೆಗಳೊಂದಿಗೆ ಹೊಸ ಕಾರು ಉತ್ಪನ್ನಗಳನ್ನು ಹೊರತರುತ್ತಿರುವ ಸುಜುಕಿ ಸಂಸ್ಥೆಯು ಭಾರತದಲ್ಲಿ ಮಾರುತಿ ಜೊತೆ ಕೈಜೋಡಿಸುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಇತರೆ ಸಂಸ್ಥೆಗಳಿಂತಲೂ ಮಾರಾಟದಲ್ಲಿ ಬುದ್ದಿವಂತಿಕೆ ತೊರುವ ಮಾರುತಿ ಸುಜುಕಿ ಸಂಸ್ಥೆಯು ಯಾವುದೇ ಕಾರಣಕ್ಕೂ ದುಬಾರಿ ಬೆಲೆಗಳ ಕಾರು ಮಾರಾಟಕ್ಕೆ ಕೈಹಾಕದೇ ಮಧ್ಯಮ ವರ್ಗಗಳ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಗಮನಹರಿಸಿ ಆ ಪ್ರಕಾರವೇ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡುತ್ತಿರುವುದು ಲಾಭದಾಯಕ ಸಂಸ್ಥೆ ಎಂಬ ಜನಪ್ರಿಯತೆ ತನ್ನದಾಗಿಸಿಕೊಂಡಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಅದರಲ್ಲೂ ಪ್ರಮುಖವಾಗಿ ಇತರೆ ದೇಶಗಳಲ್ಲಿ ಮಾರಾಟವಾಗುವ ಕಾರುಗಳ ಪ್ರಮಾಣಕ್ಕಿಂತಲೂ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು ಮಾರಾಟ ಜಾಲ ವಿಸ್ತರಣೆಗಾಗಿ ಪ್ರತಿ ವರ್ಷವೂ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿ ಯಶಸ್ವಿಯಾಗಿದೆ.

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಇದೇ ಕಾರಣಕ್ಕೆ ಸದ್ಯ ಬಿಎಂಡಬ್ಲ್ಯು ಸಂಸ್ಥೆಗೆ ಟಾಂಗ್ ಕೊಟ್ಟಿರುವ ಸುಜುಕಿ ಸಂಸ್ಥೆಯು ಸದ್ಯದಲ್ಲೇ ಕಾರು ಮಾರಾಟಕ್ಕಾಗಿ ಭಾರತದಲ್ಲಿ ಟಯೊಟಾ ಜೊತೆ ಕೈಜೊಡಿಸಲು ನಿರ್ಣಯಿಸಿದ್ದು, ಬೆಂಗಳೂರಿನ ಬಿಡದಿಯಲ್ಲಿರುವ ಟೊಯೊಟಾ ಕಾರು ಉತ್ಪಾದನೆಯನ್ನು ಹೆಚ್ಚಿಸಲು ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡುತ್ತಿರುವ ಮಾರುತಿ ಸಂಸ್ಥೆಯು ಕಾರು ಮಾರಾಟದಲ್ಲಿ ಮತ್ತಷ್ಟು ಪಾಲು ತಮ್ಮದಾಗಿಸಿಕೊಳ್ಳಲು ಪರಸ್ಪರ ಕಾರು ಮಾರಾಟ ವಿಧಾನ ಅನುಸರಿಸಲು ಮುಂದಾರಿರುವುದು ಭಾರತೀಯ ಆಟೋ ಉದ್ಯಮದ್ಲಲೇ ಭಾರೀ ಕುತೂಹಲ ಹುಟ್ಟುಹಾಕಿದೆ.

Most Read Articles

Kannada
Read more on auto news maruti suzuki bmw
English summary
Suzuki Overtakes BMW To Become World’s Most-Profitable Car Company
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X