ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುವ ನೀರಿಕ್ಷೆ ಇದ್ದು, ಇದೇ ವೇಳೆ ಸುಜುಕಿ ಸಂಸ್ಥೆಯು ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಕಾರು ಮಾದರಿಯನ್ನ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಸ್ಪೋರ್ಟಿ ಮಾದರಿಯಾಗಿರುವುದರಿಂದ ಕಾರಿನ ಬಹುತೇಕ ವಿನ್ಯಾಸಗಳು ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 16-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗರಲಿದ್ದು, ಫೇಸ್‌ಲಿಫ್ಟ್ ಎರ್ಟಿಗಾ ಕಾರುಗಳ ಬಿಡುಗಡೆಯ ನಂತರ ಸ್ಪೋರ್ಟಿ ವರ್ಷನ್ ಮಾದರಿಗಳನ್ನ ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯೇ ಈ ಕುರಿತು ಸ್ಪಪ್ಟಪಡಿಸಬೇಕಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಚಾರ ಅಂದ್ರೆ, ಹೊರ ವಿನ್ಯಾಸಗಳಲ್ಲಿ ಮಾತ್ರವೇ ಸ್ಪೋರ್ಟಿ ಲುಕ್ ಪಡೆದಿರುವ ಎರ್ಟಿಗಾ ಸ್ಪೋರ್ಟ್ ಕಾರುಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ ಮೂಲ ಮಾದರಿಯಲ್ಲಿರುವ ವೈಶಿಷ್ಟ್ಯತೆಗಳನ್ನೇ ಪಡೆದುಕೊಂಡಿದೆ ಎನ್ನಬಹುದು.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಇದರ ಜೊತೆಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಎರ್ಟಿಗಾ ಟಾಪ್ ಎಂಡ್‌ಗಳಲ್ಲಿ ಸ್ಪೋರ್ಟಿ ವರ್ಷನ್‌ಗಳನ್ನ ಈಗಾಗಲೇ ಖರೀದಿಸಬಹುದಾಗಿದ್ದು, ಇದೀಗ ಸುಜುಕಿ ಸಂಸ್ಥೆಯು ಜಾಗತಿಕವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ಪೋರ್ಟಿ ವರ್ಷನ್ ಪ್ರತ್ಯೇಕಗೊಳಿಸಿ ಮಾರಾಟ ಮಾಡುವುದಕ್ಕಾಗಿಯೇ ಕಾನ್ಸೆಪ್ಟ್ ಮಾದರಿಯನ್ನಅನಾವರಣಗೊಳಿಸಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಕಳೆದ ಬಾರಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿದ್ದ ಎರ್ಟಿಗಾ ಫೇಸ್‌ಲಿಫ್ಟ್‌ಗೂ ಮತ್ತು ಸ್ಪೋರ್ಟಿ ಎರ್ಟಿಗಾ ಕಾರಿಗಳ ನಡುವಿನ ವಿನ್ಯಾಸಗಳು ಬೇರೆ ಬೇರೆಯಾಗಿದ್ದರೂ ಎಂಜಿನ್ ವೈಶಿಷ್ಟ್ಯತೆ ಒಂದೇ ಆಗಿದ್ದು, ಫೇಸ್‌ಲಿಫ್ಟ್ ವರ್ಷನ್‌ಗಳು ಪ್ರಿಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಜೊತೆಗೆ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಬಿಡುಗಡೆಗೊಳ್ಳಲಿರುವ ಹೊಸ ಮಾರುತಿ ಎರ್ಟಿಗಾ ಎಮ್‍‍ಪಿವಿ ಫೇಸ್‌ಲಿಫ್ಟ್ ಕಾರುಗಳು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಸಹಾಯದಿಂದ 105-ಬಿಹೆಚ್‍‍ಪಿ ಮತ್ತು 198-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎರ್ಟಿಗಾ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಮತ್ತೊಂದು ಮಾಹಿತಿ ಪ್ರಕಾರ, ಪ್ರಸ್ತುತ ತಲೆಮಾರಿನ ಎರ್ಟಿಗಾ ಕಾರುಗಳ ಮಾರಾಟವನ್ನು ಮುಂದುವರಿಸಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಟೂರ್ ವರ್ಷನ್‌ನೊಂದಿಗೆ ಟೂರಿಸ್ಟ್ ವಿಭಾಗಕ್ಕೆ ಪರಿಚಯಿಸುವ ಇರಾದೆಯಲ್ಲಿದ್ದು, ಹೊಸ ತಲೆಮಾರಿನ ಎರ್ಟಿಗಾ ಕಾರುಗಳು ಸಾಮಾನ್ಯ ಕಾರಿಗಿಂತ ತುಸು ದುಬಾರಿಯಾಗಿರಲಿವೆ.

Most Read Articles

Kannada
English summary
Suzuki Ertiga Sport Concept Unveiled At GIIAS 2018: Will It Launch In India?
Story first published: Friday, August 3, 2018, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X