ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಸಂಸ್ಥೆಯು 2019ರ ಆರಂಭದಲ್ಲಿ ತನ್ನ ಬಹುನೀರಿಕ್ಷಿತ ಪ್ರೀಮಿಯಂ ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯಾದ ಹ್ಯಾರಿಯರ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಇದೀಗ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಈಗಾಗಲೇ ಟಾಟಾ ಹ್ಯಾರಿಯರ್ ಕಾರು ವಿಸ್ಟಿಯೋನ್ ಸಂಸ್ಥೆಯ 8.8 ಇಂಚಿನ ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಫ್-ರೋಡ್ ಚಾಲನಾ ಸೌಲಭ್ಯಗಳನ್ನು ಹೊತ್ತು ಬರುತ್ತಿರುವುದು ಖಚಿತವಾಗಿದ್ದು, ಇಷ್ಟು ದಿನ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಕಂಡುಬರುತ್ತಿದ್ದ ವಿಸ್ಟಿಯೋನ್ ಇನ್ಪೋಟೈನ್‌ಮೆಂಟ್ ಇದೀಗ ಟಾಟಾ ಹ್ಯಾರಿಯರ್ ಕಾರಿನಲ್ಲೂ ಬಳಕೆಯಾಗುತ್ತಿರುವುದು ಕಾರಿನ ಮೌಲ್ಯವನ್ನು ಹೆಚ್ಚಿಸಿದೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ವಿಸ್ಟಿಯೋನ್ ಸಂಸ್ಥೆಯು ಸದ್ಯ ಮಜ್ದಾ ಮತ್ತು ಫೋರ್ಡ್ ಸಂಸ್ಥೆಗಳಿಗೆ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸುತ್ತಿದ್ದು, ಇದಲ್ಲದೇ ರೇಂಜ್ ರೋವರ್ ಸಂಸ್ಥೆಯ ವೆಲಾರ್ ಎಸ್‍ಯುವಿ ಕಾರಿಗೂ ಕೂಡಾ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನೀಡುತ್ತಿದೆ. ಇದೀಗ ಟಾಟಾ ಹ್ಯಾರಿಯರ್ ಕಾರು ಕೂಡಾ ವಿಸ್ಟಿಯೋನ್ ಸಂಸ್ಥೆಯ ಉಪಕರಣವನ್ನು ಪಡೆದುಕೊಂಡಿದೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಇನ್ನು ಹ್ಯಾರಿಯರ್ ಕಾರು ತನ್ನ ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಗಾತ್ರದಲ್ಲಿ ದೊಡ್ಡದಾಗಿದ್ದು, ಕಾರಿನ ಉದ್ದಳತೆ ಇದೀಗ ಮಾಹಿತಿ ಬಹಿರಂಗ ಮಾಡಲಾಗಿದೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಕಾರಿನ ಉದ್ದಳತೆ

ಉದ್ದ 4598ಎಂಎಂ
ಅಗಲ 1894ಎಂಎಂ
ಎತ್ತರ 1714ಎಂಎಂ
ವೀಲ್ ಬೆಸ್ 2741ಎಂಎಂ

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಹ್ಯಾರಿಯರ್ ಪ್ರತಿ ಸ್ಪರ್ಧಿ ಕಾರುಗಳು

ಕಾರು ಮಾದರಿಗಳು ಉದ್ದ ಅಗಲ ಎತ್ತರ
ಟಾಟಾ ಹ್ಯಾರಿಯರ್ 4598ಎಂಎಂ 1894ಎಂಎಂ 1714ಎಂಎಂ
ಹ್ಯುಂಡೈ ಕ್ರೆಟಾ 4270ಎಂಎಂ 1780ಎಂಎಂ 1630ಎಂಎಂ
ಜೀಪ್ ಕಂಪಾಸ್ 4395ಎಂಎಂ 1818ಎಂಎಂ 1640ಎಂಎಂ
ಮಹೀಂದ್ರಾ ಎಕ್ಸ್‌ಯುವಿ 500 4585ಎಂಎಂ 1890ಎಂಎಂ 1785ಎಂಎಂ

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಇದಲ್ಲದೇ ಟಾಟಾ ಹ್ಯಾರಿಯರ್ ಕಾರು ಪಡೆಯಲಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‍‍ಪ್ಲೇ, ಮಿರ್ರರ್ ಲಿಂಕ್ ಮತ್ತು ಸ್ಯಾಟ್‌ಲೈಟ್ ನ್ಯಾವಿಗೇಷನ್ ಕನೆಕ್ಟಿವಿಟಿ ಎಂಬ ವೈಶಿಷ್ಟ್ಯತೆಗಳನ್ನು ಸಪೋರ್ಟ್ ಮಾಡಲಿದ್ದು, ಡಬಲ್ ಟ್ಯಾಪ್ ಮಾಡಿದರೆ ರಿವರ್ಸ್ ಕ್ಯಾಮೆರಾ ಸೌಲಭ್ಯ ಜೋಡಣೆ ಮಾಡಿದೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಜೊತೆಗೆ ಕಾರು ಚಾಲನೆಗೆ ಸಹಕಾರಿಯಾಗುವಂತೆ ರೋಡ್, ಆಫ್-ರೋಡ್ ಮತ್ತು ರೈನ್ ಎನ್ನುವ ಚಾಲನಾ ಸೌಲಭ್ಯಗಳನ್ನ ನೀಡಲಾಗಿದ್ದು, ಇವುಗಳು ಸಾಮಾನ್ಯ ಮಾದರಿಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೆ ಆಫ್-ರೋಡ್‌ನಲ್ಲೂ ಉತ್ತಮ ಚಾಲನಾ ಕೌಶಲ್ಯ ಪ್ರದರ್ಶನ ಮಾಡಲಿವೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಕಾರಿನ ವೈಶಿಷ್ಟ್ಯತೆಗಳು

ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಇದರಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ ಹ್ಯಾರಿಯರ್

ಎಸ್‌ಯುವಿ ಕಾರು 2 ಲೀಟರ್ 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಹ್ಯುಂಡೈ‍‍ನಿಂದ ಪಡೆದ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ.

MOST READ: ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕಿನ ವಿಶೇಷತೆ ಏನು?

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

ಕಾರಿನ ಬೆಲೆಗಳು (ಅಂದಾಜು)

ಟಾಟಾ ಸಂಸ್ಥೆಯು ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ. ಹೀಗಾಗಿ ಹೊಸ ಕಾರಿನ ಬೆಲೆಗಳು ರೂ. 13 ಲಕ್ಷದಿಂದ ರೂ. 17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata Harrier Dimensions Revealed: Bigger Than The Hyundai Creta, Mahindra XUV 500 And Jeep Compass!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X