ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

By Praveen Sannamani

ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಉನ್ನತಿಕರಿಸುವ ಸಂಬಂಧ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳು ಹಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದು, ಜಪಾನ್ ಸರ್ಕಾರವು ಕೈಗೊಂಡ ಹೊಸ ವಾಹನಗಳ ಗುಣಮಟ್ಟದ ತನಿಖೆಯಲ್ಲಿ ಸುಜುಕಿ ಮೋಟಾರ್ಸ್‌ ಸಂಸ್ಥೆಯ ಅಸಲಿಯತ್ತು ಬೆಳಕಿಗೆ ಬಂದಿದೆ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಹೌದು, ಜಪಾನ್ ಸಾರಿಗೆ ಇಲಾಖೆಯು ಹೊಸ ವಾಹನಗಳ ಉತ್ಪಾದನಾ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ರಹಸ್ಯ ತನಿಖೆ ನಡೆಸುತ್ತಿದ್ದು, ಇದರಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಸುಜುಕಿ ಮೋಟಾರ್ಸ್, ಮಜ್ದಾ ಮೋಟಾರ್ಸ್ ಮತ್ತು ಯಮಹಾ ಮೋಟಾರ್ಸ್ ಸಂಸ್ಥೆಯ ಪ್ರಮುಖ ವಾಹನಗಳು ಕಳೆಪೆಯಿಂದ ಕೂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಈ ಬಗ್ಗೆ ಜಪಾನ್ ಸಾರಿಗೆ ಇಲಾಖೆಗೆ ಕ್ಷಮೆ ಕೋರಿರುವ ಸುಜುಕಿ, ಮಜ್ದಾ ಮತ್ತು ಯಮಹಾ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಗುಣಮಟ್ಟ ಸೇವೆಗಳನ್ನು ಒದಗಿಸುವ ಬಗ್ಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು, ಗ್ರಾಹಕ ಬಳಕೆಗೆ ಯೋಗ್ಯವಲ್ಲದ ವಾಹನಗಳ ಉತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿವೆ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

