ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಕೂಡಾ ಪರಿಚಯಿಸಲಾಗುತ್ತಿದೆ.

By Praveen

Recommended Video

Bangalore Traffic Police Rides With Illegal Number Plate - DriveSpark

ಕಳೆದ ಸಪ್ಟೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಟಾಟಾ ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಕೂಡಾ ಪರಿಚಯಿಸಲಾಗುತ್ತಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಈ ಬಗ್ಗೆ ಸ್ವತಃ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಮುಂದಿನ ತಿಂಗಳು ಫೆಬ್ರುವರಿ 7ರಿಂದ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೆಕ್ಸಾನ್ ಆವೃತ್ತಿಗಳನ್ನು ಪ್ರದರ್ಶನಗೊಳ್ಳಲಿವೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಟಾ ನೆಕ್ಸಾನ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆ ಇದೀಗ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒದಗಿಸಲು ಮುಂದಾಗಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬೇಡಿಕೆಯಿಟ್ಟಿದ್ದು, ಈ ಹಿನ್ನೆಲೆ ಮಹತ್ವದ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಆಟೋ ಎಕ್ಸ್‌ಪೋ ನಂತರ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಇನ್ನು ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಯು ಇಂಪ್ಯಾಕ್ಟ್ ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

Trending On DriveSpark Kannada:

ಆಲ್ಟೋ 800 ಕಾರುಗಳ ಮಧ್ಯೆ ಭೀಕರ ಅಪಘಾತ- ಓರ್ವ ಯುವ ಕ್ರಿಕೆಟರ್ ದುರ್ಮರಣ

ಬಹುನೀರಿಕ್ಷಿತ 2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿಗಾಗಿ ಬುಕ್ಕಿಂಗ್‌‌ ಆರಂಭ

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ನೂತನ ಟಾಟಾ ನೆಕ್ಸಾನ್ ಆವೃತ್ತಿಯು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೊಟ್ರಾನ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಹೊಸತಾದ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಪರಿಚಯಿಸಲಾಗಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಬೆಲೆ (ಬೆಂಗಳೂರು ಎಕ್ಸ್‌ಶೋರಂ)

ಪೆಟ್ರೋಲ್ ಆವೃತ್ತಿಯ ಆರಂಭಿಕ ಕಾರಿನ ಬೆಲೆಯು ರೂ. 5.94 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯು ರೂ8.69 ಲಕ್ಷಕ್ಕೆ ಲಭ್ಯವಿದ್ದರೆ ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 6.85 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯನ್ನು ರೂ.9.54 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಇದಲ್ಲದೇ ನೆಕ್ಸಾನ್ ಮಾದರಿಯ ಮತ್ತಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದ್ದು, ಡ್ಯುಯಲ್-ಫ್ರಂಟ್ ಏರ್ ಬ್ಯಾಗ್ ಮತ್ತು ಆಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ವ್ಯವಸ್ಥೆಯನ್ನು ಹೊಂದಿದೆ.

Trending On DriveSpark Kannada:

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಸದ್ಯದಲ್ಲೇ ಟಾಟಾ ನೆಕ್ಸಾನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಡಿಷನ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಧ್ಯಮ ವರ್ಗದ ಗ್ರಾಹಕರಿಗೆ ಟಾಟಾ ನೆಕ್ಸಾನ್ ಎಸ್‌ಯುವಿ ಒಂದು ಉತ್ತಮ ಆಯ್ಕೆಯಾಗಿದ್ದು, ವರದಿಗಳ ಪ್ರಕಾರ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳು ಸದ್ಯ ಲಭ್ಯವಿರುವ ಆವೃತ್ತಿಗಳಿಂತ ಅಲ್ಪ ಮಟ್ಟಿಗೆ ಬೆಲೆ ಹೆಚ್ಚಳ ಸಾಧ್ಯತೆಗಳಿವೆ ಎನ್ನಲಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Tata Nexon AMT Launch Soon - The Automatic Nexon Debuts At The Auto Expo 2018.
Story first published: Saturday, January 20, 2018, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X