Just In
- 6 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 7 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 8 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 9 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪ್ ರೋಡ್ ಎಸ್ಯುವಿಗಳಲ್ಲಿ ಭಾರೀ ಸದ್ದು ಮಾಡಲಿದೆ ಸುಜುಕಿ ಜಮ್ನಿ
ಜಪಾನ್ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾದ ಸುಜುಕಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಮತ್ತೊಂದು ವಿಶೇಷ ವಿನ್ಯಾಸದ ಜಿಮ್ನಿ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಭಾರತದಲ್ಲಿ ಬಿಡುಗಡೆಗೂ ಮುನ್ನ ಜಪಾನ್ ಮಾರುಕಟ್ಟೆಯಲ್ಲಿ ಹೊಸ ಜಿಮ್ನಿ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಸುಜುಕಿ ಬ್ರಾಂಡ್ ಬಗ್ಗೆ ತಿಳಿದವರಿಗೆ ಜಿಮ್ನಿ ಎಂಬ ಕ್ರೀಡಾ ಬಳಕೆಯ ಕಾರಿನ ಬಗ್ಗೆ ಚೆನ್ನಾಗಿ ಗೊತ್ತಿರಬಹುದು. ನೂತನ ಬಲೆನೊ ಹಾಗೂ ಇಗ್ನಿಸ್ ತಳಹದಿಯಲ್ಲೇ ನಿರ್ಮಾಣವಾಗಲಿರುವ ಜಿಮ್ನಿ ಕಾರುಗಳು ಭಾರತದಿಂದಲೇ ರಫ್ತಾಗುತ್ತಿವೆ ಎಂಬುದು ಮಗದೊಂದು ಗಮನಾರ್ಹ ಸಂಗತಿ. ಹೀಗಿರುವಾಗ ಈ ಹೊಸ ಕಾರು ದೇಶಿಯ ಗ್ರಾಹಕರನ್ನು ಸೆಳೆಯಲು ತಯಾರಿ ನಡೆಸಿದ್ದು, ಇದೀಗ ಎಲ್ಲರ ಕಣ್ಣು ಜಿಮ್ನಿ ಮೇಲೆಯೇ ನೆಟ್ಟಿದೆ.
ಜಿಮ್ನಿ ಕಾರುಗಳ ಇತಿಹಾಸದತ್ತ ಕಣ್ಣಾಯಿಸಿದಾಗ 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್ಜೆ10 ಮಾರುಕಟ್ಟೆಗೆ ಪರಿಚಯವಾಗಿತ್ತು. ತದನಂತರ ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು. ತದನಂತರ ಮೂರನೇ ತಲೆಮಾರಿನ ಆವೃತ್ತಿಯು ಜನಪ್ರಿಯಗೊಂಡು ಇದೀಗ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಮಾರಾಟಕ್ಕೆ ಲಭ್ಯವಾಗಿವೆ.
ಹೀಗೆ ವಿವಿಧ ದೇಶಗಳ ಮಾರುಕಟ್ಟೆ ಬೇರೆ ಬೇರೆ ಹೆಸರಿನೊಂದಿಗೆ ಮಾರಾಟವಾಗುತ್ತಿರುವ ಜಿಮ್ನಿ ಕಾರುಗಳು ಕಾಲ ಕ್ರಮೇಣ ಹಲವಾರು ಬದಲಾಣೆಗಳೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಆಪ್ ರೋಡ್ ಪ್ರದರ್ಶನದಲ್ಲಿ ಈ ಕಾರುಗಳ ಗತ್ತು ನೋಡಿದವರಿಗಷ್ಟೇ ಗೊತ್ತು.
4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ಪ್ರಮುಖವಾಗಿ ಎರಡು ವೆರಿಯೆಂಟ್ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.
ಇವುಗಳಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಕ್ಸ್ಜಿ, ಎಕ್ಸ್ಎಲ್ ಮತ್ತು ಎಕ್ಸ್ಸಿ ಎನ್ನುವ ಮಾದರಿಗಳು ಖರೀದಿಗೆ ಲಭ್ಯವಾಗಿದ್ದು, ಕೇಲವೇ ಕೆಲವು ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸೌಲಭ್ಯಗಳು ಪ್ರತಿ ಮಾದರಿಯಲ್ಲೂ ಕಾಣಬಹುದಾಗಿದೆ.
