Just In
- 6 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 7 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 8 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 8 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಲ್ಡ್ ಹೈಬ್ರಿಡ್ ಎಂಜಿನ್ನೊಂದಿಗೆ ಬರಲಿದೆ ಟಾಟಾ 45ಎಕ್ಸ್ ಪ್ರೀಮಿಯಂ ಕಾರು
2019ರ ಜನವರಿ ಆರಂಭದಲ್ಲಿ ಹ್ಯಾರಿಯರ್ ಸಬ್ ಕಂಪ್ಯಾಕ್ಟ್ ಎಸ್ಯುವಿ ಕಾರನ್ನು ಬಿಡುಗಡೆಗೊಳಿಸಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ತದನಂತರವಷ್ಟೇ ಮತ್ತೊಂದು ಬಹುನೀರಿಕ್ಷಿತ 45ಎಕ್ಸ್ ಹೆಸರಿನ ಪ್ರೀಮಿಯಂ ಹ್ಯಾಚ್ಬ್ಯಾಕ್ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.
ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರೀಯಿಯಂ ಕಾರುಗಳ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆ ಚಾಲನೆ ನೀಡಲಿದೆ. ಹೀಗಾಗಿ ಹೊಸ ಮಾದರಿಯ ಕಾರು 2019ರ ಮಾರ್ಚ್ ಇಲ್ಲವೇ ಮೇ ಆರಂಭದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಇದೀಗ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಕೆಲವು ಮಹತ್ವದ ಮಾಹಿತಿ ಲಭ್ಯವಾಗಿವೆ.
ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ 45ಎಕ್ಸ್ ಮಾದರಿಯನ್ನು ಪ್ರದರ್ಶನ ಮಾಡಿರುವ ಟಾಟಾ ಮೋಟಾರ್ಸ್ ಮುಂದಿನ ಆರು ತಿಂಗಳ ಅವಧಿಯಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರಿನ ವಿನ್ಯಾಸಗಳು ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಸಿದ್ದವಾಗಿರುವುದು ಹ್ಯಾಚ್ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ 45ಎಕ್ಸ್ ಪ್ರಿಮಿಯಂ ಹ್ಯಾಚ್ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.
ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.
ವರದಿಗಳ ಪ್ರಕಾರ, 45ಎಕ್ಸ್ ಕಾರು ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.
ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.
ತದನಂತರ ಆಟೋ ಮೂಡ್ ಮೂಲಕ ತನ್ನಷ್ಟೇ ತಾನೇ ಎಲೆಕ್ಟ್ರಿಕ್ ಮೋಟಾರ್ನಿಂದ ಪೆಟ್ರೋಲ್ ಎಂಜಿನ್ಗೆ ವರ್ಗಾವಣೆಗೊಳ್ಳುವ ಕಾರಿನ ಎಂಜಿನ್ ಅನವಶ್ಯಕವಾಗಿ ಇಂಧನ ವ್ಯರ್ಥವಾಗುವುದನ್ನು ತಪ್ಪಿಸುತ್ತೆ. ಈ ಮೂಲಕ ಕಾರಿನ ಮೈಲೇಜ್ ಪ್ರಮಾಣವು ಹೆಚ್ಚಾಗುವುದಲ್ಲದೇ ಮಾಲಿನ್ಯ ಪ್ರಮಾಣ ಕೂಡಾ ತಗ್ಗುವುದು.
MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!
ಇನ್ನು ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್ನೊಂದಿಗೆ ಸ್ಲಿಕ್ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.
ಬೆಲೆ ಮತ್ತು ಬಿಡುಗಡೆಯ ದಿನಾಂಕ(ಅಂದಾಜು)
ಟಾಟಾ ಸಂಸ್ಥೆಯು ಬಿಡುಗಡೆ ಮಾಡಲು ಯೋಜಿಸಿರುವ ವಿನೂತನ 45ಎಕ್ಸ್ ಕಾನ್ಸೆಪ್ಟ್ ಮಾದರಿಯು 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಮೈಲ್ಡ್ ಹೈಬ್ರಿಡ್ ಎಂಜಿನ್ ಸೌಲಭ್ಯದಿಂದಾಗಿ ಕಾರಿನ ಬೆಲೆಯು ರೂ. 11 ಲಕ್ಷದಿಂದ ರೂ. 13 ಲಕ್ಷ ಬೆಲೆ ಇರಬಹುದೆಂದು ನೀರಿಕ್ಷಿಸಲಾಗಿದೆ.
MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!
ಇದರೊಂದಿಗೆ ಟಾಟಾ ಹೊಸ ಕಾರುಗಳು ಗೇಮ್ಚೆಂಜರ್ ಮಾದರಿಯಾಗಿ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಪ್ರಿಮಿಯಂ ಹ್ಯಾಚ್ಬ್ಯಾಕ್ ಕಾರುಗಳಿಗೆ ತ್ರೀವ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.