ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

By Praveen Sannamani

2009ರಲ್ಲಿ ಅಗ್ಗದ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಮೂಲಕ ದೇಶದೆಲ್ಲೆಡೆ ಸಂಚಲನ ಮೂಡಿಸಿ ಕೆಳ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂದೆ ಸರಿಯುವ ಸುಳಿವು ಕೊಟ್ಟಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ನ್ಯಾನೊ ಕಾರಿನ ಮಾರಾಟದಲ್ಲಿ ಸತತ ಕುಸಿತ ಹಾಗೂ ಗ್ರಾಹಕರಿಂದ ಬೇಡಿಕೆ ಕೊರತೆ ಹಿನ್ನೆಲೆ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ ಗುಡ್ ಬೈ ಹೇಳಲು ಸಜ್ಜಾಗಿದ್ದು, ಸದ್ಯದಲ್ಲೇ ನ್ಯಾನೊ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ತಿಂಗಳು ಟಾಟಾ ಮೋಟಾರ್ಸ್ ಸಂಸ್ಥೆಯು ಕೇವಲ 1 ನ್ಯಾನೊ ಕಾರು ಮಾತ್ರ ಮಾರಾಟ ಮಾಡಿದೆ ಎಂದ್ರೆ ನೀವು ನಂಬಲೇಬೇಕು.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಅದರಲ್ಲೂ ಕಳೆದ ತಿಂಗಳಲ್ಲಿನಲ್ಲಿ ಕೇವಲ ಒಂದೇ ಒಂದು ನ್ಯಾನೊ ಕಾರು ಮಾರಾಟವಾಗಿದ್ದು, ನ್ಯಾನೊ ಕಾರಿನ ಕುರಿತು ಯಾವೊಬ್ಬ ಗ್ರಾಹಕನು ಕೂಡಾ ವಿಚಾರಣೆ ಮಾಡುತ್ತಿಲ್ಲ ಎನ್ನುವುದು ವಾಸ್ತವಾಂಶ. ಹೀಗಾಗಿಯೇ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿರುವ ಟಾಟಾ ಸಂಸ್ಥೆಯು ನ್ಯಾನೋ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಸದ್ಯಕ್ಕೆ ಕಾರು ಉತ್ಪಾದನೆಯನ್ನು ಕೈ ಬಿಡದಿರಲು ನಿರ್ಧರಿಸುವ ಟಾಟಾ ಸಂಸ್ಥೆಯು ಮುಂದಿನ ಕೆಲ ತಿಂಗಳವರೆಗೆ ಬೇಡಿಕೆ ಆಧಾರದ ಮೇಲೆ ನ್ಯಾನೋ ಕಾರುಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡಲು ನಿರ್ಧರಿಸಿದ್ದು, ತದನಂತರವಷ್ಟೇ ಕಾರಿನ ಉತ್ಪಾದನೆಯನ್ನು ನಿಲ್ಲಿಸುವ ಯೋಚನೆಯಲ್ಲಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಈ ಬಗ್ಗೆ ಟಾಟಾ ಸನ್ಸ್‌ನ ಪದಚ್ಯುತ ಅಧ್ಯಕ್ಷ ಸೈರಸ್ ಮೆಸ್ತ್ರಿ ಕೂಡಾ ನ್ಯಾನೊ ಉತ್ಪಾದನೆಯನ್ನು ಮುಂದುವರಿಸುತ್ತಿರುವ ಬಗ್ಗೆ ಈ ಹಿಂದೆಯೇ ಅಸಮಾಧಾನಪಡಿಸಿದ್ದಲ್ಲದೇ ನ್ಯಾನೊ ತಯಾರಿಕೆಯೂ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿತ್ತು. ಆದರೂ ಭಾವನಾತ್ಮಕ ಕಾರಣಗಳಿಂದ ನ್ಯಾನೊ ಉತ್ಪಾದನೆಯನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಸದ್ಯದ ಪರಿಸ್ಥಿತಿಯಲ್ಲಿ ನ್ಯಾನೊ ಉತ್ಪಾದನೆಯು ಟಾಟಾ ಸಂಸ್ಥೆಯನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು, ಸತತ ಬೇಡಿಕೆ ಕುಸಿತ ಹಿನ್ನೆಲೆ ಇದೀಗ ಕಾರು ಉತ್ಪಾದನೆಯನ್ನು ಕೈ ಬಿಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಇದರಿಂದ ಮುಂದಿನ ಕೆಲವೇ ತಿಂಗಳ ತನಕ ನ್ಯಾನೋ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಮುಂಗಡ ಪಾವತಿ ನಂತರಷ್ಟೇ ನ್ಯಾನೋ ಕಾರುಗಳನ್ನು ಸಿದ್ದಗೊಳಿಸಲು ನಿರ್ಧರಿಸಿದ್ದು, ನ್ಯಾನೋ ಕಾರುಗಳನ್ನು ಸ್ಟಾಕ್ ಮಾಡದಿರಲು ಈ ಪ್ರಯೋಗ ಕೈಗೊಳ್ಳಲಾಗುತ್ತಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಆಗಲೂ ಬೇಡಿಕೆ ಬರಲಿದ್ದರೇ ವರ್ಷಾಂತ್ಯದ ವೇಳೆಗೆ ಕಾರಿನ ಉತ್ಪಾದನೆಯನ್ನು ನಿಲ್ಲಿಸುವುದು ಅನಿವಾರ್ಯ ಎನ್ನಲಾಗಿದ್ದು, ಇದರ ಬದಲಾಗಿ ಹೊಸ ಉತ್ಪನ್ನಗತ್ತ ಮಾತ್ರವೇ ಗಮನಹರಿಸುವುದು ಒಳಿತು ಎನ್ನುವುದು ಟಾಟಾ ಅಧಿಕಾರಿಗಳ ಲೆಕ್ಕಾಚಾರ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಈ ಮಧ್ಯೆ, ಟಾಟಾ ಮೋಟರ್ಸ್ ಕಂಪೆನಿ ಕೊಯಮತ್ತೂರು ಮೂಲದ ಜಯೇಮ್ ಅಟೊಮೋಟಿವ್ಸ್ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಕಾರಿನ ಉತ್ಪಾದನೆಯಲ್ಲಿ ತೊಡಗಿಕೊಂಡಿರುವುದು ನ್ಯಾನೊ ಯುಗಾಂತ್ಯಕ್ಕೆ ಮೊದಲ ಹೆಜ್ಜೆ ಅಂದ್ರೆ ತಪ್ಪಾಗುದಿಲ್ಲ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಟಾಟಾ ಸಂಸ್ಥೆಯು ಪ್ಯಾಸೆಂಜರ್ ಕಾರುಗಳ ವಿಭಾಗಕ್ಕೆ ಬದಲಾಗಿ ಓಲಾ ಸಂಸ್ಥೆಗಳಿಗೆ ನ್ಯಾನೋ ಎಲೆಕ್ಟ್ರಿಕ್ ಕಾರುಗಳನ್ನು ಪೂರೈಕೆ ಮಾಡಲು ನಿರ್ಧರಿಸಿದ್ದು, ಪ್ರತಿ ಚಾರ್ಜಿಂಗ್‌ಗೆ 120ರಿಂದ 140 ಕಿ.ಮೀ ಮೈಲೇಜ್ ರೇಂಜ್ ಪ್ರೇರಣೆಯ ಬ್ಯಾಟರಿ ಬಳಕೆ ಮಾಡಲಾಗುತ್ತಿದೆ.

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಹೀಗಾಗಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಇದು ಸಾಮಾನ್ಯ ನ್ಯಾನೊ ಉತ್ಪಾದನೆಗೆ ಇನ್ನಷ್ಟು ಹೊಡೆತ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
Read more on tata motors nano
English summary
Tata Nano Production Stopped — To Be Manufactured On Order Basis.
Story first published: Friday, July 13, 2018, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X