ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಮತ್ತೊಮ್ಮೆ ವಾಹನ ಉದ್ಯಮದಲ್ಲಿ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿದ್ದು, ಸದ್ಯದಲ್ಲೇ ಕೈಗೆಟುಕುವ ಬೆಲೆಗಳಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

By Praveen Sannamani

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಮತ್ತೊಮ್ಮೆ ವಾಹನ ಉದ್ಯಮದಲ್ಲಿ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿದ್ದು, ಸದ್ಯದಲ್ಲೇ ಕೈಗೆಟುಕುವ ಬೆಲೆಗಳಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದಕ್ಕೆ ಪೂರಕ ಎನ್ನುವಂತೆ ಬೃಹತ್ ಬಂಡವಾಳ ಹೂಡಿಕೆಯೊಂದಿಗೆ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಅಭಿವೃದ್ಧಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಸದ್ಯ ಭಾರತದಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್ ಮಾರಾಟಕ್ಕೆ ಲಭ್ಯವಿವೆ. ಹೀಗಿದ್ದರೂ ವಾಹನ ಖರೀದಿದಾರರು ಎಲೆಕ್ಟ್ರಿಕ್ ಬೈಕ್ ಖರೀದಿಗೆ ಅಷ್ಟಾಗಿ ಆಸಕ್ತಿ ತೊರುತ್ತಿಲ್ಲ. ಇದಕ್ಕೆ ಕಾರಣ ಸಾಮಾನ್ಯ ವಾಹನಗಳಿಂತ ಬೆಲೆ ಹೆಚ್ಚಳ ಮತ್ತು ಸೂಕ್ತ ಚಾರ್ಜಿಂಗ್ ಪಾಯಿಂಟ್‌ಗಳು ಇಲ್ಲದಿರುವುದು ಹೊಸ ಯೋಜನೆಗೆ ಹಿನ್ನಡೆಯಾಗುತ್ತಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಇದೇ ಕಾರಣಕ್ಕೆ ಗ್ರಾಹಕರನ್ನು ಉತ್ತೇಜಿಸಲು ಮುಂದಾಗಿರುವ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೊರ ತರುವ ಯೋಜನೆಗೆ ಚಾಲನೆ ನೀಡಿದ್ದು, ಈ ಸಂಬಂಧ ಕೇಂದ್ರದಿಂದ ಹೊಸ ಯೋಜನೆಗಾಗಿ ನೆರವು ಕೋರಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

1,700 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ನಿರ್ಮಾಣ ಘಟಕದ ಸ್ಥಾಪನೆಗಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಿರುವ ಸುಜುಕಿ ಸಂಸ್ಥೆಯ ಅಧ್ಯಕ್ಷ ಒಸಾಮು ಸುಜುಕಿ ಅವರು ಎಲೆಕ್ಟ್ರಿಕ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸುಜುಕಿ ಸಂಸ್ಥೆಯು ಸಿದ್ದವಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿದ್ದಾರೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಇದಕ್ಕೆ ಸಕರಾತ್ಮಕವಾಗಿಯೇ ಪ್ರತಿಕ್ರಿಯೆಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಬ್ಯಾಟರಿ ನಿರ್ಮಾಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಪ್ಪಿಗೆ ಸೂಚಿಸಿದ್ದು, ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನು ಸೆಳೆಯುವಂತಹ ಯೋಜನೆಗಳನ್ನು ಸಿದ್ದಪಡಿಸಿ ಎಂಬ ಸಲಹೆ ನೀಡಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಹೀಗಾಗಿ ಸುಜುಕಿ ಸಂಸ್ಥೆಯು ಭಾರತೀಯ ಗ್ರಾಹಕರ ಆದ್ಯತೆ ಮೆರೆಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಸಿದ್ದಗೊಳಿಸುವ ಬಗ್ಗೆ ಮಾರುಕಟ್ಟೆ ಅಧ್ಯಯನ ಕೈಗೊಂಡಿದ್ದು, ಮುಂದಿನ ವರ್ಷದಿಂದಲೇ ಎಲೆಕ್ಟ್ರಿಕ್ ಬ್ಯಾಟರಿ ಘಟಕವು ತನ್ನ ಕಾರ್ಯಚರಣೆ ಆರಂಭಿಸಲಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಮೂಲಗಳ ಪ್ರಕಾರ ಸುಜುಕಿ ನಿರ್ಮಾಣ ಮಾಡಲು ನಿರ್ಧರಿಸಿರುವ ಎಲೆಕ್ಟ್ರಿಕ್ ಬ್ಯಾಟರಿ ಘಟಕವು ಗುಜರಾತ್‌ನಲ್ಲೇ ತಲೆಎತ್ತಲಿದೆ ಎನ್ನಲಾಗಿದ್ದು, ಸುಜುಕಿ ಸಂಸ್ಥೆಯು ತನ್ನದೇ ನಿರ್ಮಾಣದ ಇವಿ ಸ್ಕೂಟರ್‌ಗಳಷ್ಟೇ ಅಲ್ಲದೇ ಇತರೆ ಸಂಸ್ಥೆಗಳಿಗೂ ಎಲೆಕ್ಟ್ರಿಕ್ ಬ್ಯಾಟರಿ ಪೂರೈಕೆ ಮಾಡಲಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಇನ್ನು ಹೊಸ ಯೋಜನೆಗಾಗಿ ಬೃಹತ್ ಬಂಡವಾಳ ಹೂಡಿಕೆ ಮಾಡಿರುವ ಸುಜುಕಿ ಸಂಸ್ಥೆಯು ಎಲೆಕ್ಟ್ರಿಕ್ ಬ್ಯಾಟರಿ ತಂತ್ರಜ್ಞಾನ ಅಭಿವೃದ್ದಿಗಾಗಿ ತೊಷಿಬಾ ಮತ್ತು ಡೆನ್ಸೊ ಸಂಸ್ಥೆಗಳನ್ನು ತನ್ನ ಪಾಲುದಾರ ಸಂಸ್ಥೆಗಳನ್ನಾಗಿ ನೇಮಕ ಮಾಡಿದ್ದು, ಅಗ್ಗದ ಬೆಲೆಗಳಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಬ್ಯಾಟರಿ ಉತ್ಪಾದನೆ ಮಾಡಲು ಈ ಎರಡು ಸಂಸ್ಥೆಗಳು ಸುಜುಕಿ ಸಂಸ್ಥೆಗೆ ಸಹಾಯ ಮಾಡಲಿದೆ.

ಅಗ್ಗದ ಬೆಲೆಯ ಇವಿ ಬೈಕ್, ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ ಸುಜುಕಿ

ಈ ಮೂಲಕ 2020ರ ವೇಳೆಗೆ ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಇವಿ ಕಾರುಗಳನ್ನು ಅಭಿವೃದ್ದಿ ಮಾಡಿ ಮಾರಾಟ ಮಾಡಲಿರುವ ಸುಜುಕಿ ಸಂಸ್ಥೆಯು ಮತ್ತೊಂದು ಟ್ರೆಂಡ್ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
Read more on electric scooter suzuki
English summary
Suzuki to bring an electric two wheeler to the Indian market by 2020.
Story first published: Thursday, July 5, 2018, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X