ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಸಂಸ್ಥೆಯು ತನ್ನ ಜನಪ್ರಿಯ ನೆಕ್ಸನಾ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿನ ಟಾಪ್ ಎಂಡ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಪ್ರೇರಿತ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

By Praveen Sannamani

ಟಾಟಾ ಸಂಸ್ಥೆಯು ತನ್ನ ಜನಪ್ರಿಯ ನೆಕ್ಸನಾ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿನ ಟಾಪ್ ಎಂಡ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಪ್ರೇರಿತ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಮಧ್ಯಮ ಗಾತ್ರದ ಎಕ್ಸ್‌ಎಂ ವೆರಿಯೆಂಟ್‌ಗಳಲ್ಲೂ ಆಟೋಮ್ಯಾಟಿಕ್ ವರ್ಷನ್‌ಗಳನ್ನ ಖರೀದಿ ಮಾಡಬಹುದಾಗಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಈ ಹಿಂದೆ ಎಕ್ಸ್‌ಜೆಡ್ಎ ಪ್ಲಸ್ ಆವೃತ್ತಿಯಲ್ಲಿ ಮಾತ್ರವೇ ಎಎಂಟಿ ಸೌಲಭ್ಯವನ್ನು ಪರಿಚಯಿಸಿತ್ತು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ಎಂ ಆವೃತ್ತಿಯಲ್ಲೂ ಎಎಂಟಿ ಜೋಡಣೆ ಮಾಡಲಾಗಿದ್ದು, ಎಕ್ಸ್‌ಎಂ ಆಟೋಮ್ಯಾಟಿಕ್ ಪೆಟ್ರೋಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.50 ಲಕ್ಷ ಬೆಲೆ ಹೊಂದಿದ್ದರೇ ಡೀಸೆಲ್ ಎಕ್ಸ್‌ಎಂ ಆಟೋಮ್ಯಾಟಿಕ್ ವರ್ಷನ್‌ಗಳು ರೂ.8.53 ಲಕ್ಷ ಬೆಲೆ ಪಡೆದುಕೊಂಡಿವೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಮೇಲೆ ಹೇಳಿರುವ ಹಾಗೆ ಟಾಟಾ ನೆಕ್ಸಾನ್ ಎಎಮ್‍‍ಟಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಕ್ಸ್ ಜೆಡ್ಎ+ ಟ್ರಿಮ್ ಆವೃತ್ತಿಯಲ್ಲೂ ಕೂಡ ಲಭ್ಯವಿದೆ. ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರುಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಹಾಗೆಯೇ ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡಾ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಹೀಗಾಗಿ ಹೊಸ ಕಾರುಗಳು ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಎಎಂಟಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ನೆಕ್ಸಾನ್ ಎಕ್ಸ್ಎಂ ವೆರಿಯೆಂಟ್‌ಗಳಲ್ಲಿ ಎಎಂಟಿ ಪರಿಚಯಿಸಿದ ಟಾಟಾ ಮೋಟಾರ್ಸ್

ಇದಲ್ಲದೇ ಟಾಟಾ ಮೋಟಾರ್ಸ್ ಸಂಸ್ಥೆಯು 'ಇಮಾಜಿನೇಟರ್' ಎಂಬ ಕಾರನ್ನು ಗ್ರಾಹಕೀಕರಣ ಮಾಡಿಕೊಳ್ಳಬಹುದಾದ ಪ್ಲಾಟ್‍‍ಫಾರ್ಮ್ ಅನ್ನು ಕೂಡಾ ಬಿಡುಗಡೆಗೊಳಿಸಿದ್ದು, ಇದರಲ್ಲಿ ಗ್ರಾಹಕರು ಆನ್‍‍ಲೈನ್‍ನ ಮುಖಾಂತರವೇ ಕಾರಿನ ಬಿಡಿಭಾಗಗಳನ್ನು ಖರೀದಿ ಮಾಡಬಹುದಾಗಿದೆ.

Most Read Articles

Kannada
English summary
Tata Nexon AMT Launched With Mid-Spec XM Trim; Prices Start At Rs 7.50 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X