ಎಂಜಿನ್ ಸಾಮರ್ಥ್ಯ
ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು 660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ 1.5-ಲೀಟರ್(1500 ಸಿಸಿ) ಪೆಟ್ರೋಲ್ ಎಂಜಿನ್ ಜೊತೆಗೆ 63-ಬಿಎಚ್ಪಿ ಉತ್ಪಾದನೆ ಮಾಡಿದಲ್ಲಿ ಟಾಪ್ ಮಾದರಿಯು 100-ಬಿಎಚ್ಪಿ ಉತ್ಪಾದನಾ ಗುಣಹೊಂದಿವೆ. ಇದರೊಂದಿಗೆ ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಒದಗಿಸಲಾಗಿದೆ.
ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಜಿಮ್ನಿ ಕಾರುಗಳು ಬಲೆನೊ ಆರ್ಎಸ್ ಕಾರಿನ ಮಾದರಿಯಲ್ಲೇ 1.0-ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಎಲ್ಲಾ ಮಾದರಿಗಳಲ್ಲೂ 4x4 ಡ್ರೈವ್ ಸಿಸ್ಟಂ ಜೋಡಣೆಯಿರಲಿದೆ.
ಕಾರಿನ ವೈಶಿಷ್ಯತೆಗಳು
ಜಿಮ್ನಿ ಕಾರುಗಳಲ್ಲಿ ಮಾರ್ಡನ್ ಲುಕ್ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.
ಜೊತೆಗೆ ಆಪ್ ರೋಡ್, ಸರ್ವಿಯಲ್ ಮತ್ತು ರೆವಿವಲ್ ಎನ್ನುವ ವಿವಿಧ ಚಾಲನಾ ಕಿಟ್ ಒದಗಿಸಲಾಗಿದ್ದು, ಬಾಡಿ ಡಿಕಾಲ್ಸ್, ಲೆದರ್ ಕವರ್ ಪ್ರೇರಿತ ಡೋರ್ ಹ್ಯಾಂಡಲ್, ಕಾರಿನ ಸ್ಟೈಲಿಶ್ ಹೆಚ್ಚಿಸಲು ರೂಫ್ ಟಾಪ್ ಕ್ಯಾರಿಯರ್, ಅಲಾಯ್ ವೀಲ್ಹ್ಗಳು ಮತ್ತು ಕಾರಿನ ಕೆಳ ಭಾಗದಲ್ಲಿ ಹೆಚ್ಚುವರಿ ಟೈರ್ ಕ್ಯಾರಿ ಮಾಡುವ ಸೌಲಭ್ಯವಿದೆ.
ಲಭ್ಯವಿರುವ ಬಣ್ಣಗಳು
ಒಟ್ಟು ಎಂಟು ಬಣ್ಣಗಳಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು ಐದು ಸಿಂಗಲ್ ಟೊನ್ ಬಣ್ಣವನ್ನು ಪಡೆದಿದ್ದರೆ ಇನ್ನುಳಿದ ಮೂರರಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.
ಕಾರು ಬಿಡುಗಡೆಯ ದಿನಾಂಕ
ಜಪಾನ್ನಲ್ಲಿ ಸದ್ಯ ಬಿಡುಗಡೆಯಾಗಲಿರುವ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಬಿಡುಗಡೆ ಒಂದೇ ವಾರದಲ್ಲಿ ಭಾರೀ ಪ್ರಮಾಣ ಬೇಡಿಕೆ ಪಡೆದಿದ್ದು, ವರದಿಗಳ ಪ್ರಕಾರ ಇದೇ ವರ್ಷಾಂತ್ಯದಲ್ಲಿ ಭಾರತದಲ್ಲೂ ಹೊಸ ಕಾರುಗಳು ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕಾರಿನ ಬೆಲೆಗಳು (ಅಂದಾಜು)
ಉದ್ದಳತೆಯಲ್ಲಿ ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರುಗಳು ಭಾರತದಲ್ಲಿ 8 ಲಕ್ಷದಿಂದ 10 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು, ಇವು ತ್ರಿ ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಆಪ್ ರೋಡ್ ಪ್ರಿಯರಿಗೆ ಹೊಸ ಥ್ರೀಲ್ ನೀಡಲಿವೆ.