ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ 2019ರಲ್ಲಿ ತಮ್ಮ ಪ್ರಿಮಿಯಂ ಎಸ್‍ಯುವಿ ಹ್ಯಾರಿಯರ್ ಕಾರನ್ನು ಬಿಡುಗಡೆಗೊಳಿಸಲಿದ್ದು, ದಿನಕಳೆದಂತೆ ಈ ಕಾರಿನ ಕುರಿತಾಗಿ ಹೊಸ ಮಾಹಿತಿಗಳು ಕೇಳಿಬರುತ್ತಲೇ ಇದೆ. ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಕಾಲಿಡಲಿರುವ ಈ ಕಾರಿನ ಬಗ್ಗೆ ಇದೀಗ ಮತ್ತೊಂದು ಮಾಹಿತಿ ಬಹಿರಂಗಗೊಂಡಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಮಾಹಿತಿಗಳ ಪ್ರಕಾರ ಟಾಟಾ ಹ್ಯಾರಿಯರ್ ಕಾರು ಹೊಸ ವಿಸ್ಟಿಯೋನ್ ಸಂಸ್ಥೆಯಿಂದ ಪಡೆದ 8.8 ಇಂಚಿನ ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ. ಇಸ್ಟಿಯೋನ್ ಸಂಸ್ಥೆಯು ಹಲವಾರು ವಾಹನ ಸಂಸ್ಥೆಯು ಇನ್ಫೋಟೈನ್ಮೆಂಟ್ ಸಿಸ್ಟಂ, ಮಲ್ಟಿ ಇನ್ಫರ್ಮೇಷನ್ ಡಿಸ್ಪ್ಲೇ ಮತ್ತು ಡಿಜಿಟಲ್ ಇನ್ಟ್ರೂಮೆಂಟ್ ಕ್ಲಸ್ಟರ್ ಉಪಕರಣಗಳನ್ನು ನೀಡುತ್ತಲೆ ಬಂದಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ವಿಸ್ಟಿಯೋನ್ ಸಂಸ್ಥೆಯು ಮಜ್ಡಾ ಮತ್ತು ಫೋರ್ಡ್ ಸಂಸ್ಥೆಗಳಿಗೆ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸುತ್ತಿದ್ದು, ಇದಲ್ಲದೇ ರೇಂಜ್ ರೋವರ್ ಸಂಸ್ಥೆಯ ವೆಲಾರ್ ಎಸ್‍ಯುವಿ ಕಾರಿಗೆ ಡಿಜಿಟಲ್ ಇನ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ನೀಡುತ್ತಿದೆ. ಇದೀಗ ಟಾಟಾ ಹ್ಯಾರಿಯರ್ ಕಾರು ಕೂಡಾ ವಿಸ್ಟಿಯೋನ್ ಸಂಸ್ಥೆದ ಉಪಕರಣವನ್ನು ಪಡೆದುಕೊಂಡಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಜೊತೆಗೆ ಟಾಟಾ ಹ್ಯಾರಿಯರ್ ಕಾರು ಪಡೆಯಲಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‍‍ಪ್ಲೇ, ಮಿರ್ರರ್ ಲಿಂಕ್ ಮತ್ತು ಸ್ಯಾಟಿಲೈಟ್ ನ್ಯಾವಿಗೇಷನ್ ಕನೆಕ್ಟಿವಿಟಿ ಎಂಬ ವೈಶಿಷ್ಟ್ಯತೆಗಳನ್ನು ಸಪೋರ್ಟ್ ಮಾಡಲಿದ್ದು, ಡಬಲ್ ಟ್ಯಾಪ್ ಮಾಡಿದರೆ ರಿವರ್ಸ್ ಕ್ಯಾಮೆರಾ ಕಾಣುತ್ತದೆಯಂತೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಬುಕ್ಕಿಂಗ್ ಶುರು

ಟಾಟಾ ಸಂಸ್ಥೆಯು ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಕಾರಿನ ವೈಶಿಷ್ಟ್ಯತೆಗಳು

ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಜೊತೆಗೆ ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2 ಲೀಟರ್ 4 ಸಿಲೆಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಹ್ಯುಂಡೈ‍‍ನಿಂದ ಪಡೆದ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ.

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹ್ಯಾರಿಯರ್ ಕಾರುಗಳು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata Harrier Infotainment System Details Revealed Ahead Of Launch.
Story first published: Saturday, November 10, 2018, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X