2015ರಲ್ಲಿ ಜರ್ಮನ್ ಸರ್ಕಾರವು ಫೋಕ್ಸ್‌ವ್ಯಾಗನ್ ಸಂಸ್ಥೆಯ ವಿರುದ್ಧ ನಡೆಸಿದ್ದ ರಹಸ್ಯ ಕಾರ್ಯಾಚರಣೆಯ ಮಾದರಿಯಲ್ಲೇ ಜಪಾನ್ ಸರ್ಕಾರವು ಕೂಡಾ ಗ್ರಾಹಕರ ದೂರಿನ ಅನ್ವಯ ಸುಜುಕಿ, ಮಜ್ದಾ ಮತ್ತು ಯಮಹಾ ವಿರುದ್ಧ ತನಿಖೆ ಕೈಗೊಂಡಿತ್ತು.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಈ ವೇಳೆ ಕಾರಿನ ಗುಣಮಟ್ಟ ಮತ್ತು ಎಂಜಿನ್ ಕಾರ್ಯಕ್ಷಮತೆ, ಇಂಧನ ದಕ್ಷತೆ ಸೇರಿದಂತೆ ಹಲವು ತಾಂತ್ರಿಕ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದಲ್ಲದೇ ಗ್ರಾಹಕರ ನೀಡಿರುವ ಭರವಸೆಗಳಿಗೂ ವಾಸ್ತಾವಕ್ಕೂ ಸಾಕಷ್ಟು ವ್ಯತ್ಯಾಸವಿತ್ತು.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಇದರಿಂದ ವಾಹನ ತಯಾರಿಕಾ ದಿಗ್ಗಜ ಸಂಸ್ಥೆಗಳಾದ ಸುಜುಕಿ, ಮಜ್ದಾ ಮತ್ತು ಯಮಹಾ ಸಂಸ್ಥೆಗಳ ವಿರುದ್ಧ ಕಿಡಿಕಾರಿರುವ ಜಪಾನ್ ಸಾರಿಗೆ ಸಂಸ್ಥೆಯು ಸದ್ಯದಲ್ಲೇ ವಾಹನ ಉತ್ಪಾದನೆಯಲ್ಲಿ ಬದಲಾವಣೆ ತರದೇ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಇನ್ನೊಂದು ವಿಚಾರ ಅಂದ್ರೆ ಕಾರಿನ ಗುಣಮಟ್ಟ ಪರೀಕ್ಷಿಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಸುರಕ್ಷೆಯಿಂದ ಕೂಡಿರುವ ವಾಹನಗಳನ್ನು ಮಾತ್ರವೇ ಒದಗಿಸಿ ಉತ್ತಮ ರೇಟಿಂಗ್ ಗಿಟ್ಟಿಸಿಕೊಳ್ಳುವ ಕಾರು ಉತ್ಪಾದನಾ ಸಂಸ್ಥೆಗಳು ತದನಂತರ ಕಾರು ಉತ್ಪಾದನೆಯ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಬೀಡಿಭಾಗಗಳನ್ನು ಬಳಕೆ ಮಾಡಿ ಮಾರಾಟ ಮಾಡುವುದು ಬಹುತೇಕ ಗೊತ್ತಿಲ್ಲ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಇದೇ ಕಾರಣಕ್ಕೆ ಗ್ರಾಹಕರ ಸೋಗಿನಲ್ಲಿ ಸುಜುಕಿ, ಮಜ್ದಾ ಮತ್ತು ಯಮಹಾ ಸಂಸ್ಥೆಗಳ ಆಯ್ದ ವಾಹನಗಳನ್ನು ಆಯ್ದುಕೊಂಡು ಸುರಕ್ಷತಾ ಪರೀಕ್ಷೆಯನ್ನ ನಡೆಸಿದ್ದ ಜಪಾನ್ ಸಾರಿಗೆ ಸಂಸ್ಥೆಯು, ಕ್ರ್ಯಾಶ್ ಟೆಸ್ಟಿಂಗ್ ಒದಗಿಸಿದ ಕಾರುಗಳಿಗೂ ಮತ್ತು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಕಾರುಗಳಿಗೂ ಹೋಲಿಕೆ ಮಾಡಿ ಪರೀಕ್ಷೆ ಕೈಗೊಂಡಿತ್ತು.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಇದರಲ್ಲಿ ಸುಜುಕಿ ನಿರ್ಮಾಣ ಬಹುತೇಕ ಕಾರುಗಳು ಕಳಪೆಯಿಂದ ಕೂಡಿರುವುದರಲ್ಲೇ ಸಾರಿಗೆ ನಿಯಮ ಮೀರಿ ಮಾಲಿನ್ಯ ಹೊರಸೂಸುತ್ತಿರುವುದು ಕೂಡಾ ಬೆಳಕಿಗೆ ಬಂದಿದೆ. ಜೊತೆಗೆ ಕಾರು ಸಂಸ್ಥೆಗಳು ಹೇಳಿಕೊಳ್ಳುವಷ್ಟು ಮೈಲೇಜ್ ಕೂಡಾ ಬರದಿರುವುದು ಗ್ರಾಹಕರ ಆಕ್ರೋಶಕ್ಕೂ ಕಾರಣವಾಗಿವೆ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಇಷ್ಟೇಲ್ಲಾ ಅಂಶಗಳನ್ನ ನಾವು ಪರಿಶೀಲನೆ ಮಾಡಿದಾಗ ಸಾರಿಗೆ ನಿಯಮಗಳು ಕಠಿಣವಾಗಿರುವ ಜಪಾನ್‌ನಲ್ಲೇ ಗ್ರಾಹಕರಿಗೆ ಮೋಸಮಾಡುವ ಸುಜುಕಿ ಸಂಸ್ಥೆಯ ಕರ್ಮಕಾಂಡವು ಭಾರತದಲ್ಲಿ ಇನ್ನು ಘೋರವಾಗಿರುತ್ತೆ ಅಂದ್ರೆ ತಪ್ಪಾಗುವುದಿಲ್ಲ.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಜೊತೆಗೆ ಕಳೆದ ವಾರವಷ್ಟೇ ನಡೆದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ವಾಹನಗಳೇ ಸುರಕ್ಷಾ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿದ್ದು, ಇನ್ನಾದರೂ ವಾಹನ ಖರೀದಿದಾರರು ಅಗ್ಗದ ವಾಹನಗಳನ್ನು ಖರೀದಿಸುವ ಮುನ್ನ ಈ ಎಲ್ಲಾ ವಿಚಾರ ನೆನಪಿನಲ್ಲಿಟ್ಟುಕೊಂಡು ವಾಹನಗಳ ಆಯ್ಕೆ ಮಾಡುವುದು ಒಳಿತು.

ಗುಣಮಟ್ಟ ಮತ್ತು ಮೈಲೇಜ್ ವಿಚಾರದಲ್ಲಿ ಸುಳ್ಳು ಮಾಹಿತಿ- ಸಂಕಷ್ಟಕ್ಕೆ ಸಿಲುಕಿದ ಸುಜುಕಿ ಮೋಟಾರ್ಸ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಸುರಕ್ಷಾ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳು

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಬಿಡದಿಯಲ್ಲಿರುವ ಟೊಯೊಟಾ ಘಟಕದ ವಿಸ್ತರಣೆಗಾಗಿ 7 ಸಾವಿರ ಕೋಟಿ ಹೂಡಿಕೆ ಮಾಡಿದ ಸುಜುಕಿ

Most Read Articles

Kannada
Read more on auto news auto facts
English summary
Suzuki, Mazda, Yamaha Motor apologize for improper vehicle tests
Story first published: Friday, August 10, 2018, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X