Just In
- 41 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 53 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 57 min ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 1 hr ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು
ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಈಗಾಗಲೇ ಹೊಸ ಪ್ರಯತ್ನದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಹೊಸ ಕಾರು ಮಾದರಿಯೊಂದನ್ನು ಅಭಿವೃದ್ಧಿ ಮಾಡುತ್ತಿದ್ದು, ಜಿನೆವಾದಲ್ಲಿ ನಡೆಯುತ್ತಿರುವ 2018ರ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸುವ ಮೂಲಕ ಇತರೆ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
ಜಿನೆವಾ ಆಟೋ ಮೇಳದಲ್ಲಿ ಟಾಟಾ ಸಂಸ್ಥೆಯು ಪ್ರದರ್ಶನಗೊಳಿಸಿರುವ ಎಲೆಕ್ಟ್ರಿಕ್ ಕಾರು ಕಾಲ್ಪನಿಕ ಸೆಡಾನ್ ಮಾದರಿಯಾಗಿದ್ದು, OMEGA ಆರ್ಕಿಟೆಕ್ಚರ್ ವಿನ್ಯಾಸದೊಂದಿಗೆ ಸಿದ್ದಗೊಳ್ಳುತ್ತಿದೆ.
ಜೊತೆಗೆ ಜನಪ್ರಿಯ ಟೆಸ್ಲಾ ಮಾದರಿಯಲ್ಲೇ ಟಾಟಾ ಕೂಡಾ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿದ್ದು, ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 300ಕಿಮಿ ಮೈಲೇಜ್ ಹಿಂದಿರುಗಿಸಬಲ್ಲವು.
ಈ ಬಗ್ಗೆ ಸ್ವತಃ ಟಾಟಾ ಮೋಟಾರ್ಸ್‌ನ ಎಂಡಿ ಗುಂಟೆರ್ ಬುಟ್ಸ್ಚೆಕ್ ಅವರೇ ಮಾತನಾಡಿದ್ದು, ಇವಿ ಕಾರುಗಳ ಬ್ಯಾಟರಿ ತಂತ್ರಜ್ಞಾನ ಸುಧಾರಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನದಲ್ಲಿದ್ದು, ಸದ್ಯ ಕಾಲ್ಪನಿಕ ಕಾರುಗಳಲ್ಲಿ ಬಳಕೆ ಮಾಡಿರುವ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿಗಳು ಟೆಸ್ಲಾ ಕಾರುಗಳಿಗೆ ಸರಿಸಮನಾಗಿರಲಿವೆ ಎಂದಿದ್ದಾರೆ.
ಇದಲ್ಲದೇ ಟಾಟಾ ಕಾರುಗಳಲ್ಲಿ ಪ್ರತಿ ಚಾರ್ಜಿಂಗ್‌ಗೆ 400 ಕಿಮಿ ಮೈಲೇಜ್ ಒದಗಿಸಬಲ್ಲ ಬ್ಯಾಟರಿ ಆವಿಷ್ಕಾರ ಬಗ್ಗೆಯೂ ಸುಳಿವು ನೀಡಿರುವ ಗುಂಟೆರ್ ಬುಟ್ಸ್ಚೆಕ್, ಬಿಡುಗಡೆಗಾಗಿ ಸಿದ್ದವಾಗಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.
ಇನ್ನು ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ಮುಕ್ತಾಯವಾದ 2018ರ ಆಟೋ ಮೇಳದಲ್ಲೂ ಟಿಯಾಗೋ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು, ಇಇಎಸ್ಎಲ್ ಸಂಸ್ಥೆಗೆ ಸುಮಾರು 10 ಸಾವಿರ ಎಲೆಕ್ಟ್ರಿಕ್ ಟಿಗೋರ್ ಸೆಡಾನ್ ಕಾರುಗಳನ್ನು ಒದಗಿಸುವ ಗುತ್ತಿಗೆಯನ್ನು ಕೂಡಾ ಪಡೆದುಕೊಂಡಿದೆ.
ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಲು ಹವಣಿಸುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ನೀಡಬಲ್ಲ ಬ್ಯಾಟರಿ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ವಿಶೇಷ ಆಸಕ್ತಿ ತೋರುತ್ತಿದೆ.